ಟೂರ್ನಿಯಲ್ಲಿ ಶೀತಲ್‌ ಮಾತ್ರ ಪ್ಯಾರಾ ಅಥ್ಲೀಟ್‌ ಆಗಿದ್ದರು ಎನ್ನುವುದು ಗಮನಾರ್ಹ. ಎರಡೂ ಕೈಗಳಿಲ್ಲದ 17 ವರ್ಷದ ಶೀತಲ್‌ ಫೈನಲ್‌ನಲ್ಲಿ ಸೋಲನುಭವಿಸಿದರು.

ನವದೆಹಲಿ: ಏಷ್ಯನ್‌ ಪ್ಯಾರಾ ಗೇಮ್ಸ್‌ನ ಚಿನ್ನ ವಿಜೇತ ಭಾರತದ ತಾರಾ ಅಥ್ಲೀಟ್‌ ಶೀತಲ್‌ ದೇವಿ ಖೇಲೋ ಇಂಡಿಯಾ ರಾಷ್ಟ್ರೀಯ ರ್‍ಯಾಂಕಿಂಗ್‌ ಆರ್ಚರಿ ಟೂರ್ನಿಯಲ್ಲಿ ಸಶಕ್ತ ಅಥ್ಲೀಟ್‌ಗಳ ಜೊತೆ ಸ್ಪರ್ಧಿಸಿ ಬೆಳ್ಳಿ ಪದಕ ಗೆದ್ದಿದ್ದಾರೆ.

ಟೂರ್ನಿಯಲ್ಲಿ ಶೀತಲ್‌ ಮಾತ್ರ ಪ್ಯಾರಾ ಅಥ್ಲೀಟ್‌ ಆಗಿದ್ದರು ಎನ್ನುವುದು ಗಮನಾರ್ಹ. ಎರಡೂ ಕೈಗಳಿಲ್ಲದ 17 ವರ್ಷದ ಶೀತಲ್‌ ಫೈನಲ್‌ನಲ್ಲಿ ಹರ್ಯಾಣದ ಏಕ್ತಾ ರಾಣಿ ವಿರುದ್ಧ 138-140 ಅಂಕಗಳಿಂದ ಪರಾಭವಗೊಡು ಬೆಳ್ಳಿಗೆ ತೃಪ್ತಿಪಟ್ಟುಕೊಂಡರು.

ವಿಶ್ವಕಪ್‌ನಲ್ಲಿ ಆಡುವಂತೆ ಮನವೊಲಿಕೆ ಮಾಡುತ್ತಿದ್ರೂ ಒಪ್ಪುತ್ತಿಲ್ಲ ನರೈನ್‌!

ಕೋಲ್ಕತಾ: ಐಪಿಎಲ್‌ನಲ್ಲಿ ಅಭೂತಪೂರ್ವ ಪ್ರದರ್ಶನ ನೀಡುತ್ತಿರುವ ಸುನಿಲ್‌ ನರೈನ್‌ರನ್ನು ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಆಡಿಸಲು ವೆಸ್ಟ್‌ ಇಂಡೀಸ್‌ ತಂಡದ ನಾಯಕ ರೋವ್ಮನ್‌ ಪೊವೆಲ್‌ ಮನವೊಲಿಸುತ್ತಿದ್ದಾರೆ. 

ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರವುಳಿದು ಟಿ20 ಲೀಗ್‌ಗಳ ಮೇಲೆ ಹೆಚ್ಚಿನ ಒಲವು ಹೊಂದಿರುವ ನರೈನ್‌ ಮನವೊಲಿಕೆಗೂ ಒಪ್ಪುತ್ತಿಲ್ಲ ಎಂದು ಗೊತ್ತಾಗಿದೆ. ಈ ಬಗ್ಗೆ ಪೋವೆಲ್‌ ಮಾತನಾಡಿದ್ದು, ‘ನರೈನ್‌ರ ಮನವೊಲಿಸಲು ಕಳೆದ 12 ತಿಂಗಳಿಂದ ಪ್ರಯತ್ನಿಸುತ್ತಿದ್ದೇನೆ. ಆದರೆ ಒಪ್ಪುತ್ತಿಲ್ಲ. ಪೊಲ್ಲಾರ್ಡ್‌, ಬ್ರಾವೋ, ಪೂರನ್‌ ಮೂಲಕವೂ ಪ್ರಯತ್ನಿಸುತ್ತಿದ್ದೇನೆ’ ಎಂದಿದ್ದಾರೆ. 

ನರೈನ್‌ 2019ರಲ್ಲಿ ವಿಂಡೀಸ್‌ ಪರ ಕೊನೆ ಬಾರಿ ಟಿ20 ಆಡಿದ್ದು, ಕಳೆದ ವರ್ಷ ನವೆಂಬರ್‌ನಲ್ಲಿ ಅಂ.ರಾ. ಕ್ರಿಕೆಟ್‌ಗೆ ನಿವೃತ್ತಿ ಪ್ರಕಟಿಸಿದ್ದಾರೆ.