ಐಸಿಸಿ ಹಾಲ್‌ ಆಫ್‌ ಫೇಮ್‌ಗೆ ನೀತು ಡೇವಿಡ್‌ ಸೇರ್ಪಡೆ

| Published : Oct 17 2024, 01:34 AM IST

ಸಾರಾಂಶ

ಐಸಿಸಿ ಹಾಲ್‌ ಆಫ್‌ ಫೇಮ್‌ಗೆ ಭಾರತದ ಮಾಜಿ ಆಟಗಾರ್ತಿ ನೀತು ಡೇವಿಡ್‌ ಸೇರ್ಪಡೆ. ಈ ಗೌರವಕ್ಕೆ ಪಾತ್ರರಾದ ಭಾರತದ 2ನೇ ಮಹಿಳಾ ಕ್ರಿಕೆಟರ್‌. ದಕ್ಷಿಣ ಆಫ್ರಿಕಾದ ದಿಗ್ಗಜ ಆಟಗಾರ ಎಬಿ ಡಿ ವಿಲಿಯರ್ಸ್‌, ಇಂಗ್ಲೆಂಡ್‌ನ ದಿಗ್ಗಜ ಆಟಗಾರ ಅಲಿಸ್ಟೈರ್‌ ಕುಕ್‌ ಕೂಡ ಹಾಲ್‌ ಆಫ್‌ ಫೇಮ್‌ಗೆ ಸೇರ್ಪಡೆ.

ದುಬೈ: ಭಾರತದ ಮಾಜಿ ಸ್ಪಿನ್ನರ್‌ ನೀತು ಡೇವಿಡ್‌ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಹಾಲ್‌ ಆಫ್‌ ಫೇಮ್‌ ಪಟ್ಟಿಗೆ ಸೇರ್ಪಡೆಗೊಳಿಸಿದೆ. ಇವರ ಜೊತೆಗೆ ದಿಗ್ಗಜ ಕ್ರಿಕೆಟಿಗರಾದ ದಕ್ಷಿಣ ಆಫ್ರಿಕಾದ ಎಬಿ ಡಿ ವಿಲಿಯರ್ಸ್‌ ಹಾಗೂ ಇಂಗ್ಲೆಂಡ್‌ನ ಅಲಿಸ್ಟೈರ್‌ ಕುಕ್‌ಗೂ ಐಸಿಸಿ ಹಾಲ್‌ ಆಫ್‌ ಫೇಮ್‌ ಗೌರವ ದೊರೆತಿದೆ.

ಟೆಸ್ಟ್‌ ಇನ್ನಿಂಗ್ಸ್‌ನಲ್ಲಿ ಶ್ರೇಷ್ಠ ಬೌಲಿಂಗ್‌ ಪ್ರದರ್ಶನ (8/53) ನೀಡಿದ ವಿಶ್ವ ದಾಖಲೆ ಹೊಂದಿರುವ ನೀತು, ಭಾರತ ಪರ 10 ಟೆಸ್ಟ್‌ ಹಾಗೂ 97 ಏಕದಿನ ಪಂದ್ಯಗಳನ್ನಾಡಿದ್ದು, ಸದ್ಯ ಬಿಸಿಸಿಐ ಹಿರಿಯ ಮಹಿಳೆಯರ ಆಯ್ಕೆ ಸಮಿತಿ ಮುಖ್ಯಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಹಾಲ್‌ ಆಫ್‌ ಫೇಮ್‌ಗೆ ಸೇರ್ಪಡೆಗೊಂಡ ಭಾರತದ ಕೇವಲ 2ನೇ ಮಹಿಳಾ ಕ್ರಿಕೆಟರ್‌ ಎನ್ನುವ ಹಿರಿಮೆಗೆ ನೀತು ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ಶಾಂತಾ ರಂಗಸ್ವಾಮಿಗೆ ಈ ಗೌರವ ಸಿಕ್ಕಿತ್ತು.