ಹ್ಯಾಮರ್‌ ಥ್ರೋ ಪಟು ರಚನಾ 12 ವರ್ಷ ಬ್ಯಾನ್‌

| Published : Feb 14 2024, 02:17 AM IST

ಸಾರಾಂಶ

ಡೋಪಿಂಗ್‌ ಪರೀಕ್ಷೆಯಲ್ಲಿ ಹಲವು ಬಾರಿ ಅನುತ್ತೀರ್ಣರಾದ ಕಾರಣ ಹ್ಯಾಮರ್‌ ಥ್ರೋ ಪಟು ರಚನಾ ಕುಮಾರಿಗೆ ಅಂತಾರಾಷ್ಟ್ರೀಯ ಅಥ್ಲೀಟ್‌ಗಳ ಸಮಗ್ರತೆ ಘಟಕ (ಎಐಯು) 12 ವರ್ಷ ನಿಷೇಧ ಹೇರಿದೆ.

ನವದೆಹಲಿ: ಡೋಪಿಂಗ್‌ ಪರೀಕ್ಷೆಯಲ್ಲಿ ಹಲವು ಬಾರಿ ಅನುತ್ತೀರ್ಣರಾದ ಕಾರಣ ಹ್ಯಾಮರ್‌ ಥ್ರೋ ಪಟು ರಚನಾ ಕುಮಾರಿಗೆ ಅಂತಾರಾಷ್ಟ್ರೀಯ ಅಥ್ಲೀಟ್‌ಗಳ ಸಮಗ್ರತೆ ಘಟಕ (ಎಐಯು) 12 ವರ್ಷ ನಿಷೇಧ ಹೇರಿದೆ. 30 ವರ್ಷದ ರಚನಾ 2ನೇ ಬಾರಿಗೆ ಉದ್ದೀಪನ ಮದ್ದು ಸೇವನೆ ವಿರುದ್ಧದ ನಿಯಮ ಉಲ್ಲಂಘಿಸಿರುವ ಕಾರಣ ಕಠಿಣ ಶಿಕ್ಷೆ ವಿಧಿಸಲಾಗಿದೆ. ಅವರ ನಿಷೇಧ ಅವಧಿ 2023ರ ಸೆ.24ರಿಂದ ಜಾರಿಯಾಗಿದೆ. ರಚನಾ ರಾಷ್ಟ್ರೀಯ ಮಟ್ಟದಲ್ಲಿ ಕೆಲ ಪದಕಗಳನ್ನು ಗೆದ್ದಿದ್ದು, ಯಾವುದೇ ಅಂ.ರಾ. ಪದಕ ಗೆದ್ದಿಲ್ಲ. ಕಳೆದ ಏಷ್ಯನ್‌ ಗೇಮ್ಸ್‌ನಲ್ಲಿ ಅವರು 9ನೇ ಸ್ಥಾನ ಪಡೆದಿದ್ದರು.

2ನೇ ಟೆಸ್ಟ್‌: ಮೊದಲ ದಿನ ನ್ಯೂಜಿಲೆಂಡ್‌ ಪ್ರಾಬಲ್ಯ

ಹ್ಯಾಮಿಲ್ಟನ್‌ (ನ್ಯೂಜಿಲೆಂಡ್‌): ನ್ಯೂಜಿಲೆಂಡ್‌ನ ಆಲ್ರೌಂಡರ್‌ ರಚಿನ್‌ ರವೀಂದ್ರ ಅವರ ಬಿಗುವಿನ ಬೌಲಿಂಗ್‌ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ, ಇಲ್ಲಿ ನಡೆಯುತ್ತಿರುವ 2ನೇ ಟೆಸ್ಟ್‌ನ ಮೊದಲ ದಿನದಂತ್ಯಕ್ಕೆ 6 ವಿಕೆಟ್‌ಗೆ 220 ರನ್‌ ಕಲೆಹಾಕಿದೆ. 21 ಓವರ್‌ ಬೌಲ್‌ ಮಾಡಿದ ರಚಿನ್‌, ಕೇವಲ 33 ರನ್‌ ನೀಡಿ 3 ಪ್ರಮುಖ ವಿಕೆಟ್‌ ಕಿತ್ತರು. ರ್‍ಯಾನ್‌ ಡಿ ಸ್ವಾರ್ಡ್‌ 55 ಹಾಗೂ ಶಾನ್‌ ವಾನ್‌ ಬರ್ಗ್‌ 34ನೇ ರನ್‌ ಗಳಿಸಿ 2ನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.