ಸಾರಾಂಶ
ಮುಂಬೈ: 10ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ತಮಿಳ್ ತಲೈವಾಸ್ ಸೋಲಿನ ಸುಳಿಯಿಂದ ಹೊರಬಂದಿದೆ. ಸತತ 7 ಸೋಲುಗಳಿಂದ ಕಂಗೆಟ್ಟಿದ್ದ ತಲೈವಾಸ್, ಬುಧವಾರ ಯು.ಪಿ.ಯೋಧಾಸ್ ವಿರುದ್ಧ 46-27 ಅಂಕಗಳ ಅಂತರದಲ್ಲಿ ಗೆದ್ದು ಸಂಭ್ರಮಿಸಿತು.
10ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ಯುಪಿ ಯೋಧಾಸ್ ವಿರುದ್ಧ ತಮಿಳ್ ತಲೈವಾಸ್ 46-27ರಿಂದ ಗೆಲುವು ಸಾಧಿಸಿದೆ. ಸತತ 7 ಸೋಲುಗಳ ಬಳಿಕ ತಲೈವಾಸ್ ಜಯ ಸಿಕ್ಕಿದೆ.
ಯುವ ರೈಡರ್ ನರೇಂದರ್‌ರ ಸೂಪರ್-10 (14 ಅಂಕ) ಸಾಹಸ, ತಲೈವಾಸ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿತು. ಅಜಿಂಕ್ಯ ಪವಾರ್ (5 ಅಂಕ), ಸಾಗರ್ ರಾಠಿ (6 ಅಂಕ), ಸಾಹಿಲ್ (05 ಅಂಕ) ತಂಡಕ್ಕೆ ಉಪಯಕ್ತ ಕೊಡುಗೆ ನೀಡಿದರು.
ಮೊದಲಾರ್ಧದಲ್ಲಿ ಸಾಧಿಸಿದ ಮುನ್ನಡೆಯಿಂದ ಆತ್ಮವಿಶ್ವಾಸ ಹೆಚ್ಚಿಸಿಕೊಂಡ ತಲೈವಾಸ್, ದ್ವಿತೀಯಾರ್ಧದಲ್ಲೂ ಪ್ರಾಬಲ್ಯ ಸಾಧಿಸಿತು. ಪ್ರೊ ಕಬಡ್ಡಿಯ ಗರಿಷ್ಠ ರೈಡ್ ಅಂಕಗಳ ಸರದಾರ ಪ್ರದೀಪ್ ನರ್ವಾಲ್ 12 ರೈಡ್‌ಗಳಲ್ಲಿ ಕೇವಲ 3 ಅಂಕ ಗಳಿಸಿದ್ದು, ಯೋಧಾಸ್ ಸೋಲಿಗೆ ಪ್ರಮುಖ ಕಾರಣ.
ಪ್ರದೀಪ್ ಪಡೆಗಿದು ಲೀಗ್‌ನಲ್ಲಿ 8ನೇ ಸೋಲು. ಇದೇ ವೇಳೆ ಹರ್ಯಾಣ ಸ್ಟೀಲರ್ಸ್ ಹಾಗೂ ಯು ಮುಂಬಾ ನಡುವಿನ ಪಂದ್ಯ 44-44ರಲ್ಲಿ ಟೈ ಆಯಿತು.