ಸಾರಾಂಶ
ಫಿಲ್‌ಲ್ಯಾಂಡ್‌ನಲ್ಲಿ ಚಿನ್ನ ಹೆಕ್ಕಿದ ಭಾರತದ ಜಾವೆಲಿನ್ ಥ್ರೋ ತಾರೆ ನೀರಜ್ ಚೋಪ್ರಾ. 85.97 ಮೀ. ದೂರಕ್ಕೆ ಜಾವೆಲಿನ್ ಎಸೆದು ಮೊದಲ ಸ್ಥಾನ. ಪ್ಯಾರಿಸ್ ಒಲಿಂಪಿಕ್ಸ್‌ಗೆ ಭರ್ಜರಿ ಸಿದ್ಧತೆ.
ಟುರ್ಕು(ಫಿನ್‌ಲ್ಯಾಂಡ್): ಪಾವೋ ನುರ್ಮಿ ಗೇಮ್ಸ್‌ನ ಜಾವೆಲಿನ್ ಥ್ರೋನಲ್ಲಿ ಹಾಲಿ ವಿಶ್ವ ಹಾಗೂ ಒಲಿಂಪಿಕ್ಸ್ ಚಾಂಪಿಯನ್, ಭಾರತದ ನೀರಜ್ ಚೋಪ್ರಾ ಚಿನ್ನದ ಪದಕ ಜಯಿಸಿದ್ದಾರೆ.
ಇದರೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್‌ಗೂ ಮುನ್ನ ಆತ್ಮವಿಶ್ವಾಸ ವೃದ್ಧಿಸಿಕೊಂಡಿದ್ದಾರೆ. ಸಣ್ಣ ಪ್ರಮಾಣದ ಗಾಯದಿಂದ ಚೇತರಿಸಿಕೊಂಡ ಬಳಿಕ ಫಿಟ್ನೆಸ್ ಪರೀಕ್ಷೆಗಾಗಿ ನೀರಜ್ ಈ ಕೂಟದಲ್ಲಿ ಪಾಲ್ಗೊಂಡಿದ್ದರು.85.97 ಮೀ. ದೂರಕ್ಕೆ ಎಸೆದ ನೀರಜ್ ಮೊದಲ ಸ್ಥಾನ ಗಳಿಸಿದರು. 2, 3ನೇ ಸ್ಥಾನ ಫಿನ್‌ಲ್ಯಾಂಡ್ ಅಥ್ಲೀಟ್‌ಗಳ ಪಾಲಾಯಿತು. 84.19 ಮೀ. ದೂರಕ್ಕೆ ಎಸೆದ ಟೋನಿ ಕೆರನೆನ್, 81.30 ಮೀ. ದೂರಕ್ಕೆ ಎಸೆದ ಓಲಿವರ್ ಹೆಲಾಂಡರ್ ಕ್ರಮವಾಗಿ ಬೆಳ್ಳಿ, ಕಂಚು ಗೆದ್ದರು.