ಸಾರಾಂಶ
ಯುವತಿಯೋರ್ವಳ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ದೋಷಿಯಾಗಿರುವ ನೇಪಾಳ ಕ್ರಿಕೆಟ್ ತಂಡದ ಮಾಜಿ ನಾಯಕ ಸಂದೀಪ್ ಲಾಮಿಚ್ಚಾನೆಗೆ ಕಾಠ್ಮಂಡು ಜಿಲ್ಲಾ ನ್ಯಾಯಾಲಯ 8 ವರ್ಷ ಜೈಲು ಶಿಕ್ಷೆ ವಿಧಿಸಿದ್ದು, 3 ಲಕ್ಷ ನೇಪಾಳಿ ರು. ದಂಡ ಹಾಕಿದೆ.
ಕಾಠ್ಮಂಡು: ಯುವತಿಯೋರ್ವಳ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ದೋಷಿಯಾಗಿರುವ ನೇಪಾಳ ಕ್ರಿಕೆಟ್ ತಂಡದ ಮಾಜಿ ನಾಯಕ ಸಂದೀಪ್ ಲಾಮಿಚ್ಚಾನೆಗೆ ಕಾಠ್ಮಂಡು ಜಿಲ್ಲಾ ನ್ಯಾಯಾಲಯ 8 ವರ್ಷ ಜೈಲು ಶಿಕ್ಷೆ ವಿಧಿಸಿದ್ದು, 3 ಲಕ್ಷ ನೇಪಾಳಿ ರು. ದಂಡ ಹಾಕಿದೆ.
ಕಳೆದ ಆಗಸ್ಟ್‌ನಲ್ಲಿ ಯುವತಿಯಿಂದ ಅತ್ಯಾಚಾರ ಆರೋಪ ಕೇಳಿಬಂದ ಬಳಿಕ ಬಂಧನಕ್ಕೆ ಒಳಗಾಗಿದ್ದ ಸಂದೀಪ್, ಜಾಮೀನಿನ ಮೇಲೆ ಹೊರಬಂದಿದ್ದರು. ತೀರ್ಪಿನ ವಿರುದ್ಧ ಹೈಕೋರ್ಟಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಸಂದೀಪ್ ಪರ ವಕೀಲರು ತಿಳಿಸಿದ್ದಾರೆ.
ಏನಿದು ಪ್ರಕರಣ: ನೇಪಾಳ ಕ್ರಿಕೆಟ್ ತಂಡದ ಮಾಜಿ ನಾಯಕ ಸಂದೀಪ್ ಲಾಮಿಚ್ಚಾನೆ ಅತ್ಯಾಚಾರ ಪ್ರಕರಣವೊಂದ ರಲ್ಲಿ ದೋಷಿಯಾಗಿದ್ದಾರೆ. ಕಾಠ್ಮಂಡು ಜಿಲ್ಲಾ ನ್ಯಾಯಾಲಯವು ಅವರಿಗೆ 8 ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಿದೆ. ಕಳೆದ ವರ್ಷ ಅಗಸ್ಟ್‌ನಲ್ಲಿ ಯುವತಿಯೋರ್ವಳು ಮಾಡಿದ ಆರೋಪದಿಂದಾಗಿ ಅವರ ಬಂಧನವಾಗಿತ್ತು, ನಂತರ ಜಾಮೀನ ಪಡೆದು ಹೊರಬಂದಿದ್ದರು.
ತಂಡದಿಂದ ಶೂಟರ್ ಹೊರಕ್ಕೆ!
ನಹದೆಹಲಿ: ಲೈಂಗಿಕ ಕಿರುಕುಳ ಆರೋಪದ ಮೇಲೆ ಭಾರತ ತಂಡದಿಂದ ಶೂಟರ್ ಒಬ್ಬರನ್ನು ಹೊರಹಾಕಲಾಗಿದೆ. ಸದ್ಯ ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಒಲಿಂಪಿಕ್ಸ್ ಅರ್ಹತಾ ಟೂರ್ನಿಯಲ್ಲಿ ಪಾಲ್ಗೊಳ್ಳಬೇಕಿದ್ದ ಶೂಟರ್ ಬದಲಿಗೆ ಬೇರೊಬ್ಬರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಕರಣ ನಡೆದಿರುವುದು ನಿಜ ಎಂದಿರುವ ಭಾರತೀಯ ರೈಫಲ್ ಶೂಟಿಂಗ್ ಸಂಸ್ಥೆಯು, ಶೂಟರ್ ಹೆಸರನ್ನು ಬಹಿರಂಗಪಡಿಸಿಲ್ಲ.