ಪರಿಮ್ಯಾಚ್ ಸ್ಪೋರ್ಟ್ಸ್ ಜೊತೆ ಐಎಸ್‌ಎಲ್‌ ಮಾಜಿ ಚಾಂಪಿಯನ್‌ ಬೆಂಗಳೂರು ಎಫ್‌ಸಿ ಸಹಭಾಗಿತ್ವ

| Published : Apr 15 2024, 01:19 AM IST / Updated: Apr 15 2024, 04:26 AM IST

ಪರಿಮ್ಯಾಚ್ ಸ್ಪೋರ್ಟ್ಸ್ ಜೊತೆ ಐಎಸ್‌ಎಲ್‌ ಮಾಜಿ ಚಾಂಪಿಯನ್‌ ಬೆಂಗಳೂರು ಎಫ್‌ಸಿ ಸಹಭಾಗಿತ್ವ
Share this Article
  • FB
  • TW
  • Linkdin
  • Email

ಸಾರಾಂಶ

ಕಾರ್ಯಕ್ರಮದಲ್ಲಿ ಬಿಎಫ್‌ಸಿ ಗೋಲ್‌ ಕೀಪರ್ ಗುರುಪ್ರೀತ್ ಸಿಂಗ್ ಸಂಧು, ಡಿಫೆಂಡರ್ ಅಲೆಕ್ಸಾಂಡರ್ ಜೊವಾನೊವಿಕ್, ಮಿಡ್‌ ಫೀಲ್ಡರ್ ಜೇವಿ ಹೆರ್ನಾಂಡೆಜ್ ಹಾಗೂ ಇತರರು ಸಂವಾದ ನಡೆಸಿದರು.

ಬೆಂಗಳೂರು: ವಿಶ್ವದ ಅಗ್ರಮಾನ್ಯ ಅಥ್ಲೀಟ್‌ಗಳಿಂದ ಪ್ರೇರಣೆ ಪಡೆದಿರುವ ಉಡುಪುಗಳ ಬ್ರಾಂಡ್ ಪರಿಮ್ಯಾಚ್ ಸ್ಪೋರ್ಟ್ಸ್ ಸಂಸ್ಥೆಯು ಇಂಡಿಯನ್ ಸೂಪರ್ ಲೀಗ್‌ನಲ್ಲಿ ಸ್ಪರ್ಧಿಸುತ್ತಿರುವ. ಭಾರತದ ಮುಂಚೂಣಿ ಫುಟ್ಬಾಲ್ ಕ್ಲಬ್‌ಗಳಲ್ಲಿ ಒಂದಾಗಿರುವ ಬೆಂಗಳೂರು ಎಫ್‌ಸಿ ಜೊತೆ ಒಪ್ಪಂದ ಮಾಡಿಕೊಂಡಿದೆ.

ಇದರ ಭಾಗವಾಗಿ ಇತ್ತೀಚೆಗೆ ಮೀಟ್ ಮತ್ತು ಗ್ರೀಟ್‌ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಬೆಂಗಳೂರಿನ ಸೌತ್ ಯುನೈಟೆಡ್ ಎಫ್‌ಸಿ ಕ್ರೀಡಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬಿಎಫ್‌ಸಿ ತಂಡದ ಗೋಲ್‌ ಕೀಪರ್ ಗುರುಪ್ರೀತ್ ಸಿಂಗ್ ಸಂಧು, ಡಿಫೆಂಡರ್ ಅಲೆಕ್ಸಾಂಡರ್ ಜೊವಾನೊವಿಕ್, ಮಿಡ್‌ ಫೀಲ್ಡರ್ ಜೇವಿ ಹೆರ್ನಾಂಡೆಜ್ ಮತ್ತು ಫಾರ್ವರ್ಡರ್‌ಗಳಾದ ಆಲಿವರ್ ಡ್ರೊಸ್ಟ್ ಮತ್ತು ರಿಯಾನ್ ವಿಲಿಯಮ್ಸ್ ಸೇರಿದಂತೆ ಬೆಂಗಳೂರು ಎಫ್‌ಸಿ ಆಟಗಾರರೊಂದಿಗೆ ಸಂವಾದ ನಡೆಯಿತು.

