ರಣಜಿ: ರಾಜ್ಯ ತಂಡಕ್ಕೆ ಯುವ ಬೌಲರ್‌ ಧೀರಜ್‌ ಗೌಡ

| Published : Feb 14 2024, 02:21 AM IST

ರಣಜಿ: ರಾಜ್ಯ ತಂಡಕ್ಕೆ ಯುವ ಬೌಲರ್‌ ಧೀರಜ್‌ ಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಹುಬ್ಬಳ್ಳಿಯಲ್ಲಿ ಶುಕ್ರವಾರ (ಫೆ.16)ದಿಂದ ಆರಂಭವಾಗಲಿರುವ ಚಂಡೀಗಢ ವಿರುದ್ಧದ ರಣಜಿ ಟ್ರೋಫಿ ಪಂದ್ಯಕ್ಕೆ ಕರ್ನಾಟಕ ತಂಡ ಆಯ್ಕೆಯಾಗಿದ್ದು, ಅಂಡರ್‌-19 ವಿಶ್ವಕಪ್‌ನಲ್ಲಿ ಭಾರತ ತಂಡದಲ್ಲಿದ್ದ ವೇಗಿ ಧೀರಜ್‌ ಗೌಡಗೆ ಸ್ಥಾನ ನೀಡಲಾಗಿದೆ.

ಬೆಂಗಳೂರು: ಹುಬ್ಬಳ್ಳಿಯಲ್ಲಿ ಶುಕ್ರವಾರ (ಫೆ.16)ದಿಂದ ಆರಂಭವಾಗಲಿರುವ ಚಂಡೀಗಢ ವಿರುದ್ಧದ ರಣಜಿ ಟ್ರೋಫಿ ಪಂದ್ಯಕ್ಕೆ ಕರ್ನಾಟಕ ತಂಡ ಆಯ್ಕೆಯಾಗಿದ್ದು, ಅಂಡರ್‌-19 ವಿಶ್ವಕಪ್‌ನಲ್ಲಿ ಭಾರತ ತಂಡದಲ್ಲಿದ್ದ ಬೌಲರ್‌ ಧೀರಜ್‌ ಗೌಡಗೆ ಸ್ಥಾನ ನೀಡಲಾಗಿದೆ. ಯುವ ಸ್ಪಿನ್ನರ್‌ ರೋಹಿತ್‌ ಕುಮಾರ್‌ರನ್ನು ತಂಡದಿಂದ ಕೈಬಿಡಲಾಗಿದೆ. ಇನ್ನು ಭಾರತ ತಂಡಕ್ಕೆ ಆಯ್ಕೆಯಾಗಿರುವ ದೇವದತ್‌ ಪಡಿಕ್ಕಲ್‌ ಸ್ಥಾನಕ್ಕೆ ಯಾರನ್ನೂ ಸೇರಿಸಿಕೊಳ್ಳಲಾಗಿಲ್ಲ.

ಕರ್ನಾಟಕ ತಂಡ: ಮಯಾಂಕ್ ಅಗರ್ವಾಲ್ (ನಾಯಕ), ನಿಕಿನ್ ಜೋಸ್ (ಉಪನಾಯಕ), ಆರ್‌. ಸಮರ್ಥ್, ಮನೀಶ್ ಪಾಂಡೆ, ಶರತ್ ಶ್ರೀನಿವಾಸ್ (ಕೀಪರ್‌), ಕೆ.ವಿ ಅನೀಶ್, ವಾಸುಕಿ ಕೌಶಿಕ್, ವೈಶಾಖ್ ವಿಜಯಕುಮಾರ್, ಕಿಶನ್ ಬೆದರೆ, ಹಾರ್ದಿಕ್ ರಾಜ್, ವಿದ್ವತ್ ಕಾವೇರಪ್ಪ, ಎಂ. ವೆಂಕಟೇಶ್, ಸುಜಯ್.ಎಸ್‌(ಕೀಪರ್‌), ಕೆ.ಶಶಿಕುಮಾರ್, ಧೀರಜ್ ಗೌಡ.