ಹಾರ್ದಿಕ್‌ ಪಾಂಡ್ಯ ಜೊತೆ ಮುಂಬೈನ ಎಲ್ಲಾ ಆಟಗಾರರಿಗೂ ದಂಡ! ಮಯಾಂಕ್‌ ಐಪಿಎಲ್‌ನಿಂದಲೇ ಹೊರಕ್ಕೆ

| Published : May 02 2024, 12:18 AM IST / Updated: May 02 2024, 04:37 AM IST

ಹಾರ್ದಿಕ್‌ ಪಾಂಡ್ಯ ಜೊತೆ ಮುಂಬೈನ ಎಲ್ಲಾ ಆಟಗಾರರಿಗೂ ದಂಡ! ಮಯಾಂಕ್‌ ಐಪಿಎಲ್‌ನಿಂದಲೇ ಹೊರಕ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳವಾರ ಲಖನೌ ವಿರುದ್ಧ ಮುಂಬೈ ನಿಧಾನಗತಿ ಬೌಲ್‌ ಮಾಡಿತ್ತು. ಪಂದ್ಯದಲ್ಲಿ ಮುಂಬೈ 4 ವಿಕೆಟ್‌ಗಳಿಂದ ಸೋಲನುಭವಿಸಿತ್ತು.

ಲಖನೌ: ಈ ಬಾರಿ ಐಪಿಎಲ್‌ನಲ್ಲಿ 2ನೇ ಬಾರಿ ನಿಧಾನಗತಿ ಬೌಲಿಂಗ್‌ ಮೂಲಕ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ ಕಾರಣ ಇಂಪ್ಯಾಕ್ಟ್‌ ಆಟಗಾರ ಸೇರಿ ಮುಂಬೈ ಇಂಡಿಯನ್ಸ್‌ನ ಎಲ್ಲಾ ಆಟಗಾರರಿಗೂ ದಂಡ ವಿಧಿಸಲಾಗಿದೆ. ಮಂಗಳವಾರ ಲಖನೌ ವಿರುದ್ಧ ಮುಂಬೈ ನಿಧಾನಗತಿ ಬೌಲ್‌ ಮಾಡಿತ್ತು. ಹೀಗಾಗಿ ನಾಯಕ ಹಾರ್ದಿಕ್‌ ಪಾಂಡ್ಯಗೆ ₹24 ಲಕ್ಷ ರು. ಹಾಗೂ ಇತರೆಲ್ಲಾ ಆಟಗಾರರಿಗೆ ತಲಾ ₹6 ಲಕ್ಷ ಅಥವಾ ಪಂದ್ಯದ ಸಂಭಾವನೆಯ ಶೇ.25ರಷ್ಟು ದಂಡ ವಿಧಿಸಲಾಗಿದೆ. ಪಂದ್ಯದಲ್ಲಿ ಮುಂಬೈ 4 ವಿಕೆಟ್‌ಗಳಿಂದ ಸೋಲನುಭವಿಸಿತ್ತು.

ಗಾಯಾಳು ವೇಗಿ ಮಯಾಂಕ್‌ ಐಪಿಎಲ್‌ನಿಂದಲೇ ಹೊರಕ್ಕೆ?

ನವದೆಹಲಿ: ಐಪಿಎಲ್‌ನಲ್ಲಿ ತಮ್ಮ ವೇಗದ ಮೂಲಕವೇ ಕ್ರಿಕೆಟ್‌ ಜಗತ್ತಿನ ಗಮನ ಸೆಳೆದಿರುವ ಲಖನೌ ತಂಡದ ಬೌಲರ್‌ ಮಯಾಂಕ್‌ ಯಾದವ್‌ ಕಿಬ್ಬೊಟ್ಟೆಯ ಸ್ನಾಯುಸೆಳೆತಕ್ಕೆ ಒಳಗಾಗಿದ್ದು, ಈ ಬಾರಿ ಟೂರ್ನಿಯಿಂದಲೇ ಹೊರಬೀಳುವ ಸಾಧ್ಯತೆಯಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿದ್ದಾಗಿ ವರದಿಯಾಗಿದೆ.ಆದರೆ ಅವರು ಬಿಸಿಸಿಐ ರಾಷ್ಟ್ರೀಯ ಗುತ್ತಿಗೆ ಪಡೆಯುವ ನಿರೀಕ್ಷೆಯಿದ್ದು, ಹೀಗಾದರೆ ಅವರಿಗೆ ಲಖನೌ ಫ್ರಾಂಚೈಸಿ ಬದಲು ಬಿಸಿಸಿಐ ವೈದ್ಯಕೀಯ ತಂಡ ಚಿಕಿತ್ಸೆ ನೀಡಲಿದೆ. ಮಯಾಂಕ್‌ ಮೊದಲೆರಡು ಪಂದ್ಯಗಳ ಬಳಿಕ ಗಾಯಗೊಂಡು 4 ವಾರಗಳ ಕಾಲ ಐಪಿಎಲ್‌ನಿಂದ ಹೊರಗುಳಿದಿದ್ದರು. ಬಳಿಕ ಮುಂಬೈ ವಿರುದ್ಧ ಪಂದ್ಯಕ್ಕೆ ಮರಳಿದ್ದರೂ ಮತ್ತೆ ಗಾಯಗೊಂಡು ಅರ್ಧದಲ್ಲೇ ಮೈದಾನ ತೊರೆದಿದ್ದರು.