ಪ್ರೊ ಕಬಡ್ಡಿ: ಪ್ಲೇ-ಆಫ್‌ಗೆ ಲಗ್ಗೆ ಇಟ್ಟ ಪುಣೇರಿ ಪಲ್ಟನ್‌

| Published : Feb 06 2024, 01:30 AM IST

ಸಾರಾಂಶ

10ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ಪುಣೇರಿ ಪಲ್ಟನ್‌ ಪ್ಲೇ-ಆಫ್‌ಗೆ ಲಗ್ಗೆ ಇಟ್ಟಿದೆ. ಸೋಮವಾರ ದಬಾಂಗ್‌ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ 30-30 ಅಂಕಗಳಿಂದ ಟೈ ಸಾಧಿಸಿದ ಪುಣೇರಿ ತಂಡ, ಟೂರ್ನಿಯ 2ನೇ ತಂಡವಾಗಿ ಪ್ಲೇ-ಆಫ್‌ಗೇರಿತು.

ನವದೆಹಲಿ: 10ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ಪುಣೇರಿ ಪಲ್ಟನ್‌ ಪ್ಲೇ-ಆಫ್‌ಗೆ ಲಗ್ಗೆ ಇಟ್ಟಿದೆ. ಸೋಮವಾರ ದಬಾಂಗ್‌ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ 30-30 ಅಂಕಗಳಿಂದ ಟೈ ಸಾಧಿಸಿದ ಪುಣೇರಿ ತಂಡ, ಟೂರ್ನಿಯ 2ನೇ ತಂಡವಾಗಿ ಪ್ಲೇ-ಆಫ್‌ಗೇರಿತು. ಜೈಪುರ ಪ್ಲೇ-ಆಫ್‌ಗೇರಿದ ಮೊದಲ ತಂಡ. ಪುಣೆ 17 ಪಂದ್ಯಗಳಲ್ಲಿ 12 ಜಯದೊಂದಿಗೆ 71 ಅಂಕ ಸಂಪಾದಿಸಿದ್ದು, ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಡೆಲ್ಲಿ 19 ಪಂದ್ಯಗಳಲ್ಲಿ 11 ಗೆಲುವಿನೊಂದಿಗೆ 68 ಅಂಕಗಳಿಸಿ 3ನೇ ಸ್ಥಾನದಲ್ಲಿದೆ.ಆರಂಭದಲ್ಲಿ ಡೆಲ್ಲಿ ಮೇಲುಗೈ ಸಾಧಿಸಿ, ಮೊದಲಾರ್ಧಕ್ಕೆ 18-10 ಅಂಕಗಳ ಮುನ್ನಡೆಯಲ್ಲಿತ್ತು. ಆದರೆ ಬಳಿಕ ಪುಟಿದೆದ್ದ ಪುಣೆ ಕೊನೆ ಕ್ಷಣದಲ್ಲಿ ಚುರುಕಿನ ರೈಡ್‌, ಬಲಿಷ್ಠ ಡಿಫೆನ್ಸ್‌ ಮೂಲಕ ಸತತ ಅಂಕ ಸಂಪಾದಿಸಿ ಸೋಲು ತಪ್ಪಿಸಿಕೊಂಡಿತು.

ಸೋಮವಾರದ ಮತ್ತೊಂದು ಪಂದ್ಯದಲ್ಲಿ ಜೈಪುರ ಪಿಂಕ್‌ ಪ್ಯಾಂಥರ್ಸ್‌ ವಿರುದ್ಧ ಪಾಟ್ನಾ ಪೈರೇಟ್ಸ್‌ 36-33 ಅಂಕಗಳಿಂದ ಗೆಲುವು ಸಾಧಿಸಿತು.

ಇಂದಿನ ಪಂದ್ಯ: ತಮಿಳ್‌ ತಲೈವಾಸ್‌-ಯುಪಿ ಯೋಧಾಸ್‌, ರಾತ್ರಿ 8ಕ್ಕೆ