ಸಾರಾಂಶ
ಮಾ.22ರಿಂದ ಆರಂಭಗೊಳ್ಳಲಿರುವ ಐಪಿಎಲ್ 18ನೇ ಆವೃತ್ತಿಯಲ್ಲಿ ಆಟಗಾರರು ಚೆಂಡಿಗೆ ಎಂಜಲು ಹಾಕಲು ಅವಕಾಶ ನೀಡುವ ಬಗ್ಗೆ ಬಿಸಿಸಿಐ ಚಿಂತನೆ ನಡೆಸಿದೆ.
ನವದೆಹಲಿ: ಮಾ.22ರಿಂದ ಆರಂಭಗೊಳ್ಳಲಿರುವ ಐಪಿಎಲ್ 18ನೇ ಆವೃತ್ತಿಯಲ್ಲಿ ಆಟಗಾರರು ಚೆಂಡಿಗೆ ಎಂಜಲು ಹಾಕಲು ಅವಕಾಶ ನೀಡುವ ಬಗ್ಗೆ ಬಿಸಿಸಿಐ ಚಿಂತನೆ ನಡೆಸಿದೆ. ಈ ಬಗ್ಗೆ ಗುರುವಾರ ನಡೆಯಲಿರುವ ನಾಯಕರ ಸಭೆಯಲ್ಲಿ ಪ್ರಸ್ತಾಪಿಸಲು ಬಿಸಿಸಿಐ ನಿರ್ಧರಿಸಿದ್ದು, ಎಲ್ಲರ ಅಭಿಪ್ರಾಯ ಸಂಗ್ರಹಿಸಿ ತೀರ್ಮಾನ ಕೈಗೊಳ್ಳಲಿದೆ ಎಂದು ತಿಳಿದುಬಂದಿದೆ.
ಕೋವಿಡ್‌ನಿಂದಾಗಿ ಚೆಂಡಿಗೆ ಎಂಜಲು ಹಾಕುವುದನ್ನು ಐಸಿಸಿ ನಿಷೇಧಿಸಿತ್ತು. ಈ ನಿಯಮವನ್ನು ಬಿಸಿಸಿಐ, ಐಪಿಎಲ್‌ನಲ್ಲೂ ಅಳವಡಿಸಿತ್ತು. ಒಂದು ವೇಳೆ ಐಪಿಎಲ್‌ನಲ್ಲಿ ಚೆಂಡಿಗೆ ಎಂಜಲು ಹಾಕಲು ಅನುಮತಿ ನೀಡಿದರೆ, ಐಸಿಸಿ ಸಹ ತನ್ನ ನಿಯಮವನ್ನು ಬದಲಿಸಬೇಕಾಗಬಹುದು ಎಂದು ಹೇಳಲಾಗುತ್ತಿದೆ.