ಸ್ವಿಜರ್‌ಲೆಂಡ್‌ನ ಪ್ರಸಿದ್ಧ ಪ್ರವಾಸಿ ತಾಣದಲ್ಲಿ ನೀರಜ್‌ ಚೋಪ್ರಾ ಫೋಟೋ

| Published : Feb 09 2024, 01:45 AM IST / Updated: Feb 09 2024, 09:05 AM IST

ಸ್ವಿಜರ್‌ಲೆಂಡ್‌ನ ಪ್ರಸಿದ್ಧ ಪ್ರವಾಸಿ ತಾಣದಲ್ಲಿ ನೀರಜ್‌ ಚೋಪ್ರಾ ಫೋಟೋ
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಿಜರ್‌ಲೆಂಡ್‌ನ ಜನಪ್ರಿಯ ಪ್ರವಾಸಿ ತಾಣ ಜಂಗ್‌ಫ್ರೌಜೋಚ್ ಐಸ್‌ ಪ್ಯಾಲೆಸ್‌ನಲ್ಲಿ ಒಲಿಂಪಿಕ್ಸ್‌ ಪದಕ ವಿಜೇತ, ಭಾರತದ ತಾರಾ ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾ ಅವರ ಚಿತ್ರವಿರುವ ಫಲಕ ಅಳವಡಿಸಲಾಗಿದೆ.

ಲಾಸೆನ್‌: ಸ್ವಿಜರ್‌ಲೆಂಡ್‌ನ ಜನಪ್ರಿಯ ಪ್ರವಾಸಿ ತಾಣ ಜಂಗ್‌ಫ್ರೌಜೋಚ್ ಐಸ್‌ ಪ್ಯಾಲೆಸ್‌ನಲ್ಲಿ ಒಲಿಂಪಿಕ್ಸ್‌ ಪದಕ ವಿಜೇತ, ಭಾರತದ ತಾರಾ ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾ ಅವರ ಚಿತ್ರವಿರುವ ಫಲಕ ಅಳವಡಿಸಲಾಗಿದೆ. 

ಸ್ವಿಸ್‌ ಪ್ರವಾಸಿ ರಾಯಭಾರಿಯಾಗಿರುವ ನೀರಜ್‌ಗೆ ಈ ಮೂಲಕ ಅಲ್ಲಿನ ಪ್ರವಾಸೋದ್ಯಮ ವಿಶೇಷ ಗೌರವ ಸಲ್ಲಿಸಿದೆ. ಅನಾವರಣ ಸಮಾರಂಭದಲ್ಲಿ ಭಾಗಿಯಾಗಿದ್ದ ನೀರಜ್‌ ಚೋಪ್ರಾ, ತಮ್ಮ ಜಾವೆಲಿನ್‌ ಒಂದನ್ನು ಕೊಡುಗೆಯಾಗಿ ನೀಡಿದ್ದು ಅದನ್ನು ಫಲಕದ ಪಕ್ಕದಲ್ಲಿ ಇಡಲಾಗಿದೆ. 

ಈ ಸ್ಥಳದಲ್ಲಿ ಟೆನಿಸ್‌ ದಂತಕಥೆ ರೋಜರ್‌ ಫೆಡರರ್‌, ಖ್ಯಾತ ಗಾಲ್ಪ್‌ ಆಟಗಾರ ರೋರ್ರಿ ಮೆಕ್‌ಲೊರಿ ಸೇರಿ ಹಲವರ ಚಿತ್ರವಿರುವ ಫಲಕವಿದೆ.

ಡೇವಿಸ್‌ ಕಪ್‌: ಗುಂಪು-1ರಲ್ಲಿ ಭಾರತಕ್ಕೆ ಸ್ವೀಡನ್‌ ಸವಾಲು
ನವದೆಹಲಿ: ಡೇವಿಸ್‌ ಕಪ್‌ ವಿಶ್ವ ಟೆನಿಸ್‌ ಗುಂಪು-1ರಲ್ಲಿ ಭಾರತಕ್ಕೆ ಸ್ವೀಡನ್‌ ಸವಾಲು ಎದುರಾಗಲಿದೆ. ಪಂದ್ಯ ಸೆಪ್ಟೆಂಬರ್‌ನಲ್ಲಿ ಸ್ವೀಡನ್‌ನಲ್ಲೇ ನಡೆಯಲಿದೆ. 

ಇತ್ತೀಚೆಗಷ್ಟೇ ಭಾರತ ತಂಡ ವಿಶ್ವ ಗುಂಪು-1ರ ಪ್ಲೇ-ಆಫ್‌ನಲ್ಲಿ ಪಾಕಿಸ್ತಾನ ವಿರುದ್ಧ 4-0 ಅಂತರದಲ್ಲಿ ಜಯಗಳಿಸಿ, ಗುಂಪು-1ಕ್ಕೆ ಅರ್ಹತೆ ಪಡೆದಿತ್ತು. 

ಅತ್ತ ಸ್ವೀಡನ್‌ ಕ್ವಾಲಿಫೈಯರ್‌ನಲ್ಲಿ ಬ್ರೆಜಿಲ್‌ ವಿರುದ್ಧ 1-3ರಲ್ಲಿ ಸೋತ ಕಾರಣ ವಿಶ್ವ ಗುಂಪು-1ಕ್ಕೆ ಹಿಂಬಡ್ತಿ ಪಡೆದಿದೆ. ಸ್ವೀಡನ್‌ ವಿರುದ್ಧ ಈ ವರೆಗೂ ಭಾರತ 5 ಬಾರಿ ಆಡಿದ್ದು, ಒಮ್ಮೆಯೂ ಗೆದ್ದಿಲ್ಲ.