ಸಾರಾಂಶ
10ನೇ ಆವೃತ್ತಿ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಶುಕ್ರವಾರ ಬೆಂಗಾಲ್ ವಾರಿಯರ್ಸ್ ಹಾಗೂ ಹರ್ಯಾಣ ಸ್ಟೀಲರ್ಸ್ ತಂಡಗಳು ಜಯಭೇರಿ ಬಾರಿಸಿವೆ.
ನವದೆಹಲಿ: 10ನೇ ಆವೃತ್ತಿ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಶುಕ್ರವಾರ ಬೆಂಗಾಲ್ ವಾರಿಯರ್ಸ್ ಹಾಗೂ ಹರ್ಯಾಣ ಸ್ಟೀಲರ್ಸ್ ತಂಡಗಳು ಜಯಭೇರಿ ಬಾರಿಸಿವೆ.ಮೊದಲ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್‌ಗೆ ಮಾಜಿ ಚಾಂಪಿಯನ್ ದಬಾಂಗ್ ಡೆಲ್ಲಿ ವಿರುದ್ಧ 48-35 ಅಂಕಗಳ ಜಯ ಲಭಿಸಿತು. ತಂಡಕ್ಕಿದು 17 ಪಂದ್ಯಗಳಲ್ಲಿ 7ನೇ ಜಯ. ಅತ್ತ ಡೆಲ್ಲಿ 17ರಲ್ಲಿ 5ನೇ ಸೋಲು ಕಂಡಿದ್ದು, ಒಟ್ಟಯ 10 ಜಯದೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲೇ ಇದೆ. ಡೆಲ್ಲಿಯ ಆಶು ಮಲಿಕ್ 17 ಅಂಕ ಗಳಿಸಿದ್ದು ವ್ಯರ್ಥವಾಯಿತು. ಬೆಂಗಾಲ್‌ನ ಮಣೀಂದರ್ 11 ಅಂಕ ಸಂಪಾದಿಸಿದರು.ಮತ್ತೊಂದು ಪಂದ್ಯದಲ್ಲಿ ಗುಜರಾತನ್ನು ಹರ್ಯಾಣ 34-30 ಅಂಕಗಳಿಂದ ರೋಚಕವಾಗಿ ಮಣಿಸಿತು. ಗುಜರಾತ್ 17ರಲ್ಲಿ 9ನೇ ಸೋಲು ಕಂಡರೆ, ಹರ್ಯಾಣ 10ನೇ ಜಯ ದಾಖಲಿಸಿತು. ಹರ್ಯಾಣದ ವಿನಯ್ 9 ಅಂಕ ಗಳಿಸಿದರು.ಇಂದಿನ ಪಂದ್ಯಗಳು: ಯುಪಿ-ಮುಂಬಾ, ರಾತ್ರಿ 8ಕ್ಕೆ, ಡೆಲ್ಲಿ-ಟೈಟಾನ್ಸ್, ರಾತ್ರಿ 9ಕ್ಕೆ