ಅಭಿಮಾನಿಗಳಿಗೆ ತಮ್ಮ ನೆಚ್ಚಿನ ಬೆಂಗಳೂರು ಎಫ್‌ಸಿ ಆಟಗಾರರೊಂದಿಗೆ ತೊಡಗಿಸಿಕೊಳ್ಳಲು ಮೀಟ್ & ಗ್ರೀಟ್ ಕಾರ್ಯಕ್ರಮ ಅವಕಾಶ ಪೂರೈಸಿತ್ತು. ಅವರು ಮೈದಾನದ ಒಳಗೆ ಮತ್ತು ಹೊರಗಿನ ಅನುಭವಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡರು. ಬೆಂಗಳೂರು ಎಫ್‌ಸಿ ಆಟಗಾರರೊಂದಿಗಿನ ವಿಶೇಷ ತರಬೇತಿ ಕಾರ್ಯಕ್ರಮಗಳಿಗಾಗಿ ಅಭಿಮಾನಿಗಳನ್ನು ಎರಡು ತಂಡಗಳಾಗಿ ವಿಂಗಡಿಸಲಾಗಿತ್ತು. ನಂತರ ಒಂದು ಗಂಟೆಯ ಕಾಲ ಅಥ್ಲೀಟ್‌ಗಳ ಬೆಂಬಲದೊಂದಿಗೆ ಅಭಿಮಾನಿಗಳ ಉತ್ಸಾಹಪೂರ್ಣ ಆಟ ನಡೆಯಿತು. ಭಾಗವಹಿಸಿದ ಎಲ್ಲರಿಗೂ ಕ್ರೀಡಾ ಕಿಟ್‌ಗಳನ್ನು ನೀಡಲಾಯಿತು. ವಿಜೇತ ತಂಡಕ್ಕೆ ಬೆಂಗಳೂರುಎಫ್‌ಸಿ ಆಟಗಾರರು ಸಹಿ ಮಾಡಿದ ಫುಟ್ಬಾಲ್‌ಗಳನ್ನು ಬಹುಮಾನವಾಗಿ ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ಬೆಂಗಳೂರು ಎಫ್‌ಸಿ ರಂಡದ ಭಾರತದಲ್ಲಿ ಫುಟ್ಬಾಲ್ ಭವಿಷ್ಯಕ್ಕಾಗಿ ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡಿತು. ಪ್ರತಿಭೆಗಳನ್ನು ಪೋಷಿಸಲು, ಅವಕಾಶಗಳನ್ನು ಸೃಷ್ಟಿಸಲು ಮತ್ತು ದೇಶದ ಎಲ್ಲೆಡೆ ಕ್ರೀಡೆಯ ಒಟ್ಟಾರೆ ಗುಣಮಟ್ಟ ಹೆಚ್ಚಿಸಲು ತಮ್ಮ ಅಚಲ ಬದ್ಧತೆ ವ್ಯಕ್ತಪಡಿಸಿತು.

