ಸಾರಾಂಶ
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ದತ್ತಾಜೀರಾವ್ ಗಾಯಕ್ವಾಡ್ (95) ಮಂಗಳವಾರ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತಿದ್ದ ಅವರನ್ನು ಬರೋಡಾದ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ದತ್ತಾಜೀರಾವ್ ಗಾಯಕ್ವಾಡ್ (95) ಮಂಗಳವಾರ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತಿದ್ದ ಅವರನ್ನು ಬರೋಡಾದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ 12 ದಿನಗಳಿಂದ ಐಸಿಯುನಲ್ಲಿದ್ದ ಅವರು ಮಂಗಳವಾರ ಕೊನೆಯುಸಿರೆಳೆದರು. 2016ರಲ್ಲಿ 87ನೇ ವಯಸ್ಸಿನಲ್ಲಿ ನಿಧನರಾದ ದೀಪಕ್ ಶೋಧನ್ ನಂತರ ದತ್ತಾ ಭಾರತದ ಅತ್ಯಂತ ಹಿರಿಯ ಕ್ರಿಕೆಟಿಗ ಎನಿಸಿದ್ದರು. 1952-61ರ ಅವಧಿಯಲ್ಲಿ ದತ್ತಾಜೀರಾವ್ 11 ಟೆಸ್ಟ್ ಪಂದ್ಯಗಳನ್ನಾಡಿದ್ದರು. ಭಾರತದ ಮಾಜಿ ನಾಯಕ, ಕೋಚ್ ಅಂಶುಮನ್ ಗಾಯಕ್ವಾಡ್ ಇವರ ಪುತ್ರ.