ಐಪಿಎಲ್‌ನಲ್ಲಿ ಪಡಿಕ್ಕಲ್‌ ಸೂಪರ್‌ ಪ್ಲಾಫ್‌: 7 ಪಂದ್ಯದಲ್ಲಿ ಕೇವಲ 38 ರನ್‌!

| Published : May 18 2024, 12:35 AM IST / Updated: May 18 2024, 04:18 AM IST

ಸಾರಾಂಶ

ಶುಕ್ರವಾರ ಮುಂಬೈ ಇಂಡಿಯನ್ಸ್‌ ವಿರುದ್ಧ ಆಡುವ ಅವಕಾಶ ಪಡೆದರೂ ದೇವದತ್‌ ಪಡಿಕ್ಕಲ್‌ ಅವರು ಖಾತೆ ತೆರೆಯಲು ವಿಫಲರಾದರು.

ಮುಂಬೈ: ದೇಸಿ ಟೂರ್ನಿಗಳಲ್ಲಿ ಅಬ್ಬರದ ಪ್ರದರ್ಶನ ನೀಡಿದ್ದ ಕರ್ನಾಟಕ ಬ್ಯಾಟರ್‌ ದೇವದತ್‌ ಪಡಿಕ್ಕಲ್‌ ಈ ಬಾರಿ ಐಪಿಎಲ್‌ನಲ್ಲಿ ಲಖನೌ ಸೂಪರ್‌ ಜೈಂಟ್ಸ್‌ ಪರ ಹೀನಾಯ ಪ್ರದರ್ಶನ ತೋರಿದ್ದಾರೆ. 

ಅವರು ಈ ಬಾರಿ ಟೂರ್ನಿಯಲ್ಲಿ 7 ಪಂದ್ಯಗಳನ್ನಾಡಿದ್ದು, ಕೇವಲ 38 ರನ್‌ ಕಲೆಹಾಕಿದ್ದಾರೆ. ರಾಜಸ್ಥಾನ ರಾಯಲ್ಸ್‌ ವಿರುದ್ಧ ಸೊನ್ನೆಗೆ ಔಟಾಗಿದ್ದ ಅವರು, ಬಳಿಕ ಪಂಜಾಬ್‌ ಕಿಂಗ್ಸ್‌ ವಿರುದ್ಧ 9, ಆರ್‌ಸಿಬಿ ವಿರುದ್ಧ 6, ಗುಜರಾತ್ ಟೈಟಾನ್ಸ್‌ ವಿರುದ್ಧ 7, ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 3 ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ 13 ರನ್‌ ಗಳಿಸಿದ್ದರು. 

ಶುಕ್ರವಾರ ಮುಂಬೈ ಇಂಡಿಯನ್ಸ್‌ ವಿರುದ್ಧ ಆಡುವ ಅವಕಾಶ ಪಡೆದರೂ ಖಾತೆ ತೆರೆಯಲು ವಿಫಲರಾದರು. ಹಲವು ಅವಕಾಶಗಳ ಹೊರತಾಗಿಯೂ ಸತತವಾಗಿ ವಿಫಲರಾಗುತ್ತಿರುವ ದೇವದತ್‌ ಪಡಿಕ್ಕಲ್‌ ಅವರನ್ನು ಮುಂದಿನ ಆವೃತ್ತಿಯ ಐಪಿಎಲ್‌ ಹರಾಜಿಗೂ ಮುನ್ನ ಲಖನೌ ಸೂಪರ್‌ ಜೈಂಟ್ಸ್‌ ತಂಡ ಕೈಬಿಡುವ ಸಾಧ್ಯತೆ ಹೆಚ್ಚಿದೆ. ಕಳೆದ ಬಾರಿ ರಾಜಸ್ಥಾನ ರಾಯಲ್ಸ್‌ ಪರ ಆಡಿದ್ದ ಪಡಿಕ್ಕಲ್‌, 11 ಪಂದ್ಯಗಳಲ್ಲಿ 261 ರನ್‌ ಕಲೆಹಾಕಿದ್ದರು.ಈ ಬಾರಿ ಐಪಿಎಲ್‌ಗೂ ಮುನ್ನ ಅವರು ಕರ್ನಾಟಕ ಹಾಗೂ ಭಾರತ ‘ಎ’ ತಂಡಗಳ ಪರ ಅಭೂತಪೂರ್ವ ಪ್ರದರ್ಶನ ತೋರಿದ್ದರು.