ಸಾರಾಂಶ
ದಕ್ಷಿಣ ಭಾರತದ ಪೈಗಂಬರ್ ಕಾವ್ಯದ ಸಾರ; ಸಾಹಿತ್ಯಿಕ ವಿಶ್ಲೇಷಣೆ, ಪ್ರಭಾವ ಮತ್ತು ಬೋಧನೆಗಳು' ಎಂಬ ವಿಷಯದಲ್ಲಿ ಕರ್ನಾಟಕ ಮತ್ತು ಕೇರಳದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಸೆಮಿನಾರ್ ಮಂಡಿಸಿದರು.
ಕಲ್ಲಿಕೋಟೆ: ಪ್ರಸಿದ್ಧ ವಿದ್ಯಾಸಂಸ್ಥೆ ಮರ್ಕಝುಸ್ಸಖಾಫತುನ್ನಿಯಾ ಇದರ ಕನ್ನಡ ವಿದ್ಯಾರ್ಥಿ ಸಂಘಟನೆ ಕೆ.ಎಸ್.ಓ ಹಮ್ಮಿಕೊಂಡ ಗುಲ್ಜಾರೇ ನಅತ್ ಪ್ರೊಫೇಟಿಕ್ ಸೆಮಿನಾರ್ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
ಕಾರ್ಯಕ್ರಮವನ್ನು ಕೇರಳ ಹಜ್ಜ್ ಸಮಿತಿ ಮುಖ್ಯಸ್ಥ ಸಿ.ಮುಹಮ್ಮದ್ ಫೈಝಿ ಉದ್ಘಾಟಿಸಿದರು. ಮರ್ಕಝ್ ಶರೀಅತ್ ಕಾಲೇಜು ಪ್ರಧಾನ ಮುದರ್ರಿಸ್ ಅಬ್ದುಲ್ಲಾ ಸಖಾಫಿ ಮಲಯಮ್ಮ ಕಾರ್ಯಕ್ರಮಕ್ಕೆ ಶುಭಹಾರೈಸಿ ಮಾತಾಡಿದರು. ''ದಕ್ಷಿಣ ಭಾರತದ ಪೈಗಂಬರ್ ಕಾವ್ಯದ ಸಾರ; ಸಾಹಿತ್ಯಿಕ ವಿಶ್ಲೇಷಣೆ, ಪ್ರಭಾವ ಮತ್ತು ಬೋಧನೆಗಳು'' ಎಂಬ ವಿಷಯದಲ್ಲಿ ಕರ್ನಾಟಕ ಮತ್ತು ಕೇರಳದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಸೆಮಿನಾರ್ ಮಂಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಎಸ್.ಓ ಅಧ್ಯಕ್ಷರಾದ ಸಯ್ಯಿದ್ ಫಝಲ್ ಕೊಡಗು ವಹಿಸಿದರು. ಮುಖ್ಯ ಅತಿಥಿಗಳಾಗಿ ಲೇಖಕರಾದ ಇಸ್ಮತ್ ಫಜೀರ್, ಮರ್ಕಝ್ ಪೂರ್ವ ವಿದ್ಯಾರ್ಥಿ ಸಲೀಂ ಮುಈನಿ ಇರುವಂಬಳ್ಳ ಭಾಗವಹಿಸಿದರು. ತಸ್ಲೀಂ ನೂರಾನಿ ಸ್ವಾಗತಿಸಿ, ಸ್ವಬಾಹ್ ಬೆಳ್ಳಾರೆ ವಂದಿಸಿದರು.