ರಾಷ್ಟ್ರೀಯ ನೆಟ್‌ಬಾಲ್‌: ರಾಜ್ಯ ತಂಡಗಳಿಗೆ ಕಂಚು

| Published : Feb 01 2024, 02:00 AM IST

ಸಾರಾಂಶ

ಮಧ್ಯಪ್ರದೇಶದಲ್ಲಿ ನಡೆದ ಕಿರಿಯರ ರಾಷ್ಟ್ರೀಯ ನೆಟ್‌ಬಾಲ್‌ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಬಾಲಕ ಹಾಗೂ ಬಾಲಕಿಯರ ತಂಡಗಳು ಕಂಚಿನ ಪದಕ ಗೆದ್ದಿವೆ.

ಬೆಂಗಳೂರು: ಮಧ್ಯಪ್ರದೇಶದಲ್ಲಿ ನಡೆದ ಕಿರಿಯರ ರಾಷ್ಟ್ರೀಯ ನೆಟ್‌ಬಾಲ್‌ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಬಾಲಕ ಹಾಗೂ ಬಾಲಕಿಯರ ತಂಡಗಳು ಕಂಚಿನ ಪದಕ ಗೆದ್ದಿವೆ. 36ನೇ ರಾಷ್ಟ್ರೀಯ ಕೂಟದಲ್ಲಿ ರಾಜ್ಯದ ಬಾಲಕಿಯರ ತಂಡ ಕೇರಳ ಜೊತೆ ಕಂಚಿನ ಪದಕ ಪಡೆದರೆ, 2ನೇ ಆವೃತ್ತಿ ಫಾಸ್ಟ್‌ 5 ಕೂಟದಲ್ಲಿ ರಾಜ್ಯದ ಬಾಲಕರ ತಂಡ ಜಮ್ಮು ಮತ್ತು ಕಾಶ್ಮೀರದ ಜೊತೆಗೆ ಕಂಚಿನ ಪದಕ ತನ್ನದಾಗಿಸಿಕೊಂಡಿತು.

ಹಾಕಿ ಫೈವ್ಸ್‌ ವಿಶ್ವಕಪ್‌:ಭಾರತಕ್ಕೆ 5ನೇ ಸ್ಥಾನಮಸ್ಕಟ್: ಚೊಚ್ಚಲ ಆವೃತ್ತಿ ಎಫ್‌ಎಚ್‌ಐ ಹಾಕಿ ಫೈವ್ಸ್‌ ವಿಶ್ವಕಪ್‌ನಲ್ಲಿ ಭಾರತ 5ನೇ ಸ್ಥಾನಿಯಾಗಿ ಅಭಿಯಾನ ಕೊನೆಗೊಳಿಸಿದೆ. ಬುಧವಾರ ಈಜಿಫ್ಟ್‌ ವಿರುದ್ಧ 5 ಮತ್ತು 6ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಭಾರತ 6-4 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು. ಭಾರತರ ಪರ ಮಣೀಂದರ್‌ ಸಿಂಗ್ 2, ಮೊಹಮದ್‌ ರಾಹೀಲ್‌, ರಾಜ್‌ಭಾರ್‌ ಪವನ್‌, ಮಂದೀಪ್‌, ಉತ್ತಮ್‌ ಸಿಂಗ್‌ ತಲಾ 1 ಗೋಲು ಬಾರಿಸಿದರು. ಮಂಗಳವಾರ ಕ್ವಾರ್ಟರ್‌ ಫೈನಲ್‌ನಲ್ಲಿ ನೆದರ್‌ಲೆಂಡ್ಸ್‌ ವಿರುದ್ಧ 4-7ರಲ್ಲಿ ಸೋತಿದ್ದ ಭಾರತ ಬಳಿಕ ಕ್ರಾಸ್‌ ಓವರ್‌ ಪಂದ್ಯದಲ್ಲಿ ಕೀನ್ಯಾವನ್ನು ಸೋಲಿಸಿತ್ತು.