ರಿಷಭ್‌ ಪಂತ್‌ ಸಸ್ಪೆಂಡ್‌: ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಅಲಭ್ಯ

| Published : May 12 2024, 01:19 AM IST / Updated: May 12 2024, 04:24 AM IST

ಸಾರಾಂಶ

ಮಾ.31ರ ಚೆನ್ನೈ, ಏ.3ರ ಕೋಲ್ಕತಾ ಪಂದ್ಯಗಳಲ್ಲೂ ಡೆಲ್ಲಿ ನಿಧಾನಗತಿ ಬೌಲಿಂಗ್‌ ಮಾಡಿತ್ತು. ಹೀಗಾಗಿ ಸದ್ಯ ರಿಷಭ್‌ ಪಂತ್‌ 1 ಪಂದ್ಯದಿಂದ ಅಮಾನತುಗೊಂಡಿದ್ದಾರೆ.

ನವದೆಹಲಿ: 17ನೇ ಆವೃತ್ತಿಯ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡ 3 ಬಾರಿ ನಿಧಾನಗತಿ ಬೌಲಿಂಗ್‌ ಮಾಡಿದ್ದರ ಪರಿಣಾಮ, ತಂಡದ ನಾಯಕ ರಿಷಭ್‌ ಪಂತ್‌ರನ್ನು ಒಂದು ಪಂದ್ಯಕ್ಕೆ ಅಮಾನತುಗೊಳಿಸಲಾಗಿದೆ. ಹೀಗಾಗಿ, ಆರ್‌ಸಿಬಿ ವಿರುದ್ಧ ಭಾನುವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಮಹತ್ವದ ಪಂದ್ಯದಲ್ಲಿ ರಿಷಭ್‌ ಪಂತ್‌ ಅವರು ಆಡುವುದಿಲ್ಲ. ಇದರ ಜೊತೆಗೆ ಪಂತ್‌ಗೆ ಮೇ 7ರ ರಾಜಸ್ಥಾನ ರಾಯಲ್ಸ್‌ ವಿರುದ್ಧ ಪಂದ್ಯದ ಸಂಭಾವನೆಯ ಶೇ.30ರಷ್ಟು ಮೊತ್ತವನ್ನು ದಂಡವಾಗಿ ವಿಧಿಸಲಾಗಿದೆ. ಜೊತೆಗೆ ಇಂಪ್ಯಾಕ್ಟ್‌ ಆಟಗಾರ ಸೇರಿ ತಂಡದ ಎಲ್ಲಾ ಆಟಗಾರರಿಗೆ ತಲಾ ₹12 ಲಕ್ಷ ತಂಡ ವಿಧಿಸಲಾಗಿದೆ. ಮಾ.31ರ ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ಏ.3ರ ಕೋಲ್ಕತಾ ನೈಟ್‌ ರೈಡರ್ಸ್‌ ವಿರುದ್ಧದ ಪಂದ್ಯಗಳಲ್ಲೂ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಧಾನಗತಿ ಬೌಲಿಂಗ್‌ ಮಾಡಿತ್ತು. ಹೀಗಾಗಿ ಸದ್ಯ ರಿಷಭ್‌ ಪಂತ್‌ 1 ಪಂದ್ಯದಿಂದ ಅಮಾನತುಗೊಂಡಿದ್ದಾರೆ.

ನಿಧಾನಗತಿ ಬೌಲಿಂಗ್‌: ಗಿಲ್‌ಗೆ ₹24 ಲಕ್ಷ ದಂಡ 

ಅಹಮದಾಬಾದ್‌: ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ ಗುಜರಾತ್‌ ಟೈಟಾನ್ಸ್‌ ನಿಧಾನಗತಿ ಬೌಲಿಂಗ್‌ ಮಾಡಿದ್ದಕ್ಕೆ ತಂಡದ ನಾಯಕ ಶುಭ್‌ಮನ್‌ ಗಿಲ್‌ ಅವರಿಗೆ 24 ಲಕ್ಷ ರು. ದಂಡ ವಿಧಿಸಲಾಗಿದೆ. ತಂಡದ ಉಳಿದ ಆಟಗಾರರಿಗೆ 6 ಲಕ್ಷ ರು. ಅಥವಾ ಪಂದ್ಯದ ಸಂಭಾವನೆಯ ಶೇ.25ರಷ್ಟು (ಯಾವುದು ಕಡಿಮೆಯೋ ಅದು) ಮೊತ್ತವನ್ನು ದಂಡ ಹಾಕಲಾಗಿದೆ. ಈ ಆವೃತ್ತಿಯಲ್ಲಿ 2ನೇ ಬಾರಿಗೆ ನಿಯಮ ಉಲ್ಲಂಘಿಸಿದ್ದರಿಂದ ಹೆಚ್ಚುವರಿ ದಂಡ ಬಿದ್ದಿದೆ.