ಸಾರಾಂಶ
ಅಮಾನತುಗೊಂಡಿರುವ ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್‌ಐ) ಪುಣೆಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಹಿರಿಯರ ಕುಸ್ತಿ ಚಾಂಪಿಯನ್‌ಶಿಪ್‌ನ ಪುರುಷರ ಫ್ರೀಸ್ಟೈಲ್ ವಿಭಾಗದಲ್ಲಿ ಕರ್ನಾಟಕದ ಕುಸ್ತಿಪಟುಗಳು ಒಂದು ಚಿನ್ನ, 3 ಬೆಳ್ಳಿ ಹಾಗೂ 1 ಕಂಚು ಸೇರಿ 5 ಪದಕ ಜಯಿಸಿದ್ದಾರೆ.
ಬೆಂಗಳೂರು: ಅಮಾನತುಗೊಂಡಿರುವ ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್‌ಐ) ಪುಣೆಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಹಿರಿಯರ ಕುಸ್ತಿ ಚಾಂಪಿಯನ್‌ಶಿಪ್‌ನ ಪುರುಷರ ಫ್ರೀಸ್ಟೈಲ್ ವಿಭಾಗದಲ್ಲಿ ಕರ್ನಾಟಕದ ಕುಸ್ತಿಪಟುಗಳು ಒಂದು ಚಿನ್ನ, 3 ಬೆಳ್ಳಿ ಹಾಗೂ 1 ಕಂಚು ಸೇರಿ 5 ಪದಕ ಜಯಿಸಿದ್ದಾರೆ. 97 ಕೆ.ಜಿ. ವಿಭಾಗದಲ್ಲಿ ಸುನೀಲ್.ಪಿ ಚಿನ್ನ, 70 ಕೆ.ಜಿ. ವಿಭಾಗದಲ್ಲಿ ಮಹೇಶ್.ಎಲ್, 79 ಕೆ.ಜಿ. ವಿಭಾಗಲದಲ್ಲಿ ಸದಾಶಿವ. ಎನ್, 86 ಕೆ.ಜಿ. ವಿಭಾಗದಲ್ಲಿ ಗೋಪಾಲ ಬೆಳ್ಳಿ ಜಯಿಸಿದ್ದಾರೆ. 74 ಕೆ.ಜಿ. ವಿಭಾಗದಲ್ಲಿ ರೋಹನ್.ಎನ್ ಕಂಚಿಗೆ ತೃಪ್ತಿಪಟ್ಟಿದ್ದಾರೆ. ಪದಕ ವಿಜೇತರನ್ನು ಕರ್ನಾಟಕ ಕುಸ್ತಿ ಸಂಸ್ಥೆ ಅಧ್ಯಕ್ಷ ಗುಣರಂಜನ್ ಶೆಟ್ಟಿ ಅಭಿನಂದಿಸಿದ್ದಾರೆ. ಭಾರತೀಯ ಒಲಿಂಪಿಕ್ಸ್ ಸಂಸ್ಥೆಯಿಂದ ನೇಮಕಗೊಂಡಿರುವ ಡಬ್ಲ್ಯುಎಫ್‌ಐನ ತಾತ್ಕಾಲಿಕ ಆಡಳಿತ ಸಮಿತಿಯು ಫೆ.2ರಿಂದ 5ರ ವರೆಗೂ ಜೈಪುರದಲ್ಲಿ ರಾಷ್ಟ್ರೀಯ ಚಾಂಪಿಯನ್‌ಶಿಪ್ ನಡೆಸಲಿದ್ದು, ರಾಜ್ಯದ ಕುಸ್ತಿಪಟುಗಳು ಅದರಲ್ಲೂ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.