ಸಾರಾಂಶ
ಸೂಪರ್-8 ಹಂತದ ಎಲ್ಲಾ 12 ಪಂದ್ಯಗಳಿಗೂ ಕಾದಿದೆಯೇ ಮಳೆ ಭೀತಿ? ಹೌದು ಎನ್ನುತ್ತಿದೆ ಹವಾಮಾನ ಇಲಾಖೆ ವರದಿ. ಭಾರತ-ಆಸ್ಟ್ರೇಲಿಯಾ ಪಂದ್ಯ ವಾಶೌಟ್ ಆಗುವ ಸಾಧ್ಯತೆ ಇದೆಯಂತೆ.
ಬ್ರಿಡ್ಜ್‌ಟೌನ್: 2024ರ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಈಗಾಗಲೇ ಹಲವು ಪಂದ್ಯಗಳಿಗೆ ಮಳೆ ಅಡ್ಡಿಪಡಿಸಿದ್ದು, 4 ಪಂದ್ಯಗಳು ರದ್ದಾಗಿವೆ.
ಜೂ.18ಕ್ಕೆ ಗುಂಪು ಹಂತ ಮುಕ್ತಾಯಗೊಳ್ಳುವ, 19ರಿಂದ ಸೂಪರ್-8 ಹಂತ ಶುರುವಾಗಬೇಕಿದೆ. ಆದರೆ ವಿಂಡೀಸ್‌ನಲ್ಲಿ ನಡೆಯಬೇಕಿರುವ ಸೂಪರ್-8 ಹಂತದ ಎಲ್ಲಾ 12 ಪಂದ್ಯಗಳಿಗೂ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ ಎಂದು ಸ್ಥಳೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.ಅದರಲ್ಲೂ ಜೂ.24ರಂದು ನಡೆಯಬೇಕಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಪಂದ್ಯ ಮಳೆಯಿಂದಾಗಿ ರದ್ದಾಗುವ ಸಾಧ್ಯತೆಯೇ ಹೆಚ್ಚು ಎಂದು ಹೇಳಲಾಗುತ್ತಿದೆ.