ಸಾರಾಂಶ
ಬೆಂಗಳೂರು: ಈಜಿಪ್ಟ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್ ಪಂದ್ಯಾವಳಿ ಪುರುಷರ ಸಿಂಗಲ್ಸ್‌ನಲ್ಲಿ ಕರ್ನಾಟಕದ ಸಿದ್ದಣ್ಣ ಸಾಹುಕಾರ್ ಚಿನ್ನ ಗೆದ್ದಿದ್ದಾರೆ. ಪುರುಷರ ಡಬಲ್ಸ್‌ನಲ್ಲಿ ಹೇಮಂತ್‌ಕುಮಾರ್ ಜತೆಗೂಡಿ ಕಂಚು ಹಾಗೂ ಮಿಶ್ರ ಡಬಲ್ಸ್‌ನಲ್ಲಿ ಪಲ್ಲವಿ ಕಾಲುವೇಹಳ್ಳಿ ಅವರೊಂದಿಗೆ ಕಂಚು ಸಹ ಗೆದ್ದಿದ್ದಾರೆ. ಮಹಿಳಾ ಸಿಂಗಲ್ಸ್‌ನಲ್ಲಿ ಪಲ್ಲವಿ ಕಂಚು ಜಯಿಸಿದ್ದು, ಡಬಲ್ಸ್‌ನಲ್ಲಿ ಅಲ್ಫಿಯಾ ಜೇಮ್ಸ್‌ರೊಂದಿಗೆ ಕಂಚಿನ ಪದಕ ಗೆದ್ದಿದ್ದಾರೆ.ಹಾಕಿ ಫೈವ್ಸ್ ವಿಶ್ವಕಪ್: ಕ್ವಾರ್ಟರ್‌ಗೆ ಭಾರತಮಸ್ಕತ್: ಎಚ್‌ಎಫ್‌ಐ ಹಾಕಿ ಫೈವ್ಸ್ ವಿಶ್ವಕಪ್ ಪಂದ್ಯಾವಳಿ ಭಾರತ ಪುರುಷರ ತಂಡ ಭರ್ಜರಿ 13-0 ಗೋಲುಗ ಳಿಂದ ಜಯ ಸಾಧಿಸಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದೆ. ಬರೋಬ್ಬರಿ 13 ಗೋಲು ಬಾರಿಸಿದ ಭಾರತೀಯ ಆಟಗಾರರು ಎದುರಾಳಿ ತಂಡಕ್ಕೆ ಒಂದೇ ಒಂದು ಗೋಲು ಬಿಟ್ಟುಕೊಡಲಿಲ್ಲ. ಮಂಜೀತ್ , ಕರ್ನಾಟಕ ರಾಹೀಲ್ ಮೊಹಮದ್, ಮಂದೀಪ್ ಮೋರ್ ತಲಾ 2 ಗೋಲು ಗಳಿಸಿ ಮಿಂಚಿದರು. ಬಿ ಪೋಲ್‌ನಲ್ಲಿರುವ ಭಾರತ ಭಾನುವಾರ ಸ್ವಿಜರ್‌ಲೆಂಡ್ ಗೆದ್ದು, ಮತ್ತೊಂದು ಪಂದ್ಯದಲ್ಲಿ ಈಜಿಪ್ಟ್ ವಿರುದ್ಧ ಪರಾಭವಗೊಂಡಿತ್ತು. ಗುಂಪು ಹಂತದ ಕೊನೆ ಪಂದ್ಯದಲ್ಲಿ ಜಮೈಕಾ ವಿರುದ್ಧ ಗೆದ್ದಿರುವ ಭಾರತ ಕ್ವಾರ್ಟರ್ ಫೈನಲ್‌ನಲ್ಲಿ ನೆದರ್‌ಲೆಂಡ್ಸ್ ವಿರುದ್ಧ ಸೆಣಸಲಿದೆ.