ರಣಜಿ: ಮಯಾಂಕ್‌, ದೇವದತ್‌ ರಾಜ್ಯ ತಂಡಕ್ಕೆ ವಾಪಸ್‌

| Published : Feb 06 2024, 01:31 AM IST

ಸಾರಾಂಶ

ಫೆ.9ರಿಂದ ಚೆನ್ನೈನಲ್ಲಿ ಆರಂಭಗೊಳ್ಳಲಿರುವ ತಮಿಳುನಾಡು ವಿರುದ್ಧದ ರಣಜಿ ಪಂದ್ಯಕ್ಕೆ ಕರ್ನಾಟಕ ತಂಡ ಪ್ರಕಟಗೊಂಡಿದ್ದು, ನಾಯಕ ಮಯಾಂಕ್‌ ಅಗರ್‌ವಾಲ್‌, ದೇವದತ್‌ ಪಡಿಕ್ಕಲ್‌ ತಂಡಕ್ಕೆ ಮರಳಿದ್ದಾರೆ

ಬೆಂಗಳೂರು: ಫೆ.9ರಿಂದ ಚೆನ್ನೈನಲ್ಲಿ ಆರಂಭಗೊಳ್ಳಲಿರುವ ತಮಿಳುನಾಡು ವಿರುದ್ಧದ ರಣಜಿ ಪಂದ್ಯಕ್ಕೆ ಕರ್ನಾಟಕ ತಂಡ ಪ್ರಕಟಗೊಂಡಿದ್ದು, ನಾಯಕ ಮಯಾಂಕ್‌ ಅಗರ್‌ವಾಲ್‌, ದೇವದತ್‌ ಪಡಿಕ್ಕಲ್‌ ತಂಡಕ್ಕೆ ಮರಳಿದ್ದಾರೆ. ತ್ರಿಪುರಾ ವಿರುದ್ಧ ಪಂದ್ಯದ ಬಳಿಕ ವಿಮಾನದಲ್ಲಿ ದ್ರವ ಪದಾರ್ಥ ಸೇವಿಸಿ ಅಸ್ವಸ್ಥಗೊಂಡಿದ್ದರಿಂದ ಮಯಾಂಕ್‌ ರೈಲ್ವೇಸ್‌ ವಿರುದ್ಧ ಆಡಿರಲಿಲ್ಲ. ದೇವದತ್‌ ಭಾರತ ‘ಎ’ ತಂಡದ ಪರ ಆಡುತ್ತಿದ್ದರು. ಇದೇ ವೇಳೆ ನಿಶ್ಚಲ್‌ ತಂಡದಿಂದ ಹೊರಬಿದ್ದಿದ್ದಾರೆ.ತಂಡ: ಮಯಾಂಕ್‌, ನಿಕಿನ್‌, ದೇವದತ್‌, ಸಮರ್ಥ್‌, ಮನೀಶ್‌, ಶರತ್‌, ಅನೀಶ್‌, ವೈಶಾಕ್‌, ಕೌಶಿಕ್‌, ಶಶಿಕುಮಾರ್‌, ಸುಜಯ್‌, ವಿದ್ವತ್‌, ವೆಂಕಟೇಶ್‌, ಕಿಶನ್‌ ಬೆದರೆ, ರೋಹಿತ್‌, ಹಾರ್ದಿಕ್‌ ರಾಜ್‌.

ಟೆಸ್ಟ್‌: ಅಫ್ಘಾನಿಸ್ತಾನ ವಿರುದ್ಧಲಂಕಾಕ್ಕೆ 10 ವಿಕೆಟ್‌ ಜಯಕೊಲಂಬೊ(ಶ್ರೀಲಂಕಾ): ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್‌ ಪಂದ್ಯದಲ್ಲಿ ಅತಿಥೇಯ ಶ್ರೀಲಂಕಾ 10 ವಿಕೆಟ್‌ ಬೃಹತ್‌ ಗೆಲುವು ತನ್ನದಾಗಿಸಿಕೊಂಡಿದೆ. ಇಬ್ರಾಹಿಂ ಜದ್ರಾನ್‌(114), ರಹ್ಮತ್‌ ಶಾ(54) ಹೋರಾಟದ ಹೊರತಾಗಿಯೂ 2ನೇ ಇನ್ನಿಂಗ್ಸ್‌ನಲ್ಲಿ ಆಫ್ಘನ್‌ 296ಕ್ಕೆ ಆಲೌಟಾಯಿತು. 214ಕ್ಕೆ 1 ವಿಕೆಟ್‌ ಕಳೆದುಕೊಂಡಿದ್ದ ತಂಡ ಬಳಿಕ 82 ರನ್‌ ಸೇರಿಸುವಷ್ಟರಲ್ಲಿ ಸರ್ವಪತನ ಕಂಡಿತು. ಪ್ರಭಾತ್‌ ಜಯಸೂರ್ಯ 5 ವಿಕೆಟ್‌ ಕಿತ್ತರು. ಗೆಲುವಿಗೆ 56 ರನ್‌ ಗುರಿ ಪಡೆದ ಲಂಕಾ 7.2 ಓವರಲ್ಲೇ ಗೆದ್ದು ಬೀಗಿತು. ಇದಕ್ಕೂ ಮುನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಆಫ್ಘನ್‌ 198ಕ್ಕೆ ಆಲೌಟಾಗಿದ್ದರೆ, ಲಂಕಾ 439 ರನ್‌ ಗಳಿಸಿ ಬೃಹತ್‌ ಮುನ್ನಡೆ ಪಡೆದಿತ್ತು.