ರಿಷಭ್‌ ಐಪಿಎಲ್‌ ಆಡುವ ಬಗ್ಗೆ ಪಾಂಟಿಂಗ್‌ ವಿಶ್ವಾಸ

| Published : Feb 08 2024, 01:33 AM IST

ಸಾರಾಂಶ

ರಿಷಭ್‌ ಪಂತ್ ಮುಂಬರುವ ಐಪಿಎಲ್‌ನಲ್ಲಿ ಆಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಕೋಚ್‌ ರಿಕಿ ಪಾಂಟಿಂಗ್‌ ಹೇಳಿದ್ದಾರೆ.

ಮೆಲ್ಬರ್ನ: ರಿಷಭ್‌ ಪಂತ್ ಮುಂಬರುವ ಐಪಿಎಲ್‌ನಲ್ಲಿ ಆಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಕೋಚ್‌ ರಿಕಿ ಪಾಂಟಿಂಗ್‌ ಹೇಳಿದ್ದಾರೆ. ಈ ಕುರಿತು ಮಾಧ್ಯಮವೊಂದಕ್ಕೆ ಮಾಹಿತಿ ನೀಡಿರುವ ಪಾಂಟಿಂಗ್‌, ರಿಷಭ್‌ ವಿಕೆಟ್‌ ಕೀಪಿಂಗ್‌ ಜೊತೆ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯುವುದಾಗಿ ತಿಳಿಸಿದ್ದಾರೆ. ಅವರು 14 ಪಂದ್ಯಗಳಲ್ಲಿ 10 ಪಂದ್ಯಗಳಲ್ಲಿ ಆಡಬಹುದು. ಅವರು ಹೆಚ್ಚು ಪಂದ್ಯ ಆಡಿದಷ್ಟು ನಮಗೆ ಬೋನಸ್‌ ಎಂದು ಹೇಳಿದ್ದಾರೆ. ಇದೇ ವೇಳೆ, ಪಂತ್‌ ಟೂರ್ನಿಯಿಂದ ಹೊರಬಿದ್ದರೆ ಕಳೆದ ಆವೃತ್ತಿಯಲ್ಲಿ ತಂಡ ಮುನ್ನಡೆಸಿದ್ದ ಡೇವಿಡ್‌ ವಾರ್ನರ್‌ ಈ ಬಾರಿಯೂ ತಂಡ ಮುನ್ನಡೆಸಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಅಂ-19 ವಿಶ್ವಕಪ್‌: ಇಂದುಪಾಕ್‌- ಆಸೀಸ್‌ ಸೆಮೀಸ್‌ಬೆನೋನಿ(ದಕ್ಷಿಣ ಆಫ್ರಿಕಾ): ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಿನ ಅಂಡರ್‌-19 ವಿಶ್ವಕಪ್‌ನ 2ನೇ ಸೆಮಿಫೈನಲ್‌ ಗುರುವಾರ ನಡೆಯಲಿದೆ. ಆಸ್ಟ್ರೇಲಿಯಾ ಟೂರ್ನಿಯಲ್ಲಿ 3 ಬಾರಿ, ಪಾಕಿಸ್ತಾನ 2 ಬಾರಿ ಚಾಂಪಿಯನ್‌ ಆಗಿವೆ. ಉಭಯ ತಂಡಗಳೂ ಕೂಡಾ 6ನೇ ಬಾರಿ ಫೈನಲ್‌ಗೇರುವ ನಿರೀಕ್ಷೆಯಲ್ಲಿದೆ. ಎರಡೂ ತಂಡಗಳು ಟೂರ್ನಿಯಲ್ಲಿ ಅಜೇಯವಾಗಿ ಉಳಿದಿದ್ದು, ಸೆಮೀಸ್‌ ಮುಖಾಮುಖಿಯಲ್ಲಿ ಭಾರೀ ಪೈಪೋಟಿ ನಿರೀಕ್ಷಿಸಲಾಗಿದೆ. ಗೆಲ್ಲುವ ತಂಡ ಫೈನಲ್‌ನಲ್ಲಿ ಫೆ.11ರಂದು ಭಾರತದೊಂದಿಗೆ ಪ್ರಶಸ್ತಿಗಾಗಿ ಸೆಣಸಲಿದೆ.