ಮಹಿಳಾ ಸಿಂಗಲ್ಸ್‌ನಲ್ಲಿ 450 ಗೆಲುವು: ಪಿ.ವಿ,.ಸಿಂಧು ಹೊಸ ದಾಖಲೆ

| Published : May 23 2024, 01:01 AM IST / Updated: May 23 2024, 04:20 AM IST

ಮಹಿಳಾ ಸಿಂಗಲ್ಸ್‌ನಲ್ಲಿ 450 ಗೆಲುವು: ಪಿ.ವಿ,.ಸಿಂಧು ಹೊಸ ದಾಖಲೆ
Share this Article
  • FB
  • TW
  • Linkdin
  • Email

ಸಾರಾಂಶ

ಈ ಸಾಧನೆ ಮಾಡಿದ ಭಾರತದ 2ನೇ ಹಾಗೂ ವಿಶ್ವದ 6ನೇ ಮಹಿಳಾ ಶಟ್ಲರ್‌ ಖ್ಯಾತಿ. ಒಲಿಂಪಿಕ್‌ ಕಂಚು ವಿಜೇತ ಸೈನಾ ನೆಹ್ವಾಲ್‌ ಕೂಡಾ 450 ಗೆಲುವು ದಾಖಲಿಸಿದ್ದರು.

ಕೌಲಾಲಂಪುರ: 2 ಬಾರಿ ಒಲಿಂಪಿಕ್‌ ಪದಕ ವಿಜೇತ ಭಾರತದ ತಾರಾ ಶಟ್ಲರ್‌ ಪಿ.ವಿ.ಸಿಂಧು ಅವರು ಮಲೇಷ್ಯಾ ಮಾಸ್ಟರ್ಸ್‌ ಸೂಪರ್‌ 500 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ 2ನೇ ಸುತ್ತಿಗೆ ಪ್ರವೇಶಿಸಿದ್ದಾರೆ. 

ಇದು ಸಿಂಗಲ್ಸ್‌ ವೃತ್ತಿ ಬದುಕಿನಲ್ಲಿ 450ನೇ ಗೆಲುವು. ಈ ಸಾಧನೆ ಮಾಡಿದ ವಿಶ್ವದ 6ನೇ ಮಹಿಳಾ ಶಟ್ಲರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಸಿಂಧು ಸಿಂಗಲ್ಸ್‌ನಲ್ಲಿ ಈ ವರೆಗೂ 647 ಪಂದ್ಯಗಳನ್ನಾಡಿದ್ದು, 450ರಲ್ಲಿ ಗೆದ್ದು, 197ರಲ್ಲಿ ಸೋತಿದ್ದಾರೆ. 

ಇದಕ್ಕೂ ಮುನ್ನ ಮಾಜಿ ವಿಶ್ವ ನಂ.1 ಹಾಗೂ ಒಲಿಂಪಿಕ್‌ ಕಂಚು ವಿಜೇತ ಸೈನಾ ನೆಹ್ವಾಲ್‌ ಕೂಡಾ 450 ಗೆಲುವು ದಾಖಲಿಸಿದ್ದರು. ಇವರಿಬ್ಬರನ್ನು ಹೊರತುಪಡಿಸಿ ತೈವಾನ್‌ ತಾಯ್‌ ತ್ಸು ಯಿಂಗ್‌(525), ಸ್ಪೇನ್‌ನ ಕ್ಯಾರೊಲಿನಾ ಮರೀನ್‌(506), ಥಾಯ್ಲೆಂಡ್‌ನ ರಾಚನೊಕ್‌ ಇಂಟನಾನ್‌(485) ಹಾಗ ಜಪಾನ್‌ನ ಅಕಾನೆ ಯಮಗುಚಿ(453) ಕೂಡಾ 450+ ಗೆಲುವು ಸಾಧಿಸಿದ್ದರು.

ಸಿಂಧು, ಅಶ್ಮಿತಾ 2ನೇ ಸುತ್ತಿಗೆ

ಕೌಲಾಲಂಪುರ: 2 ಬಾರಿ ಒಲಿಂಪಿಕ್‌ ಪದಕ ವಿಜೇತ ಭಾರತದ ತಾರಾ ಶಟ್ಲರ್‌ ಪಿ.ವಿ.ಸಿಂಧು ಮಲೇಷ್ಯಾ ಮಾಸ್ಟರ್ಸ್‌ ಸೂಪರ್‌ 500 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ.

ಬುಧವಾರ ನಡೆದ ಮಹಿಳಾ ಸಿಂಗಲ್ಸ್‌ ಮೊದಲ ಸುತ್ತಿನ ಪಂದ್ಯದಲ್ಲಿ ವಿಶ್ವ ನಂ.15 ಸಿಂಧು, ಸ್ಕಾಟ್ಲೆಂಡ್‌ನ ಕಿಸ್ಟಿ ಗಿಲ್ಮೋರ್‌ ವಿರುದ್ಧ 21-17, 21-16ರಲ್ಲಿ ಜಯಭೇರಿ ಬಾರಿಸಿದರು. ಅಶ್ಮಿತಾ ಚೈನೀಸ್‌ ತೈಪೆಯ ಲಿನ್‌ ಯುನ್‌ ವಿರುದ್ಧ 21-17, 21-16ರಲ್ಲಿ ಗೆದ್ದರೆ, ಪುರುಷರ ಸಿಂಗಲ್ಸ್‌ನಲ್ಲಿ ಕಿರಣ್‌ ಜಾರ್ಜ್‌, ಜಪಾನ್‌ನ ಟಕುಮಾ ಒಬಯಶಿ ಅವರನ್ನು 21-16, 21-17ರಲ್ಲಿ ಗೆದ್ದು 2ನೇ ಸುತ್ತಿಗೇರಿದರು. ಮಿಶ್ರ ಡಬಲ್ಸ್‌ನಲ್ಲಿ ಸುಮೀತ್‌ ರೆಡ್ಡಿ-ಸಿಕ್ಕಿ ರೆಡ್ಡಿ ದಂಪತಿ, ಪುರುಷರ ಡಬಲ್ಸ್‌ನಲ್ಲಿ ಸಾಯಿ ಪ್ರತೀಕ್‌-ಕೃಷ್ಣ ಪ್ರಸಾದ್‌ ಕೂಡಾ ಜಯಗಳಿಸಿದರು. ಆದರೆ ಮಹಿಳಾ ಸಿಂಗಲ್ಸ್‌ನಲ್ಲಿ ಉನ್ನತಿ ಹೂಡಾ, ಚೀನಾದ ಗಾವೊ ಫಾಂಗ್‌ ಜಿ ವಿರುದ್ಧ ಸೋತು ಅಭಿಯಾನ ಕೊನೆಗೊಳಿಸಿದರು.