ರಣಜಿ: ಕುತೂಹಲ ಘಟ್ಟಕ್ಕೆ ಕರ್ನಾಟಕ-ತ್ರಿಪುರಾ ಪಂದ್ಯ

| Published : Jan 29 2024, 01:37 AM IST

ರಣಜಿ: ಕುತೂಹಲ ಘಟ್ಟಕ್ಕೆ ಕರ್ನಾಟಕ-ತ್ರಿಪುರಾ ಪಂದ್ಯ
Share this Article
  • FB
  • TW
  • Linkdin
  • Email

ಸಾರಾಂಶ

ರಣಜಿ ಟ್ರೋಫಿಯ ಕರ್ನಾಟಕ ಹಾಗೂ ತ್ರಿಪುರಾ ನಡುವಿನ ಪಂದ್ಯ ಕುತೂಹಲ ಘಟ್ಟಕ್ಕೆ ತಲುಪಿದೆ. ನಾಕೌಟ್ ದೃಷ್ಟಿಯಿಂದ ಮಹತ್ವದ್ದೆನಿಸಿರುವ ಪಂದ್ಯದಲ್ಲಿ ರಾಜ್ಯ ತಂಡ ಸಂಕಷ್ಟದಲ್ಲಿದ್ದು, ಸೋಲಿನ ಭೀತಿಯಲ್ಲಿದೆ.

ಅಗರ್ತಲಾ: ರಣಜಿ ಟ್ರೋಫಿಯ ಕರ್ನಾಟಕ ಹಾಗೂ ತ್ರಿಪುರಾ ನಡುವಿನ ಪಂದ್ಯ ಕುತೂಹಲ ಘಟ್ಟಕ್ಕೆ ತಲುಪಿದೆ. ನಾಕೌಟ್ ದೃಷ್ಟಿಯಿಂದ ಮಹತ್ವದ್ದೆನಿಸಿರುವ ಪಂದ್ಯದಲ್ಲಿ ರಾಜ್ಯ ತಂಡ ಸಂಕಷ್ಟದಲ್ಲಿದ್ದು, ಸೋಲಿನ ಭೀತಿಯಲ್ಲಿದೆ. ಗೆಲ್ಲಲು 193 ರನ್‌ ಗುರಿ ಪಡೆದಿರುವ ತ್ರಿಪುರಾ 3ನೇ ದಿನದಂತ್ಯಕ್ಕೆ 3 ವಿಕೆಟ್‌ಗೆ 59 ರನ್‌ ಗಳಿಸಿದ್ದು, ಇನ್ನೂ 134 ರನ್‌ ಅಗತ್ಯವಿದೆ.ಮೊದಲ ಇನ್ನಿಂಗ್ಸ್‌ನಲ್ಲಿ 2ನೇ ದಿನ 9 ವಿಕೆಟ್‌ಗೆ 198 ರನ್‌ ಗಳಿಸಿದ್ದ ತ್ರಿಪುರಾ 200ಕ್ಕೆ ಆಲೌಟಾಯಿತು. 41 ರನ್‌ಗಳ ಮುನ್ನಡೆ ಸಾಧಿಸಿದ ರಾಜ್ಯ ತಂಡಕ್ಕೆ 2ನೇ ಇನ್ನಿಂಗ್ಸ್‌ನಲ್ಲಿ ಆಘಾತ ಎದುರಾಯಿತು. ತಾರಾ ಬ್ಯಾಟರ್‌ಗಳ ವೈಫಲ್ಯದಿಂದಾಗಿ ತಂಡ ಕೇವಲ 151ಕ್ಕೆ ಸರ್ವಪತನ ಕಂಡಿತು. ಚೊಚ್ಚಲ ಪಂದ್ಯವಾಡುತ್ತಿರುವ ಕಿಶನ್‌ ಬೆದರೆ(42), ಶ್ರೀನಿವಾಸ್‌ ಶರತ್‌(48) ಹೊರತುಪಡಿಸಿ ಇತರ ಯಾರಿಂದಲೂ ಸೂಕ್ತ ಕೊಡುಗೆ ಸಿಗಲಿಲ್ಲ. ವೈಶಾಕ್‌ 22, ಮಯಾಂಕ್‌ ಅಗರ್‌ವಾಲ್‌ 17 ರನ್‌ ಗಳಿಸಿದರು.ಸ್ಪರ್ಧಾತ್ಮಕ ಗುರಿ ಬೆನ್ನತ್ತಿರುವ ತ್ರಿಪುರಾಗೆ ರಾಜ್ಯದ ವೇಗಿಗಳು ಆಘಾತ ನೀಡಿದರು. ಸುದೀಪ್‌(26*) ಹಾಗೂ ಕನ್ನಡಿಗ ಗಣೇಶ್‌ ಸತೀಶ್‌(3*) ಕ್ರೀಸ್‌ನಲ್ಲಿದ್ದಾರೆ. ಕೊನೆ ದಿನವಾದ ಸೋಮವಾರ ರಾಜ್ಯದ ಬೌಲರ್‌ಗಳು ಅಸಾಧಾರಣ ಪ್ರದರ್ಶನ ನೀಡಿದರಷ್ಟೇ ಗೆಲುವು ದಕ್ಕಲಿದೆ.ಸ್ಕೋರ್‌: ಕರ್ನಾಟಕ 241/10 ಮತ್ತು 151/10(ಶ್ರೀನಿವಾಸ್‌ 48, ಕಿಶನ್‌ 42, ಮುರಾ 3-29), ತ್ರಿಪುರಾ 200/10 ಮತ್ತು 59/3(3ನೇ ದಿನದಂತ್ಯಕ್ಕೆ)(ಸುದೀಪ್‌ 26*, ವೈಶಾಕ್‌ 1-13)