ಸಾರಾಂಶ
ಆಗಸ್ಟ್‌ನಲ್ಲಿ ಫಿಡೆ ಚೆಸ್ ವಿಶ್ವಕಪ್‌ನಲ್ಲಿ ಪ್ರಜ್ಞಾನಂದ ಫೈನಲ್ ಪ್ರವೇಶಿಸಿದ್ದರು. ಪ್ರಜ್ಞಾನಂದ ಚೆಸ್‌ನಲ್ಲಿ ಮಹತ್ವದ ಸಾಧನೆ ಮಾಡಲು ಕಾರಣರಾದ ಅವರ ಪೋಷಕರಿಗೆ ಕಾರು ಉಡುಗೊರೆ ನೀಡುವುದಾಗಿ ಆಗ ಆನಂದ್ ಅವರು ಘೋಷಿಸಿದ್ದರು.
ನವದೆಹಲಿ: ಯುವ ಚೆಸ್ ತಾರೆ ಆರ್.ಪ್ರಜ್ಞಾನಂದಗೆ ಖ್ಯಾತ ಉದ್ಯಮಿ, ಮಹೀಂದ್ರಾ ಗ್ರೂಪ್ ಮುಖ್ಯಸ್ಥ ಆನಂದ್ ಅವರು ದುಬಾರಿ ಎಲೆಕ್ಟ್ರಿಕ್ ಕಾರು ಉಡುಗೊರೆಯಾಗಿ ನೀಡಿದ್ದಾರೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಫಿಡೆ ಚೆಸ್ ವಿಶ್ವಕಪ್‌ನಲ್ಲಿ ಪ್ರಜ್ಞಾನಂದ ಫೈನಲ್ ಪ್ರವೇಶಿಸಿದ್ದರು. ಆಗ ಅವರ ಸಾಧನೆ ಕೊಂಡಾಡಿದ್ದ ಆನಂದ್, ಪ್ರಜ್ಞಾನಂದ ಚೆಸ್‌ನಲ್ಲಿ ಮಹತ್ವದ ಸಾಧನೆ ಮಾಡಲು ಕಾರಣರಾದ ಅವರ ಪೋಷಕರಿಗೆ ಕಾರು ಉಡುಗೊರೆ ನೀಡುವುದಾಗಿ ಘೋಷಿಸಿದ್ದರು. ಮಂಗಳವಾರ ತಮ್ಮ ಪೋಷಕರು ಹಾಗೂ ಅಕ್ಕ ವೈಶಾಲಿ ಜೊತೆ XUV 400 ಕಾರು ಸ್ವೀಕರಿಸುತ್ತಿರುವ ಫೋಟೋವನ್ನು ಪ್ರಜ್ಞಾನಂದ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.ಹಾಕಿ ರ್‍ಯಾಂಕಿಂಗ್: 4ನೇ ಸ್ಥಾನಕ್ಕೆ ಕುಸಿದ ಭಾರತ
ನವದೆಹಲಿ: ಎಫ್‌ಐಎಚ್ ಹಾಕಿ ವಿಶ್ವ ರ್‍ಯಾಂಕಿಂಗ್‌ನಲ್ಲಿ ಭಾರತ ಪುರುಷರ ತಂಡ 4ನೇ ಸ್ಥಾನಕ್ಕೆ ಕುಸಿದಿದೆ. ಒಲಿಂಪಿಕ್ ಅರ್ಹತಾ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಜರ್ಮನಿ ಭಾರತವನ್ನು ಹಿಂದಿಕ್ಕಿ 3ನೇ ಸ್ಥಾನಕ್ಕೇರಿದೆ. ನೆದರ್‌ಲೆಂಡ್ಸ್ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಬೆಲ್ಜಿಯಂ 2ನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ, ಇಂಗ್ಲೆಂಡ್, ಅರ್ಜೆಂಟೀನಾ, ಸ್ಪೇನ್, ಫ್ರಾನ್ಸ್ ನ್ಯೂಜಿಲೆಂಡ್ ಕ್ರಮವಾಗಿ 5ರಿಂದ 10ನೇ ಸ್ಥಾನಗಳಲ್ಲಿವೆ. ಇನ್ನು, ಮಹಿಳೆಯರ ವಿಭಾಗದಲ್ಲಿ ಭಾರತ 9ನೇ ಸ್ಥಾನದಲ್ಲಿ ಮುಂದುವರಿದಿದೆ. ನೆದರ್‌ಲೆಂಡ್ಸ್, ಅರ್ಜೆಂಟೀನಾ, ಜರ್ಮನಿ ಕ್ರಮವಾಗಿ ಮೊದಲ 3 ಸ್ಥಾನಗಳಲ್ಲಿವೆ.