ರಾಷ್ಟ್ರೀಯ ಸ್ಕೇಟಿಂಗ್ ಚಾಂಪಿಯನ್‌ಶಿಪ್ : ಉತ್ತರ ಪ್ರದೇಶಕ್ಕೆ ಚಿನ್ನ, ಕರ್ನಾಟಕಕ್ಕೆ ಬೆಳ್ಳಿ

| Published : Dec 10 2024, 12:30 AM IST / Updated: Dec 10 2024, 04:14 AM IST

ಸಾರಾಂಶ

ಫೈನಲ್‌ನಲ್ಲಿ ತ್ರಿಶಾ ಮುಂದಾಳತ್ವದ ಕರ್ನಾಟಕ ತಂಡ ಕೊನೆವರೆಗೂ ಹೋರಾಡಿ, 2ನೇ ಸ್ಥಾನ ಸಂಪಾದಿಸುವಲ್ಲಿ ಯಶಸ್ವಿಯಾಯಿತು. ಇನ್ನು ಮಹಾರಾಷ್ಟ್ರ ತಂಡ ಮೂರನೇ ಸ್ಥಾನ ಪಡೆದು ಕಂಚನ್ನು ಪಡೆಯಿತು.

ಬೆಂಗಳೂರು: ನಗರದ ಪವರ್‌ ಟ್ರ್ಯಂಕ್‌ ಸ್ಕೇಟಿಂಗ್ ರಿಂಗ್‌ನಲ್ಲಿ ನಡೆದ ರಾಷ್ಟ್ರೀಯ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಉತ್ತರ ಪ್ರದೇಶ ಚಿನ್ನದ ಪದಕ ಗೆದ್ದಿದ್ದು, ಅತಿಥೇಯ ಕರ್ನಾಟಕ ತಂಡ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿಕೊಂಡಿದೆ. ಫೈನಲ್‌ನಲ್ಲಿ ತ್ರಿಶಾ ಮುಂದಾಳತ್ವದ ಕರ್ನಾಟಕ ತಂಡ ಕೊನೆವರೆಗೂ ಹೋರಾಡಿ, 2ನೇ ಸ್ಥಾನ ಸಂಪಾದಿಸುವಲ್ಲಿ ಯಶಸ್ವಿಯಾಯಿತು. ಇನ್ನು ಮಹಾರಾಷ್ಟ್ರ ತಂಡ ಮೂರನೇ ಸ್ಥಾನ ಪಡೆದು ಕಂಚನ್ನು ಪಡೆಯಿತು.

ಮೈಸೂರಿಗೆ ಕಾಲಿಟ್ಟ ಚಾಂಪಿಯನ್‌ಶಿಪ್

ಬೆಂಗಳೂರಿನಲ್ಲಿ ಮುಕ್ತಾಯಗೊಂಡ 62ನೇ ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಶಿಪ್ ಮೈಸೂರಿನ ರಾವ್ಸ್ ರೋಲರ್ ಸ್ಕೇಟಿಂಗ್ ಅಕಾಡೆಮಿಯಲ್ಲಿ ಆರಂಭಗೊಂಡಿದೆ. ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ (ಕೆಆರ್‌ಎಸ್‌ಎ) ವತಿಯಿಂದ ಇಂದೂಧರ್ ಸೀತಾರಾಮ್ ಅವರ ನೇತೃತ್ವದಲ್ಲಿ ಕ್ರಸಾ ಮತ್ತು ಶ್ರೀಕಂಠ ರಾವ್ ಸ್ಥಳದ ಆತಿಥೇಯರ ತಂಡ ಸ್ಪರ್ಧೆ ಆಯೋಜಿಸುತ್ತಿದೆ. ಈ ಸ್ಪರ್ಧೆಯಲ್ಲಿ 32 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸುಮಾರು 2000 ಕ್ಕೂ ಹೆಚ್ಚು ಕ್ರೀಡಾಪಟುಗಳು ಸ್ಪರ್ಧಿಸುತ್ತಿದ್ದಾರೆ.