ಪರಿಮ್ಯಾಚ್ ಸ್ಪೋರ್ಟ್ಸ್ ಜೊತೆಗಿನ ಒಡನಾಟದ ಕುರಿತು ಪ್ರತಿಕ್ರಿಯಿಸಿದ ಬೆಂಗಳೂರು ಎಫ್‌ಸಿ ವಕ್ತಾರರು, "ಕ್ರೀಡಾ ಉತ್ಕೃಷ್ಟತೆಯ ಹೊಸ ಯುಗವನ್ನು ಬೆಳಗಿಸುತ್ತಿರುವ ಪರಿಮ್ಯಾಚ್ ಸ್ಪೋರ್ಟ್ಸ್‌ನೊಂದಿಗೆ ಪಾಲುದಾರರಾಗಲು ನಾವು ರೋಮಾಂಚನಗೊಂಡಿದ್ದೇವೆ. ಅಭಿಮಾನಿಗಳೊಂದಿಗೆ ತೊಡಗಿಸಿಕೊಳ್ಳಲು ಮತ್ತು ನಮ್ಮ ಬ್ರ್ಯಾಂಡ್ ವ್ಯಾಪ್ತಿಯನ್ನು ವಿಸ್ತರಿಸಲು ನಮ್ಮ ಪ್ರಯತ್ನಗಳಲ್ಲಿ ಈ ಪಾಲುದಾರಿಕೆ ನಿರ್ಣಾಯಕವಾಗಿದೆ. ಅಭಿಮಾನಿಗಳು ಮತ್ತು ಅಥ್ಲೀಟ್‌ಗಳಿಗೆ ಸಮಾನವಾಗಿ, ಈ ಮೈತ್ರಿಯ ಮೂಲಕ ನಾವು ಆಟಗಾರರಿಗೆ ಸಾಟಿಯಿಲ್ಲದ ಬೆಂಬಲವನ್ನು ಒದಗಿಸುವ ಗುರಿಯನ್ನು ಹೊಂದಿದ್ದೇವೆ, ಅಭಿಮಾನಿಗಳಿಗೆ ಗಮನಾರ್ಹ ಅನುಭವಗಳನ್ನು ನೀಡುತ್ತೇವೆ ಮತ್ತು ಕ್ರೀಡಾ ಸಮುದಾಯದ ಬೆಳವಣಿಗೆಗೆ ಕೊಡುಗೆ ನೀಡುತ್ತೇವೆ’ ಎಂದಿದ್ದಾರೆ.

ಪರಿಮ್ಯಾಚ್ ಸ್ಪೋರ್ಟ್ಸ್‌ನೊಂದಿಗೆ ಬೆಂಗಳೂರು ಎಫ್ಸಿಯ ಸಹಯೋಗ ಕುರಿತು ಪ್ರತಿಕ್ರಿಯಿಸಿದ, ಜೆಎಸ್‌ಡಬ್ಲ್ಯೂ ಸ್ಪೋರ್ಟ್ಸ್‌ನ ಮುಖ್ಯ ವಾಣಿಜ್ಯ ಅಧಿಕಾರಿ ಕರಣ್ ಯಾದವ್ ಅವರು, ‘ನಮ್ಮ ಬೆಂಬಲಿಗರೊಂದಿಗೆ ತೊಡಗಿಸಿಕೊಳ್ಳುವ ನಮ್ಮ ಪ್ರಯತ್ನಗಳಲ್ಲಿ ಪರಿಮ್ಯಾಚ್ ಸ್ಪೋರ್ಟ್ಸ್‌ನೊಂದಿಗಿನ ಪಾಲುದಾರಿಕೆ ನಿರ್ಣಾಯಕವಾದುದಾಗಿದೆ. ಈ ಪಾಲುದಾರಿಕೆ ಕುರಿತ ನಾವು ರೋಮಾಂಚನಗೊಂಡಿದೇವೆ. ಕ್ರೀಡಾ ಸಮುದಾಯವನ್ನು ಬೆಳೆಸುವ ಕಾರ್ಯದಲ್ಲಿ ಭಾಗಿಯಾಗಲು ನಾವು ಉತ್ಸುಕರಾಗಿದ್ದೇವೆ. ಅಲ್ಲದೇ ಕ್ಲಬ್‌ನತೆ ನಮ್ಮ ದೃಷ್ಟಿಕೋನ ಪರಿಮ್ಯಾಚ್ ಸ್ಪೋರ್ಟ್ಸ್‌ನೊಂದಿಗೆ ಹೊಂದಿಕೊಳ್ಳುತ್ತದೆ’ ಎಂದರು.