ರಾಷ್ಟ್ರೀಯ ಕ್ರಾಸ್‌ ಕಂಟ್ರಿ: ರಾಜ್ಯದ ಶಿವಾಜಿ, ವೈಷ್ಣವಿಗೆ ಚಿನ್ನ

| Published : Jan 16 2024, 01:47 AM IST

ರಾಷ್ಟ್ರೀಯ ಕ್ರಾಸ್‌ ಕಂಟ್ರಿ: ರಾಜ್ಯದ ಶಿವಾಜಿ, ವೈಷ್ಣವಿಗೆ ಚಿನ್ನ
Share this Article
  • FB
  • TW
  • Linkdin
  • Email

ಸಾರಾಂಶ

ಬಿಹಾರದ ಗಯಾದಲ್ಲಿ ನಡೆದ 58ನೇ ರಾಷ್ಟ್ರೀಯ ಕ್ರಾಸ್‌ ಕಂಟ್ರಿ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ರಾಜ್ಯದ ಮೂವರು ಪದಕ ಗಳಿಸಿದ್ದಾರೆ.ಡೆರಡು ಚಿನ್ನ ಹಾಗೂ ಒಂದು ಕಂಚಿನ ಪದಕ ರಾಜ್ಯದ ಕ್ರೀಡಾಳುಗಳು ಗೆದ್ದಿದ್ದಾರೆ.

ಗಯಾ (ಬಿಹಾರ್‌): ಇಲ್ಲಿ ನಡೆದ 58ನೇ ರಾಷ್ಟ್ರೀಯ ಕ್ರಾಸ್‌ ಕಂಟ್ರಿ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ರಾಜ್ಯಕ್ಕೆ 3 ಪದಕಗಳು ದೊರಕಿವೆ. ಪುರುಷರ ಅಂಡರ್‌-20 ವಿಭಾಗದ 8 ಕಿ ಮೀ ಓಟದಲ್ಲಿ ಶಿವಾಜಿ ಪಿ.ಎಂ ಅವರು 14 ನಿಮಿಷ 39.00 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಇನ್ನು ಬಾಲಕಿಯರ ಅಂಡರ್‌ 18 ವಿಭಾಗದ 4 ಕಿ ಮೀ ಓಟದಲ್ಲಿ ವೈಷ್ಣವಿ ನಾವಿ 14 ನಿಮಿಷ 39 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಪಡೆದರೆ, ಶಿಲ್ಪಾ ಹೊಸಮನಿ 14 ನಿಮಿಷ 57.00 ಸೆಕೆಂಡ್‌ಗಳಲ್ಲಿ ತಲುಪಿ ಕಂಚಿನ ಪದಕ ಜಯಿಸಿದರು.ಒಲಿಂಪಿಕ್ ಅರ್ಹತಾ ಹಾಕಿ:

ಇಂದು ಭಾರತ vs ಇಟಲಿ

ರಾಂಚಿ: ಇಲ್ಲಿ ನಡೆಯುತ್ತಿರುವ ಒಲಿಂಪಿಕ್ ಅರ್ಹತಾ ಹಾಕಿ ಟೂರ್ನಿಯಲ್ಲಿ ಮಂಗಳವಾರ ಭಾರತ ಮಹಿಳಾ ತಂಡ ಇಟಲಿ ವಿರುದ್ಧ ಸೆಣಸಲಿದ್ದು, ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಮೊದಲ ಪಂದ್ಯದಲ್ಲಿ ವಿಶ್ವ ನಂ.12 ಅಮೆರಿಕ ವಿರುದ್ಧ ಸೋತಿದ್ದ ಭಾರತದ ವನಿತೆಯರು, ಭಾನುವಾರ ನ್ಯೂಜಿಲೆಂಡ್‌ ವಿರುದ್ಧ 3-1ರಿಂದ ಗೆದ್ದು ಸೆಮಿಫೈನಲ್‌ ಪ್ರವೇಶಿಸುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದ್ದರು. ಗುಂಪಿನಲ್ಲಿ ಅಗ್ರ-2 ಸ್ಥಾನ ಪಡೆಯುವ ತಂಡಗಳು ಸೆಮೀಸ್‌ಗೇರಲಿದ್ದು, ಟೂರ್ನಿಯಲ್ಲಿ ಅಗ್ರ-3 ಸ್ಥಾನ ಪಡೆಯುವ ತಂಡಗಳಿಗೆ ಒಲಿಂಪಿಕ್ಸ್‌ಗೆ ಪ್ರವೇಶ ಸಿಗಲಿದೆ.