ಪ್ರೊ ಕಬಡ್ಡಿ: ಬುಲ್ಸ್‌ನ 8ನೇ ಜಯದಾಸೆಗೆ ಪುಣೆ ತಣ್ಣೀರು

| Published : Feb 08 2024, 01:31 AM IST / Updated: Feb 08 2024, 07:59 AM IST

ಸಾರಾಂಶ

10ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್‌ನ ಪ್ಲೇ-ಆಪ್‌ಗೇರುವ ನಿರೀಕ್ಷೆಯಲ್ಲಿರುವ ಮಾಜಿ ಚಾಂಪಿಯನ್‌ ಬೆಂಗಳೂರಿಗೆ ಮತ್ತೆ ಹಿನ್ನಡೆಯುಂಟಾಗಿದೆ.

ನವದೆಹಲಿ: 10ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್‌ನ ಪ್ಲೇ-ಆಪ್‌ಗೇರುವ ನಿರೀಕ್ಷೆಯಲ್ಲಿರುವ ಮಾಜಿ ಚಾಂಪಿಯನ್‌ ಬೆಂಗಳೂರಿಗೆ ಮತ್ತೆ ಹಿನ್ನಡೆಯುಂಟಾಗಿದೆ. ಟೂರ್ನಿಯ 8ನೇ ಗೆಲುವಿನ ಕನಸಿಗೆ ಬುಧವಾರ ಪುಣೇರಿ ಪಲ್ಟನ್‌ ತಣ್ಣೀರೆರಚಿತು. 

ಬುಲ್ಸ್ ಗೂಳಿಗಳ ಆರ್ಭಟ ಮೆಟ್ಟಿನಿಂದ ಪುಣೆ 40-31 ಅಂಕಗಳಲ್ಲಿ ಜಯಗಳಿಸಿತು.ಬುಲ್ಸ್ 19 ಪಂದ್ಯಗಳಲ್ಲಿ 10ನೇ ಸೋಲು ಕಂಡರೆ, ಈಗಾಗಲೇ ಪ್ಲೇ-ಆಫ್‌ಗೇರಿದ್ದ ಪುಣೇರಿ 18ರಲ್ಲಿ 13 ಜಯದೊಂದಿಗೆ ಮತ್ತೆ ಅಗ್ರಸ್ಥಾನಕ್ಕೇರಿತು.

ಆರಂಭದಲ್ಲೇ ಮುನ್ನಡೆ ಕಾಯ್ದುಕೊಂಡ ಪುಣೆ ಅಂಕಗಳ ಅಂತರವನ್ನು ಹೆಚ್ಚಿಸಿಕೊಳ್ಳುತ್ತಲೇ ಸಾಗಿತು. ಹೆಚ್ಚಿನ ಬೋನಸ್‌ ಅಂಕಗಳನ್ನು ಬಿಟ್ಟುಕೊಟ್ಟಿದ್ದು ಮತ್ತು ತಾರಾ ರೈಡರ್‌ಗಳು ವಿಫಲವಾಗಿದ್ದು ಬುಲ್ಸ್‌ ಸೋಲಿಗೆ ಪ್ರಮುಖ ಕಾರಣವಾಯಿತು. 

ಬುಲ್ಸ್‌ ಪರ ಸುಶೀಲ್‌ 9 ರೈಡ್‌ ಅಂಕ ಗಳಿಸಿದರೆ, ಪರ್ತೀಕ್‌ 6, ರಾಣ್‌ ಸಿಂಗ್‌ ಹಾಗೂ ಸೌರಭ್‌ ತಲಾ ಟ್ಯಾಕಲ್‌ ಅಂಕ ಸಂಪಾದಿಸಿದರು. ಪುಣೆಯ ಅಸ್ಲಮ್‌ ಇನಾಮ್ದಾರ್‌ 11, ಆಕಾಶ್‌ ಶಿಂಧೆ 9, ಮೋಹಿತ್‌ ಗೊಯತ್‌ 7 ಅಂಕ ಪಡೆದು ಪುಣೆ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.ಮತ್ತೊಂದು ಪಂದ್ಯದಲ್ಲಿ, ಪ್ಲೇ-ಆಫ್‌ಗೇರುವ ತವಕದಲ್ಲಿದ್ದ ದಬಾಂಗ್‌ ಡೆಲ್ಲಿಗೆ ಶಾಕ್‌ ನೀಡಿದ ಜೈಪುರ ಪಿಂಕ್‌ ಪ್ಯಾಂಥರ್ಸ್‌ 00-00ರಿಂದ ಜಯ ಗಳಿಸಿತು.