ಬೆಂಗ್ಳೂರು ಎಫ್‌ಸಿ ಸೇರಿದ ರಾಜ್ಯದ ನಿಖಿಲ್‌ ಪೂಜಾರಿ

| Published : Feb 01 2024, 02:01 AM IST

ಬೆಂಗ್ಳೂರು ಎಫ್‌ಸಿ ಸೇರಿದ ರಾಜ್ಯದ ನಿಖಿಲ್‌ ಪೂಜಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತ ಫುಟ್ಬಾಲ್‌ ತಂಡದ ಡಿಫೆಂಡರ್‌ ನಿಖಿಲ್‌ ಪೂಜಾರಿ ಐಎಸ್‌ಎಲ್‌ನ ಬೆಂಗಳೂರು ಎಫ್‌ಸಿ ತಂಡ ಸೇರ್ಪಡೆಗೊಂಡಿದ್ದಾರೆ. ಅವರೊಂದಿಗೆ 2027-28ನೇ ಆವೃತ್ತಿ ವರೆಗೂ ಒಪ್ಪಂದ ಮಾಡಿಕೊಂಡಿದ್ದಾಗಿ ಬಿಎಫ್‌ಸಿ ಘೋಷಿಸಿದೆ.

ಬೆಂಗಳೂರು: ಭಾರತ ಫುಟ್ಬಾಲ್‌ ತಂಡದ ಡಿಫೆಂಡರ್‌ ನಿಖಿಲ್‌ ಪೂಜಾರಿ ಐಎಸ್‌ಎಲ್‌ನ ಬೆಂಗಳೂರು ಎಫ್‌ಸಿ ತಂಡ ಸೇರ್ಪಡೆಗೊಂಡಿದ್ದಾರೆ. ಅವರೊಂದಿಗೆ 2027-28ನೇ ಆವೃತ್ತಿ ವರೆಗೂ ಒಪ್ಪಂದ ಮಾಡಿಕೊಂಡಿದ್ದಾಗಿ ಬಿಎಫ್‌ಸಿ ಘೋಷಿಸಿದೆ. ನಿಖಿಲ್‌ ಕರ್ನಾಟಕದಲ್ಲೇ ಜನಿಸಿದ್ದರೂ ಮುಂಬೈನ ಕ್ಲಬ್‌ಗಳಲ್ಲಿ ಹೆಚ್ಚಾಗಿ ಆಡಿದ್ದಾರೆ. ಐಎಸ್‌ಎಲ್‌ನ ಪುಣೆ ಸಿಟಿ ಎಫ್‌ಸಿ, ಹೈದರಾಬಾದ್‌ ಎಫ್‌ಸಿ ತಂಡಗಳನ್ನು ಪ್ರತಿನಿಧಿಸಿದ್ದಾರೆ.

ಸೈಲಿಂಗ್‌ ಪಟು ವಿಷ್ಣು

ಒಲಿಂಪಿಕ್ಸ್‌ಗೆ ಅರ್ಹತೆ

ಅಡಿಲೇಡ್‌ (ಆಸ್ಟ್ರೇಲಿಯಾ): ಏಷ್ಯನ್‌ ಗೇಮ್ಸ್‌ನ ಕಂಚು ವಿಜೇತ ವಿಷ್ಣು ಸರವಣನ್‌ ಸತತ 2ನೇ ಬಾರಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಪ್ರಥಮ ಭಾರತೀಯ ಸೈಲಿಂಗ್‌ ಪಟು ಎಂಬ ಖ್ಯಾತಿ ಪಾತ್ರರಾಗಿದ್ದಾರೆ. ಇಲ್ಲಿ ನಡೆದ ಸೈಲಿಂಗ್‌ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಂಡ ವಿಷ್ಣು, ಒಟ್ಟು 152 ಸ್ಪರ್ಧಿಗಳಲ್ಲಿ 26ನೇ ಸ್ಥಾನ ಪಡೆದು ಒಲಿಂಪಿಕ್ಸ್‌ ಟಿಕೆಟ್ ಗಿಟ್ಟಿಸಿಕೊಂಡರು. ವಿಷ್ಣು 2019ರಲ್ಲಿ ಅಂಡರ್‌-21 ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಸಹ ಗೆದ್ದಿದ್ದರು.