ಏಕದಿನ: ವಿಂಡೀಸ್‌ ವಿರುದ್ಧ ಅಸ್ಟ್ರೇಲಿಯಾ ಕ್ಲೀನ್‌ಸ್ವೀಪ್‌

| Published : Feb 07 2024, 01:46 AM IST

ಏಕದಿನ: ವಿಂಡೀಸ್‌ ವಿರುದ್ಧ ಅಸ್ಟ್ರೇಲಿಯಾ ಕ್ಲೀನ್‌ಸ್ವೀಪ್‌
Share this Article
  • FB
  • TW
  • Linkdin
  • Email

ಸಾರಾಂಶ

ಕ್ಸೇವಿಯರ್‌ ಬಾರ್ಟ್ಲೆಟ್‌ ಮಾರಕ ಬೌಲಿಂಗ್‌ ನೆರವಿನಿಂದ ವೆಸ್ಟ್‌ಇಂಡೀಸ್‌ ವಿರುದ್ಧ ಆಸ್ಟ್ರೇಲಿಯಾ 3ನೇ ಏಕದಿನ ಪಂದ್ಯದಲ್ಲಿ 8 ವಿಕೆಟ್‌ ಗೆದ್ದಿದ್ದು, 3 ಏಕದಿನ ಪಂದ್ಯಗಳ ಸರಣಿಯಲ್ಲಿ ಕ್ಲೀನ್‌ಸ್ವೀಪ್‌ ಸಾಧಿಸಿದೆ.

ಕ್ಯಾನ್‌ಬೇರಾ: ಕ್ಸೇವಿಯರ್‌ ಬಾರ್ಟ್ಲೆಟ್‌ ಮಾರಕ ಬೌಲಿಂಗ್‌ ನೆರವಿನಿಂದ ವೆಸ್ಟ್‌ಇಂಡೀಸ್‌ ವಿರುದ್ಧ ಆಸ್ಟ್ರೇಲಿಯಾ 3ನೇ ಏಕದಿನ ಪಂದ್ಯದಲ್ಲಿ 8 ವಿಕೆಟ್‌ ಗೆದ್ದಿದ್ದು, 3 ಏಕದಿನ ಪಂದ್ಯಗಳ ಸರಣಿಯಲ್ಲಿ ಕ್ಲೀನ್‌ಸ್ವೀಪ್‌ ಸಾಧಿಸಿದೆ. ಮೊದಲು ಬ್ಯಾಟ್‌ ಮಾಡಿದ ವಿಂಡೀಸ್‌ 24.1 ಓವರ್‌ಗಳಲ್ಲಿ ಕೇವಲ 86ಕ್ಕೆ ಸರ್ವ ಪತನ ಕಂಡಿತು. ಇದು ಏಕದಿನ ಇತಿಹಾಸದಲ್ಲೇ 5ನೇ ಕನಿಷ್ಠ ರನ್‌. ವಿಂಡೀಸ್‌ನ 8 ಬ್ಯಾಟರ್‌ಗಳು ಎರಡಂಕಿ ದಾಟದೆ ವಿಕೆಟ್‌ ಒಪ್ಪಿಸಿದರು. ಆಸ್ಟ್ರೇಲಿಯಾ 6.5 ಓವರ್‌ಗಳಲ್ಲಿ 2 ವಿಕೆಟ್‌ಗೆ 87 ರನ್‌ ಗಳಿಸಿ ಜಯಗಳಿಸಿತು.

ಏಕದಿನಲ್ಲಿ ಆಸ್ಟ್ರೇಲಿಯಾ1000 ಪಂದ್ಯದ ಮೈಲಿಗಲ್ಲು

ಏಕದಿನ ಕ್ರಿಕೆಟ್​ನಲ್ಲಿ 1000 ಪಂದ್ಯಗಳನ್ನಾಡಿದ ತಂಡಗಳ ಸಾಲಿಗೆ ಆಸ್ಟ್ರೇಲಿಯಾ ಕೂಡ ಸೇರ್ಪಡೆಯಾಗಿದೆ. ಮಂಗಳವಾರ ವೆಸ್ಟ್‌ಇಂಡೀಸ್‌ ವಿರುದ್ಧ ನಡೆದ 3ನೇ ಏಕದಿನ ಪಂದ್ಯ ಆಸೀಸ್‌ನ 1000ನೇ ಪಂದ್ಯ. ಈ ಮೂಲಕ ಸಾವಿರದ ಮೈಲಿಗಲ್ಲು ತಲುಪಿದ 2ನೇ ತಂಡ ಎನಿಸಿಕೊಂಡಿದೆ. ಭಾರತ ಮೊದಲ ತಂಡ. ಆಸ್ಟ್ರೇಲಿಯಾ 1000 ಪಂದ್ಯಗಳಲ್ಲಿ 609ರಲ್ಲಿ ಗೆದ್ದಿದ್ದರೆ, 348ರಲ್ಲಿ ಸೋತಿದೆ. ಭಾರತ ಈ ವರೆಗೂ 1055 ಪಂದ್ಯಗಳನ್ನಾಡಿದ್ದು, 559ರಲ್ಲಿ 443ರಲ್ಲಿ ಪರಾಭವಗೊಂಡಿದೆ. ಪಾಕಿಸ್ತಾನ 970, ಶ್ರೀಲಂಕಾ 912, ವೆಸ್ಟ್‌ಇಂಡೀಸ್‌ 873, ನ್ಯೂಜಿಲೆಂಡ್‌ 824, ಇಂಗ್ಲೆಂಡ್ 797 ಪಂದ್ಯಗಳನ್ನಾಡಿವೆ.