ಅರ್ಜುನ ಪ್ರಶಸ್ತಿ ವಿಜೇತ ಹಾಕಿ ಪಟು, ಭಾರತದ ವರುಣ್‌ ಕುಮಾರ್‌ ಅವರು ತಮ್ಮ ವಿರುದ್ಧ ದಾಖಲಾದ ಪೋಕ್ಸೊ ಪ್ರಕರಣದ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.

ನವದೆಹಲಿ: ಅರ್ಜುನ ಪ್ರಶಸ್ತಿ ವಿಜೇತ ಹಾಕಿ ಪಟು, ಭಾರತದ ವರುಣ್‌ ಕುಮಾರ್‌ ಅವರು ತಮ್ಮ ವಿರುದ್ಧ ದಾಖಲಾದ ಪೋಕ್ಸೊ ಪ್ರಕರಣದ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.

ಯುವತಿಯ ಅತ್ಯಾಚಾರ ಆರೋಪಗಳನ್ನು ಅಲ್ಲಗಳೆದಿರುವ ವರುಣ್‌, ಕೇಸ್‌ ಹಾಕಿ ಬೆದರಿಸುವ ಮೂಲಕ ಹಣ ವಸೂಲಿಗೆ ಮಾಡಿರುವ ಕುತಂತ್ರ ಇದು ಎಂದು ದೂರಿದ್ದಾರೆ. ಅಲ್ಲದೆ ಕಾನೂನ ಸಮರಕ್ಕಾಗಿ ರಾಷ್ಟ್ರೀಯ ತಂಡದಿಂದ ತುರ್ತು ರಜೆ ಪಡೆದಿದ್ದು, ಫೆ.10ರಿಂದ ಆರಂಭಗೊಳ್ಳಲಿರುವ ಎಫ್‌ಎಚ್‌ಐ ಹಾಕಿ ಲೀಗ್‌ನಿಂದ ಹಿಂದಕ್ಕೆ ಸರಿದಿದ್ದಾರೆ.‘ಈ ಪ್ರಕರಣ ತಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಇದು ಸುಳ್ಳು ಆರೋಪ. ಹಣ ಗಳಿಕೆಗಾಗಿ ಕಾನೂನು ದುರ್ಬಕೆ ಮಾಡಿಕೊಳ್ಳಲಾಗುತ್ತಿದೆ ಎಂದು 28 ವರ್ಷದ ವರುಣ್‌ ಆರೋಪಿಸಿದ್ದಾರೆ.

22 ವರ್ಷದ ಯುವತಿಯೋರ್ವಳು 2019ರಲ್ಲಿ ತಾನು ಅಪ್ರಾಪ್ತೆಯಾಗಿದ್ದಾಗ ವರುಣ್‌ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ ಈ ಹಿನ್ನೆಲೆ ವರುಣ್‌ ವಿರುದ್ಧ ಇತ್ತೀಚೆಗಷ್ಟೇ ಬೆಂಗಳೂರಿನ ಜ್ಞಾನಭಾರತಿ ಪೊಲೀಸ್‌ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿತ್ತು.