10 ನೇ ಆವೃತ್ತಿ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಗುಜರಾತ್‌ ಜೈಂಟ್ಸ್‌ ತಂಡ ಬೆಂಗಾಲ್‌ ವಾರಿಯರ್ಸ್‌ ಪಂದ್ಯದಲ್ಲಿ 41-32ರಿಂದ ಗೆದ್ದು ಬೀಗಿದೆ. ಆಡಿರುವ 19 ಪಂದ್ಯಗಳಲ್ಲಿ 11ರಲ್ಲಿ ಗೆದ್ದಿರುವ ಜೈಂಟ್ಸ್‌ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ್ದು, ಕ್ವಾಲಿಫೈಯರ್‌ ಸಮೀಪಿಸಿದೆ.

ಕೋಲ್ಕತ್ತಾ: 10 ನೇ ಆವೃತ್ತಿ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಗುಜರಾತ್‌ ಜೈಂಟ್ಸ್‌ ತಂಡ ಬೆಂಗಾಲ್‌ ವಾರಿಯರ್ಸ್‌ ಪಂದ್ಯದಲ್ಲಿ 41-32ರಿಂದ ಗೆದ್ದು ಬೀಗಿದೆ. ಆಡಿರುವ 19 ಪಂದ್ಯಗಳಲ್ಲಿ 11ರಲ್ಲಿ ಗೆದ್ದಿರುವ ಜೈಂಟ್ಸ್‌ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ್ದು, ಕ್ವಾಲಿಫೈಯರ್‌ ಸಮೀಪಿಸಿದೆ. 

ತವರು ಮೈದಾನ ಕೋಲ್ಕತ್ತದಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್‌ ಜೈಂಟ್ಸ್‌ಗೆ ಸಮಬಲದ ಹೋರಾಟ ನೀಡಿದ ಬೆಂಗಾಲ್‌ ವಾರಿಯರ್ಸ್‌ ಮೊದಲಾರ್ಧದಲ್ಲಿ ಕೊಂಚ ಹಿನ್ನಡೆ ಅನುಭವಿಸಿತು. 

ಪಂದ್ಯ ಮುಕ್ತಾಯಕ್ಕೆ 10 ನಿಮಿಷ ಬಾಕಿಯಿರುವಾಗ ಜೈಂಟ್ಸ್‌ ತಂಡವನ್ನು ಆಲೌಟ್‌ ಮಾಡಿ ಕಮ್‌ಬ್ಯಾಕ್‌ ಮಾಡುವ ನಿರೀಕ್ಷೆ ಹುಟ್ಟಿಸಿತಾದರೂ ಜಯದ ದಡ ಸೇರಲು ಸಾಧ್ಯವಾಗಲಿಲ್ಲ. 

ರೈಡರ್‌ ಮಣೀಂದರ್‌ 9, ನಿತಿನ್‌ 11 ಅಂಕ ಗಳಿಸಿ ಹೋರಾಡಿದರೂ ವಿಜಯಲಕ್ಷ್ಮೀ ಒಲಿಯಲಿಲ್ಲ. ದ್ವಿತೀಯಾರ್ಧದಲ್ಲಿ ಅಂಕಗಳ ಅಂತರ ಹೆಚ್ಚಿಸಿಕೊಳ್ಳುತ್ತಾ ಸಾಗಿದ ಜೆಂಟ್ಸ್‌ ಕೊನೆವರಗೂ ಮುನ್ನಡೆ ಕಾಯ್ದುಕೊಂಡು ಜಯ ಒಲಿಸಿಕೊಂಡಿತು. 

ಅದ್ಬುತ ಪ್ರದರ್ಶನ ಮೂಲಕ 5 ಅಂಕ ಪಡೆದ ಡಿಫೆಂಡರ್‌ ಫಜಲ್‌ ಅಟ್ರಾಚಲಿ, ಎದುರಾಳಿ ರೈಡರ್‌ಗಳನ್ನು ಕಟ್ಟಿಹಾಕಿದರು. ರೈಡಿಂಗ್‌ ಮಿಂಚಿದ ಪರ್ತೀಕ್‌ ದಹಿಯಾ 13, ರಾಕೇಶ್‌ 11 ಅಂಕ ಗಳಿಸಿ ಜಯಕ್ಕೆ ನೆರವಾದರು.

ಮತ್ತೊಂದು ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್‌ ತಂಡ ಯುಪಿ ಯೋಧಾಸ್‌ ವಿರುದ್ಧ 50-34ರ ಬೃಹತ್‌ ಅಂತರದಿಂದ ಗೆದ್ದು ಬೀಗಿತು.