ಸಾರಾಂಶ
ಚೆನ್ನೈ: ಜವಾಹರ್ ಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರುಪೇ ಪ್ರೈಮ್ ವಾಲಿಬಾಲ್ ಲೀಗ್ ನಲ್ಲಿ ಕೊಚ್ಚಿ ಬ್ಲ್ಯು ಸ್ಪೈಕರ್ಸ್ ವಿರುದ್ಧ ಗೆಲುವು ಸಾಧಿಸಿ ವಿಶ್ವಾಸದಿಂದ ಮುನ್ನಡೆದಿರುವ ಬೆಂಗಳೂರು ಟಾರ್ಪಿಡೋಸ್ ಸೋಮವಾರ ಮತ್ತೊಂದು ಹಣಾಹಣಿಗೆ ಸಜ್ಜಾಗಿದೆ.
ಅಹಮದಾಬಾದ್ ಡಿಫೆಂಡರ್ಸ್ ವಿರುದ್ಧ ಬೆಂಗಳೂರು ತಂಡ ಸೆಣಸಲಿದೆ. ಕಳೆದ ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಪುರಸ್ಕಾರ ಪಡೆದ ಟಾರ್ಪಿಡೋಸ್ ನ ಥಾಮಸ್ ಹೆಪ್ಟಿನ್ಸ್ಟಾಲ್ ಮೇಲೆ ನಿರೀಕ್ಷೆ ಭಾರ ಹೆಚ್ಚಿದೆ.
ಬೆಂಗಳೂರು ತಂಡ ಬಲಿಷ್ಠ ರಕ್ಷಣಾ ಕೋಟೆ ಹೊಂದಿದ್ದು, ಸೂಕ್ತ ರಣತಂತ್ರ ಅಳವಡಿಸಿಕೊಂಡು ಮತ್ತೊಂದು ಗೆಲುವಿನತ್ತ ದೃಷ್ಟಿ ಹರಿಸಿದೆ. ಪಂದ್ಯ ರಾತ್ರಿ ೮.೩೦ ಕ್ಕೆ ಆರಂಭವಾಗಲಿದೆ.
ಸಂತೋಷ್ ಟ್ರೋಫಿ: ಇಂದು ರಾಜ್ಯಕ್ಕೆ ಮಣಿಪುರ ಸವಾಲು
ಯೂಪಿಯಾ(ಅರುಣಾಚಲ ಪ್ರದೇಶ): 77ನೇ ಸಂತೋಷ್ ಟ್ರೋಫಿ ರಾಷ್ಟ್ರೀಯ ಫುಟ್ಬಾಲ್ ಟೂರ್ನಿಯ ಫೈನಲ್ ಸುತ್ತಿನಲ್ಲಿ ಹಾಲಿ ಚಾಂಪಿಯನ್ ಕರ್ನಾಟಕ ತಂಡ ಸೋಮವಾರ ಮಣಿಪುರ ವಿರುದ್ಧ ಸೆಣಸಾಡಲಿದೆ. ‘ಬಿ’ ಗುಂಪಿನಲ್ಲಿರುವ ಕರ್ನಾಟಕ ಟೂರ್ನಿಯಲ್ಲಿ 2 ಪಂದ್ಯಗಳನ್ನಾಡಿದ್ದು, ಎರಡರಲ್ಲೂ ಡ್ರಾಗೆ ತೃಪ್ತಿಪಟ್ಟುಕೊಂಡಿದೆ.
ಡೆಲ್ಲಿ ಹಾಗೂ ಮಿಜೋರಾಂ ವಿರುದ್ಧದ ಪಂದ್ಯಗಳು ಡ್ರಾಗೊಂಡಿದ್ದವು. ಟೂರ್ನಿಯಲ್ಲಿ ಮೊದಲ ಗೆಲುವಿನ ನಿರೀಕ್ಷೆಯಲ್ಲಿರುವ ತಂಡ ಸುಧಾರಿತ ಪ್ರದರ್ಶನ ನೀಡಬೇಕಾದ ಅಗತ್ಯವಿದೆ.
ಅತ್ತ ಮಣಿಪುರ ತಂಡ ಆಡಿರುವ 2 ಪಂದ್ಯಗಳಲ್ಲಿ 1ರಲ್ಲಿ ಗೆದ್ದಿದ್ದು, ಮತ್ತೊಂದು ಪಂದ್ಯದಲ್ಲಿ ಡ್ರಾಗೆ ತೃಪ್ತಿಪಟ್ಟುಕೊಂಡಿದೆ.