ಸಾರಾಂಶ
ಗಾಯಾಳು ಕೆ.ಎಲ್.ರಾಹುಲ್ ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್‌ನಿಂದ ಹೊರಬಿದ್ದಿದ್ದಾರೆ.
ನವದೆಹಲಿ: ಗಾಯಾಳು ಕೆ.ಎಲ್.ರಾಹುಲ್ ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್‌ನಿಂದ ಹೊರಬಿದ್ದಿದ್ದು, ತಜ್ಞ ವೈದ್ಯರ ಸಲಹೆ ಪಡೆಯಲು ಲಂಡನ್‌ಗೆ ತೆರಳಿರುವುದಾಗಿ ಬಿಸಿಸಿಐ ತಿಳಿಸಿದೆ. ಇದೇ ವೇಳೆ ಬೂಮ್ರಾ 5ನೇ ಟೆಸ್ಟ್‌ಗೆ ಆಯ್ಕೆಗೆ ಲಭ್ಯರಿದ್ದಾರೆ ಎಂದೂ ಬಿಸಿಸಿಐ ತನ್ನ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.
ಬೀಜಿಂಗ್‌ನಲ್ಲಿ 2027ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್
ಬೀಜಿಂಗ್: 2027ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಚೀನಾದ ಬೀಜಿಂಗ್‌ನಲ್ಲಿ ಆಯೋಜನೆಗೊಳ್ಳಲಿದೆ ಎಂದು ವಿಶ್ವ ಅಥ್ಲೆಟಿಕ್ಸ್ ಫೆಡರೇಶನ್ ಗುರುವಾರ ತಿಳಿಸಿದೆ.
ಇಟಲಿ ಸರ್ಕಾರ ರೋಮ್‌ನಲ್ಲಿ ಈ ಕೂಟದ ಆಯೋಜನೆಗೆ 92 ಮಿಲಿಯನ್ ಡಾಲರ್ ಹಣ ನೀಡಲು ನಿರಾಕರಿಸಿದ ಹಿನ್ನೆಲೆ ಇಟಾಲಿಯನ್ ಟ್ರ್ಯಾಕ್ ಫೆಡರೇಶನ್ ಸಲ್ಲಿಸಿದ್ದ ಬಿಡ್ ಅನ್ನು ಹಿಂಪಡೆದಿತ್ತು.
ಈ ಕೂಟವನ್ನು 2015ರಲ್ಲಿ ಕೂಡಾ ಚೀನಾವೇ ಆಯೋಜಿಸಿತ್ತು. ಮುಂದಿನ ವರ್ಷ ನಡೆಯಲಿರುವ ವಿಶ್ವ ಒಳಾಂಗಣ ಚಾಂಪಿಯನ್‌ಶಿಪ್ ಕೂಡಾ ಚೀನಾದ ನಾನ್‌ಜಿಂಗ್‌ನಲ್ಲಿ ಆಯೋಜನೆಗೊಳ್ಳಲಿದೆ.