ಸಾರಾಂಶ
ದುಬೈ: ಶಮಾರ್ ಜೋಸೆಫ್ ಐಸಿಸಿ ತಿಂಗಳ ಕ್ರಿಕೆಟಿಗ ಪ್ರಶಸ್ತಿ ಪಡೆದ ವೆಸ್ಟ್‌ಇಂಡೀಸ್‌ನ ಮೊದಲ ಕ್ರಿಕೆಟಿಗ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. ಕಳೆದ ತಿಂಗಳು ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ತೋರಿದ ಸಾಹಸಕ್ಕೆ ಜೋಸೆಫ್‌ಗೆ ಈ ಗೌರವ ಒಲಿದಿದೆ.3ನೇ ಟಿ20: 37 ರನ್ ಜಯ ಸಾಧಿಸಿದ ವಿಂಡೀಸ್‌ಪರ್ಥ್: ಆ್ಯಂಡ್ರೆ ರಸೆಲ್ ಹಾಗೂ ಶೆರ್ಫಾನೆ ರುಥರ್‌ಫೋರ್ಡ್‌ರ ಸ್ಫೋಟಕ ಆಟದ ನೆರವಿನಿಂದ ಆಸ್ಟ್ರೇಲಿಯಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ವಿಂಡೀಸ್ 37 ರನ್‌ಗಳ ಜಯ ಸಾಧಿಸಿತು. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ ವೈಟ್‌ವಾಶ್ ಆಗುವುದರಿಂದ ಪಾರಾಯಿತು. ಸರಣಿ 2-1ರಲ್ಲಿ ಆಸೀಸ್ ಪಾಲಾಯಿತು. ಮೊದಲು ಬ್ಯಾಟ್ ಮಾಡಿದ ವಿಂಡೀಸ್, 80 ರನ್‌ಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ರಸೆಲ್ ಹಾಗೂ ರುಥರ್‌ಫೋರ್ಡ್ 6ನೇ ವಿಕೆಟ್‌ಗೆ 149 ರನ್ ಸೇರಿಸಿದರು. ರಸೆಲ್ 29 ಎಸೆತದಲ್ಲಿ 71 ರನ್ ಸಿಡಿಸಿದರೆ, ರುಥರ್‌ಫೋರ್ಡ್ 40 ಎಸೆತದಲ್ಲಿ 67 ರನ್ ಚಚ್ಚಿದರು. ವಿಂಡೀಸ್ 6 ವಿಕೆಟ್‌ಗೆ 220 ರನ್ ಕಲೆಹಾಕಿತು. ಆಸ್ಟ್ರೇಲಿಯಾ 5 ವಿಕೆಟ್‌ಗೆ 183 ರನ್ ಗಳಿಸಿ ಸೋಲೊಪ್ಪಿಕೊಂಡಿತು.