ರಾಷ್ಟ್ರೀಯ ಅಂಧರ ಕ್ರಿಕೆಟ್‌: ಕರ್ನಾಟಕ ಚಾಂಪಿಯನ್‌

| Published : Feb 03 2024, 01:49 AM IST

ರಾಷ್ಟ್ರೀಯ ಅಂಧರ ಕ್ರಿಕೆಟ್‌: ಕರ್ನಾಟಕ ಚಾಂಪಿಯನ್‌
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟ್ರೀಯ ಅಂಧ ಪುರುಷರ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಕರ್ನಾಟಕ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಶುಕ್ರವಾರ ನಡೆದ ಫೈನಲ್‌ನಲ್ಲಿ ರಾಜ್ಯ ತಂಡ ಆಂಧ್ರಪ್ರದೇಶ ವಿರುದ್ಧ 9 ವಿಕೆಟ್‌ ಗೆಲುವು ಸಾಧಿಸಿದೆ.

ನಾಗ್ಪುರ: ರಾಷ್ಟ್ರೀಯ ಅಂಧ ಪುರುಷರ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಕರ್ನಾಟಕ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಶುಕ್ರವಾರ ನಡೆದ ಫೈನಲ್‌ನಲ್ಲಿ ರಾಜ್ಯ ತಂಡ ಆಂಧ್ರಪ್ರದೇಶ ವಿರುದ್ಧ 9 ವಿಕೆಟ್‌ ಗೆಲುವು ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ಆಂಧ್ರ 20 ಓವರಲ್ಲಿ 237 ರನ್‌ ಕಲೆಹಾಕಿತು. ದೊಡ್ಡ ಗುರಿ ಬೆನ್ನತ್ತಿದ ಕರ್ನಾಟಕ ಇನ್ನೂ 3 ಎಸೆತ ಬಾಕಿ ಇರುವಂತೆ ಕೇವಲ 1 ವಿಕೆಟ್‌ ನಷ್ಟದಲ್ಲಿ ಜಯಗಳಿಸಿತು. ಸುನಿಲ್‌ ರಮೇಶ್‌ 67 ಎಸೆತಗಳಲ್ಲಿ 149 ರನ್‌ ಸಿಡಿಸಿದರು. ಕರ್ನಾಟಕ ₹1.04 ಲಕ್ಷ, ಆಂಧ್ರ ₹80 ಸಾವಿರ ರು. ನಗದು ಬಹುಮಾನ ಪಡೆದವು.

ಬೆಂಗ್ಳೂರಲ್ಲಿ ಫೆ.12ರಿಂದ

ಅಂ-16 ಟೆನಿಸ್‌ ಟೂರ್ನಿಬೆಂಗಳೂರು: ಅಂಡರ್‌-16 ವಿಭಾಗದ ಎಐಟಿಎ ಚಾಂಪಿಯನ್‌ಶಿಪ್‌ ಸೀರೀಸ್‌ ಟೆನಿಸ್‌ ಟೂರ್ನಿ ಫೆ.12ರಿಂದ 16ರ ವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ. ಕರ್ನಾಟಕ ರಾಜ್ಯ ಲಾನ್‌ ಟೆನಿಸ್‌ ಸಂಸ್ಥೆಯ ಕ್ರೀಡಾಂಗಣದಲ್ಲಿ ಪಂದ್ಯಗಳು ಆಯೋಜನೆಗೊಳ್ಳಲಿವೆ. ಬಾಲಕ, ಬಾಲಕಿಯರ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ.