ಸಾರಾಂಶ
ಬೆಂಗಳೂರು: ಅ.26ರಿಂದ ನಡೆಯಲಿರುವ 2024-25ರ ರಣಜಿ ಟ್ರೋಫಿಯ ಬಿಹಾರ ವಿರುದ್ಧ ಪಂದ್ಯಕ್ಕೆ ಕರ್ನಾಟಕ ತಂಡವನ್ನು ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಪ್ರಕಟಿಸಿದೆ. 16 ಸದಸ್ಯರ ತಂಡಕ್ಕೆ ಮಯಾಂಕ್ ಅಗರ್‌ವಾಲ್ ನಾಯಕರಾಗಿದ್ದಾರೆ.
ಮೊದಲೆರಡು ಪಂದ್ಯಗಳಲ್ಲಿ ಸ್ಥಾನ ಪಡೆದಿದ್ದ ಬ್ಯಾಟರ್ ದೇವದತ್ ಪಡಿಕ್ಕಲ್, ವೇಗಿ ಪ್ರಸಿದ್ಧ್ ಕೃಷ್ಣ ತಂಡದಿಂದ ಹೊರಬಿದ್ದಿದ್ದಾರೆ. ಅವರ ಬದಲು ಅಭಿನವ್ ಮನೋಹರ್, ಅನೀಶ್ ಕೆ.ವಿ. ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ತಂಡ: ಮಯಾಂಕ್ ಅಗರ್‌ವಾಲ್ (ನಾಯಕ), ನಿಕಿನ್ ಜೋಸ್, ಸ್ಮರಣ್ ಆರ್., ಮನೀಶ್ ಪಾಂಡೆ (ಉಪನಾಯಕ), ಶ್ರೇಯಸ್ ಗೋಪಾಲ್, ಸುಜಯ್ ಸತೇರಿ (ವಿಕೆಟ್ ಕೀಪರ್), ಹಾರ್ದಿಕ್ ರಾಜ್, ವೈಶಾಖ್ ವಿಜಯ್‌ಕುಮಾರ್, ವಾಸುಕಿ ಕೌಶಿಕ್, ವಿದ್ಯಾಧರ್ ಪಾಟೀಲ್, ಅಭಿನವ್ ಮನೋಹರ್, ಲುವ್ನಿತ್ ಸಿಸೋಡಿಯಾ (ವಿಕೆಟ್ ಕೀಪರ್), ಕಿಶನ್ ಬೆಡಾರೆ, ಅನೀಶ್ ಕೆ.ವಿ., ಮೊಹ್ಸಿನ್ ಖಾನ್, ಅಭಿಲಾಶ್ ಶೆಟ್ಟಿ.
ಇಂಗ್ಲೆಂಡ್ ತಂಡದಲ್ಲೀಗ ಸಾಲ್ಟ್ ಮತ್ತು ಪೆಪ್ಪರ್!
ಲಂಡನ್: ಅ.31ರಿಂದ ವೆಸ್ಟ್‌ಇಂಡೀಸ್ ವಿರುದ್ಧ ಆರಂಭಗೊಳ್ಳಲಿರುವ ಏಕದಿನ ಸರಣಿಗೆ ಇಂಗ್ಲೆಂಡ್ ತಂಡ ಪ್ರಕಟಗೊಂಡಿದ್ದು, ಯುವ ಬ್ಯಾಟರ್ ಮೈಕಲ್ ಪೆಪ್ಪರ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಸ್ಫೋಟಕ ಬ್ಯಾಟರ್ ಫಿಲ್ ಸಾಲ್ಟ್ ಕೂಡಾ ತಂಡಕ್ಕೆ ಆಯ್ಕೆಯಾಗಿದ್ದಾರೆ. ಸದ್ಯ ಇವರಿಬ್ಬರ ಹೆಸರುಗಳು ‘ಸಾಲ್ಟ್ ಆ್ಯಂಡ್ ಪೆಪ್ಪರ್’ ಎಂದೇ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.