5 ಬಾರಿ ಚಾಂಪಿಯನ್ ಸಿಎಸ್‌ಕೆ ವಿರುದ್ಧ ರಾಜಸ್ಥಾನಕ್ಕೆ 8 ವಿಕೆಟ್ ಭರ್ಜರಿ ಜಯ । 128 ರನ್ ಗುರಿ ಕೇವಲ 121. ಓವರ್‌ನಲ್ಲೇ ಚೇಸ್ರಾಯಲ್ಸ್ ಮಾರಕ ದಾಳಿಗೆ ತತ್ತರಿಸಿದ ಸಿಎಸ್‌ಕೆ 19.4 ಓವರಲ್ಲಿ ಆಲೌಟ್ । ರಾಯಲ್ಸ್ ಪರ ವೈಭವ್ 17 ಎಸೆತಕ್ಕೆ 52, ಜೈಸ್ವಾಲ್ 38
ಗುವಾಹಟಿ: ಚೊಚ್ಚಲ ಆವೃತ್ತಿಯ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ಈ ಬಾರಿ ಐಪಿಎಲ್‌ನಲ್ಲಿ ಭರ್ಜರಿ ಶುಭಾರಂಭ ಮಾಡಿದೆ. 5 ಬಾರಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಮವಾರ ನಡೆದ ಪಂದ್ಯದಲ್ಲಿ ರಾಯಲ್ಸ್ 8 ವಿಕೆಟ್‌ನಿಂದ ಜಯಭೇರಿ ಬಾರಿಸಿತು. ಮಾರಕ ಬೌಲಿಂಗ್ ದಾಳಿ ಬಳಿಕ ವೈಭವ್ ಸೂರ್ಯವಂಶಿಯ ಅಮೋಘ ಬ್ಯಾಟಿಂಗ್‌ನಿಂದಾಗಿ ರಾಯಲ್ಸ್ ತನ್ನ ಮೊದಲ ಪಂದ್ಯದಲ್ಲೇ ನೆಟ್ ರನ್‌ರೇಟ್ ಭರ್ಜರಿಯಾಗಿ ಏರಿಸಿತು.
ರಾಜಸ್ಥಾನ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದು ಸರಿಯಾಗಿಯೇ ಇತ್ತು. ಚೆನ್ನೈಯನ್ನು ಸುಲಭದಲ್ಲಿ ಕಟ್ಟಿಹಾಕುವ ತನ್ನ ಯೋಜನೆ ಆರಂಭದಲ್ಲೇ ಫಲಕೊಟ್ಟಿತು. ಋತುರಾಜ್ ಗಾಯಕ್ವಾಡ್ ನಾಯಕತ್ವದ ಚೆನ್ನೈ 19.4 ಓವರ್‌ಗಳಲ್ಲಿ 127 ರನ್‌ಗೆ ಸರ್ವಪತನ ಕಂಡಿತು. ಸುಲಭ ಗುರಿ ಪಡೆದ ರಾಜಸ್ಥಾನ ಮೊದಲ ಓವರ್‌ನಲ್ಲೇ ಅಬ್ಬರಿಸಲು ಶುರುವಿಟ್ಟಿತು. ತಂಡ ಕೇವಲ 12.1 ಓವರ್‌ಗಳಲ್ಲೇ ಗೆಲುವು ತನ್ನದಾಗಿಸಿಕೊಂಡಿತು.
ಪೆವಿಲಿಯನ್ ಪರೇಡ್:
ಮೊದಲ ಓವರ್‌ನಲ್ಲಿ ವಿಕೆಟ್ ಕಳೆದುಕೊಳ್ಳದೇ ಇದ್ದಿದ್ದೇ ಚೆನ್ನೈನ ಸಾಧನೆ. ಬಳಿಕ ಜೋಫ್ರಾ ಆರ್ಚರ್, ನಂಡ್ರೆ ಬರ್ಗರ್ ದಾಳಿಗೆ ಚೆನ್ನೈ ಅಕ್ಷರಶಃ ತತ್ತರಿಸಿತು. 2ನೇ ಓವರ್‌ನಲ್ಲೇ ಸಂಜು ಸ್ಯಾಮ್ಸನ್(6) ವಿಕೆಟ್ ಕಳೆದುಕೊಂಡ ತಂಡ ಬಳಿಕ ಚೇತರಿಸಿಕೊಳ್ಳಲೇ ಇಲ್ಲ. ಋತುರಾಜ್ 9, ಆಯುಶ್ ಮ್ಹಾತ್ರೆ 0, ಮ್ಯಾಥ್ಯೂ ಶಾರ್ಟ್ 2 ರನ್‌ಗೆ ಔಟಾದರು. ಆರಂಭಿಕ ನಾಲ್ವರಲ್ಲಿ ಯಾರೊಬ್ಬರೂ ಎರಡಂಕಿ ಮೊತ್ತ ಗಳಿಸಲಿಲ್ಲ. ಸರ್ಫರಾಜ್ ಖಾನ್(17), ಕಾರ್ತಿಕ್ ಶರ್ಮಾ(18) ಕೂಡಾ ಹೆಚ್ಚು ಹೊತ್ತು ನಿಲ್ಲಲಿಲ್ಲ. ಕೊನೆಯಲ್ಲಿ ಜೆಮೀ ಓವರ್ಟನ್ 36 ಎಸೆತಕ್ಕೆ 43 ರನ್ ಗಳಿಸಿ ಚೆನ್ನೈನ ಮಾನ ಉಳಿಸಿದರು.
ಅಮೋಘ ಚೇಸ್:
ಮೊದಲ ಓವರ್‌ನಲ್ಲೇ 18 ರನ್ ದೋಚಿದ ರಾಜಸ್ಥಾನ ಬಳಿಕ ಹಿಂದಿರುಗಿ ನೋಡಲಿಲ್ಲ. ಎದುರಾಳಿ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ 15 ವರ್ಷದ ವೈಭವ್ ಕೇವಲ 15 ಎಸೆತಗಳಲ್ಲೇ ಅರ್ಧಶತಕ ಪೂರೈಸಿದರು. ಅವರು 17 ಎಸೆತಕ್ಕೆ 52 ರನ್ ಗಳಿಸಿ 7ನೇ ಓವರ್‌ನಲ್ಲಿ ಔಟಾದರು. ಬಳಿಕ ಯಶಸ್ವಿ ಜೈಸ್ವಾಲ್(ಔಟಾಗದೆ 38), ಧ್ರುವ್ ಜುರೆಲ್(18) ತಂಡವನ್ನು ಗೆಲುವಿನ ದಡ ಸೇರಿಸಿದರು.
ಸ್ಕೋರ್: ಸಿಎಸ್‌ಕೆ 19.4 ಓವರ್‌ನಲ್ಲಿ 127/10 (ಓವರ್ಟನ್ 43, ಕಾರ್ತಿಕ್ 18, ಆರ್ಚರ್ 2-19, ಜಡೇಜಾ 2-18, ಬರ್ಗರ್ 2-26), ರಾಜಸ್ಥಾನ 12.1 ಓವರ್‌ಗಳಲ್ಲಿ 128/2 (ವೈಭವ್ 52, ಜೈಸ್ವಾಲ್ ಔಟಾಗದೆ 38, ಅನ್ಶುಲ್ 2-27)
ಪಂದ್ಯಶ್ರೇಷ್ಠ:
