ಪಾಕ್‌ಗೆ ತವರಲ್ಲೇ ಶಾಕ್‌ ಟ್ರೀಟ್ಮೆಂಟ್‌ : ಉದ್ಘಾಟನಾ ಪಂದ್ಯದಲ್ಲಿ ಕಿವೀಸ್‌ ವಿರುದ್ಧ ಸೋಲು

| N/A | Published : Feb 20 2025, 12:45 AM IST / Updated: Feb 20 2025, 04:14 AM IST

ಪಾಕ್‌ಗೆ ತವರಲ್ಲೇ ಶಾಕ್‌ ಟ್ರೀಟ್ಮೆಂಟ್‌ : ಉದ್ಘಾಟನಾ ಪಂದ್ಯದಲ್ಲಿ ಕಿವೀಸ್‌ ವಿರುದ್ಧ ಸೋಲು
Share this Article
  • FB
  • TW
  • Linkdin
  • Email

ಸಾರಾಂಶ

ಚಾಂಪಿಯನ್ಸ್‌ ಟ್ರೋಫಿ. ನ್ಯೂಜಿಲೆಂಡ್‌ಗೆ 60 ರನ್‌ ಜಯ । ಕಿವೀಸ್‌ 320/5. ಪಾಕ್‌ 260ಕ್ಕೆ ಆಲೌಟ್‌. ದೊಡ್ಡ ಗುರಿ ಪಡೆದಿದ್ದ ಪಾಕ್‌ಗೆ ಸ್ಫೋಟಕ ಆರಂಭ ಬೇಕಿತ್ತು. ಅದಕ್ಕೆ ಕಿವೀಸ್‌ ಅವಕಾಶ ಕೊಡಲಿಲ್ಲ.

ಕರಾಚಿ: ಹಾಲಿ ಚಾಂಪಿಯನ್‌ ಪಾಕಿಸ್ತಾನ 9ನೇ ಆವೃತ್ತಿಯ ಚಾಂಪಿಯನ್ಸ್‌ ಟ್ರೋಫಿಯ ಮೊದಲ ಪಂದ್ಯದಲ್ಲೇ ಸೋಲಿನ ಮುಖಭಂಗಕ್ಕೊಳಗಾಗಿದೆ. ಬುಧವಾರ ಮಾಜಿ ಚಾಂಪಿಯನ್‌ ನ್ಯೂಜಿಲೆಂಡ್ ವಿರುದ್ಧ 60 ರನ್‌ ಹೀನಾಯ ಸೋಲು ಕಂಡಿತು. 

ಮೊದಲು ಬ್ಯಾಟ್‌ ಮಾಡಿದ ಕಿವೀಸ್‌, ವಿಲ್‌ ಯಂಗ್‌ ಹಾಗೂ ಟಾಮ್‌ ಲೇಥಮ್‌ ಶತಕದ ನೆರವಿನಿಂದ 5 ವಿಕೆಟ್‌ಗೆ 320 ರನ್‌ ಕಲೆಹಾಕಿತು. ಡೆವೋನ್‌ ಕಾನ್‌ವೇ(10), ವಿಲಿಯಮ್ಸನ್‌(1) ಹಾಗೂ ಡ್ಯಾರಿಲ್‌ ಮಿಚೆಲ್‌(10) ವಿಫಲರಾದರೂ, 4ನೇ ವಿಕೆಟ್‌ಗೆ ಜೊತೆಯಾದ ಯಂಗ್‌-ಲೇಥಮ್‌ 118 ರನ್‌ ಸೇರಿಸಿದರು. ಯಂಗ್‌ 113 ಎಸೆತಗಳಲ್ಲಿ 107 ರನ್‌ ಸಿಡಿಸಿ ನಸೀಂ ಶಾಗೆ ವಿಕೆಟ್‌ ಒಪ್ಪಿಸಿದರೆ, ಕೊನೆವರೆಗೂ ಕ್ರೀಸ್‌ನಲ್ಲಿ ನಿಂತ ಲೇಥಮ್‌ 104 ಎಸೆತಗಳಲ್ಲಿ 118 ರನ್‌ ಗಳಿಸಿದರು. ಗ್ಲೆನ್‌ ಫಿಲಿಪ್ಸ್‌ ಸ್ಫೋಟಕ ಆಟವಾಡಿ 39 ಎಸೆತಗಳಲ್ಲಿ 61 ರನ್‌ ಸಿಡಿಸಿದರು. 

ನಸೀಂ ಶಾ, ಹ್ಯಾರಿಸ್ ರೌಫ್‌ ತಲಾ 2 ವಿಕೆಟ್‌ ಕಿತ್ತರು.ದೊಡ್ಡ ಗುರಿ ಪಡೆದಿದ್ದ ಪಾಕ್‌ಗೆ ಸ್ಫೋಟಕ ಆರಂಭ ಬೇಕಿತ್ತು. ಅದಕ್ಕೆ ಕಿವೀಸ್‌ ಅವಕಾಶ ಕೊಡಲಿಲ್ಲ. ಮೊದಲ 10 ಓವರಲ್ಲಿ ಕೇವಲ 22 ರನ್‌ ಗಳಿಸಿ 2 ವಿಕೆಟ್‌ ನಷ್ಟಕ್ಕೊಳಗಾದ ಪಾಕ್‌, ಬಳಿಕ ಒತ್ತಡದಲ್ಲಿಯೇ ಆಡಿತು. ಬಾಬರ್‌ ಆಜಂ 90 ಎಸೆತಕ್ಕೆ 64, ಆಘಾ ಸಲ್ಮಾನ್‌ 28 ಎಸೆತಕ್ಕೆ 42, ಫಖರ್‌ ಜಮಾನ್‌ 24 ರನ್‌ ಸಿಡಿಸಿ ಔಟಾದರು. ಕೊನೆಯಲ್ಲಿ ಕುಶ್ದಿಲ್‌ ಶಾ(49 ಎಸೆತಗಳಲ್ಲಿ 69) ಅಬ್ಬರಿಸಿದರೂ ತಂಡವನ್ನು ಗೆಲ್ಲಿಸಲಾಗಲಿಲ್ಲ. 47.2 ಓವರ್‌ಗಳಲ್ಲಿ 260 ರನ್‌ ಗಳಿಸಿ ಆಲೌಟಾಯಿತು.ಸ್ಕೋರ್‌: ನ್ಯೂಜಿಲೆಂಡ್‌ 50 ಓವರಲ್ಲಿ 320/5 (ಲೇಥಮ್‌ 118*, ಯಂಗ್‌ 107, ನಸೀಂ 2-64), ಪಾಕಿಸ್ತಾನ 47.2 ಓವರಲ್ಲಿ 260/10 (ಕುಶ್ದಿಲ್‌ 69, ಆಜಂ 64, ಒರೌರ್ಕೆ 3-47 )

03ನೇ ಸೋಲು: ಪಾಕ್‌ ತಂಡ 11 ದಿನಗಳ ಅಂತರದಲ್ಲಿ ನ್ಯೂಜಿಲೆಂಡ್‌ ವಿರುದ್ಧ 3ನೇ ಬಾರಿ ಸೋಲನುಭವಿಸಿತು. ತ್ರಿಕೋನ ಸರಣಿಯಲ್ಲಿ 2 ಬಾರಿ ಸೋತಿತ್ತು.