ವಿಶ್ವಕಪ್‌ ವಿಜೇತ ಪ್ಯಾಟ್‌ ಕಮಿನ್ಸ್‌ ಹೆಗಲಿಗೆ ಸನ್‌ರೈಸರ್ಸ್‌ ತಂಡದ ನಾಯಕತ್ವ

| Published : Mar 05 2024, 01:31 AM IST

ಸಾರಾಂಶ

ಕಮಿನ್ಸ್‌ ಅವರು ಮೊದಲ ಸಲ ಐಪಿಎಲ್‌ ತಂಡವನ್ನು ಮುನ್ನಡೆಸಲಿದ್ದಾರೆ. ಈ ಮೊದಲು ಐಪಿಎಲ್‌ನಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್‌ ಹಾಗೂ ಕೋಲ್ಕತಾ ನೈಟ್‌ರೈಡರ್ಸ್‌ ಪರ ಆಡಿದ್ದರು.

ಹೈದರಾಬಾದ್‌: ಆಸ್ಟ್ರೇಲಿಯಾದ ವಿಶ್ವಕಪ್‌ ವಿಜೇತ ನಾಯಕ ಪ್ಯಾಟ್‌ ಕಮಿನ್ಸ್‌ ಮುಂಬರುವ ಐಪಿಎಲ್‌ 17ನೇ ಆವೃತ್ತಿಯಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವನ್ನು ಮುನ್ನಡೆಸಲಿದ್ದಾರೆ. ಕಳೆದ ಆವೃತ್ತಿಯಲ್ಲಿ ದ.ಆಫ್ರಿಕಾದ ಏಡನ್‌ ಮಾರ್ಕ್‌ರಮ್‌ ತಂಡದ ನಾಯಕರಾಗಿದ್ದರು.

30 ವರ್ಷದ ವೇಗದ ಬೌಲಿಂಗ್‌ ಆಲ್ರೌಂಡರನ್ನು ಕಳೆದ ಡಿಸೆಂಬರ್‌ನಲ್ಲಿ ಸನ್‌ರೈಸರ್ಸ್‌ ಬರೋಬ್ಬರಿ 20.50 ಕೋಟಿ ರು. ನೀಡಿ ಹರಾಜಿನಲ್ಲಿ ಖರೀದಿಸಿತ್ತು. ಕಮಿನ್ಸ್‌ ಐಪಿಎಲ್‌ ಇತಿಹಾಸದಲ್ಲೇ 2ನೇ ಅತಿ ದುಬಾರಿ ಆಟಗಾರ ಎನ್ನುವ ಹಿರಿಮೆಗೆ ಪಾತ್ರರಾಗಿದ್ದರು.ಕಮಿನ್ಸ್‌ ಈ ಮೊದಲು ಐಪಿಎಲ್‌ನಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್‌ ಹಾಗೂ ಕೋಲ್ಕತಾ ನೈಟ್‌ರೈಡರ್ಸ್‌ ಪರ ಆಡಿದ್ದರು. ಇದೇ ಮೊದಲ ಬಾರಿಗೆ ಅವರು ತಂಡವೊಂದನ್ನು ಮುನ್ನಡೆಸಲಿದ್ದಾರೆ. ಇನ್ನು, ನಾಯಕತ್ವ ಕಳೆದುಕೊಂಡಿದ್ದಕ್ಕೆ ಟ್ವೀಟರಲ್ಲಿ ಮಾರ್ಕ್‌ರಮ್‌ ಬೇಸರ ವ್ಯಕ್ತಪಡಿಸಿದ್ದಾರೆ.3 ವರ್ಷದಲ್ಲಿ 3ನೇ ನಾಯಕ

2022ರಲ್ಲಿ ಕೇನ್‌ ವಿಲಿಯಮ್ಸನ್‌ರ ನಾಯಕತ್ವದಲ್ಲಿ ಸನ್‌ರೈಸರ್ಸ್‌ 8ನೇ ಸ್ಥಾನ ಪಡೆದಿತ್ತು. 2023ಲ್ಲಿ ಅವರನ್ನು ತಂಡದಿಂದ ಕೈಬಿಟ್ಟು ಮಾರ್ಕ್‌ರಮ್‌ಗೆ ನಾಯಕತ್ವ ನೀಡಲಾಯಿತು. ಆದರೆ 14 ಪಂದ್ಯಗಳಲ್ಲಿ ಸನ್‌ರೈಸರ್ಸ್‌ ಕೇವಲ 4 ಗೆಲುವು ಸಾಧಿಸಿ ನಿರಾಸೆ ಅನುಭವಿಸಿತ್ತು.