ರಣಜಿ: ಹೈದರಾಬಾದ್‌ನ ತನ್ಮಯ್‌ ಅತಿ ವೇಗದ ದ್ವಿಶತಕ, ತ್ರಿಶತಕ ದಾಖಲೆ!

| Published : Jan 27 2024, 01:17 AM IST

ರಣಜಿ: ಹೈದರಾಬಾದ್‌ನ ತನ್ಮಯ್‌ ಅತಿ ವೇಗದ ದ್ವಿಶತಕ, ತ್ರಿಶತಕ ದಾಖಲೆ!
Share this Article
  • FB
  • TW
  • Linkdin
  • Email

ಸಾರಾಂಶ

ಹೈದರಾಬಾದ್‌ನ ತಾರಾ ಬ್ಯಾಟರ್‌ ತನ್ಮಯ್‌ ಅಗರ್‌ವಾಲ್‌ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ವೇಗದ ದ್ವಿಶತಕ, ತ್ರಿಶತಕದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಹೈದರಾಬಾದ್‌: ಹೈದರಾಬಾದ್‌ನ ತಾರಾ ಬ್ಯಾಟರ್‌ ತನ್ಮಯ್‌ ಅಗರ್‌ವಾಲ್‌ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ವೇಗದ ದ್ವಿಶತಕ, ತ್ರಿಶತಕದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ರಣಜಿ ಟ್ರೋಫಿಯ ಪ್ಲೇಟ್‌ ಗುಂಪಿನ ಅರುಣಾಚಲ ಪ್ರದೇಶ ವಿರುದ್ಧ ಪಂದ್ಯದಲ್ಲಿ ತನ್ಮಯ್‌ ಈ ಸಾಧನೆ ಮಾಡಿದ್ದಾರೆ.ಮೊದಲು ಬ್ಯಾಟ್‌ ಮಾಡಿದ ಅರುಣಾಚಲ 172ಕ್ಕೆ ಆಲೌಟಾಯಿತು. ಆ ಬಳಿಕ ಹೈದರಾಬಾದ್‌ ಆಡಿದ್ದೇ ಆಟ. ಆರಂಭಿಕರಾಗಿ ಕಣಕ್ಕಿಳಿದ ತನ್ಮಯ್‌ 119 ಎಸೆತದಲ್ಲಿ ದ್ವಿಶತಕ ಪೂರ್ತಿಗೊಳಿಸಿ, ಪ್ರಥಮ ದರ್ಜೆಯಲ್ಲಿ ವೇಗದ ದ್ವಿಶತಕ ಸಿಡಿಸಿದ ಭಾರತೀಯ ಎನ್ನುವ ಹಿರಿಮೆಗೆ ಪಾತ್ರರಾದರು. 147 ಎಸೆತದಲ್ಲಿ 300 ರನ್‌ ಚಚ್ಚಿದ ಅವರು, 160 ಎಸೆತಗಳಲ್ಲಿ 323 ರನ್‌ಗಳಿಸಿ ಔಟಾಗದೆ ಉಳಿದಿದ್ದಾರೆ. 21 ಸಿಕ್ಸರ್‌ ಸಿಡಿಸಿರುವ ತನ್ಮಯ್‌, ರಣಜಿ ಟ್ರೋಫಿ ಇನ್ನಿಂಗ್ಸ್‌ನಲ್ಲಿ ಗರಿಷ್ಠ ಸಿಕ್ಸರ್‌ ದಾಖಲೆ ಬರೆದರು. ತಂಡ ಕೇವಲ 47.4 ಓವರಲ್ಲಿ 528ಕ್ಕೆ 1 ರನ್‌ ಸಿಡಿಸಿದ್ದು, ಇನ್ನಷ್ಟು ದಾಖಲೆಗಳನ್ನು ಪುಡಿಗುಟ್ಟುವ ನಿರೀಕ್ಷೆಯಲ್ಲಿದೆ.