ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರುವಿಶ್ವ ರ್‍ಯಾಂಕಿಂಗ್‌ನಲ್ಲಿ 100ರೊಳಗೆ ಪ್ರವೇಶಿಸಿರುವ ಭಾರತದ ಸುಮಿತ್ ನಗಾಲ್ ಬೆಂಗಳೂರು ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಶುಭಾರಂಭ ಮಾಡಿದ್ದಾರೆ. ಮಂಗಳವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಸುಮಿತ್, ಫ್ರಾನ್ಸ್‌ನ ಜೆಫ್ರಿ ಬ್ಲ್ಯಾನ್‌ಕಾನೆಕ್ಸ್ ವಿರುದ್ಧ 6-2, 6-2 ನೇರ ಸೆಟ್‌ಗಳಲ್ಲಿ ಸುಲಭ ಜಯ ಸಾಧಿಸಿದರು.ಟೂರ್ನಿಯಲ್ಲಿ 2ನೇ ಶ್ರೇಯಾಂಕಿತನಾಗಿ ಆಡುತ್ತಿರುವ 26 ವರ್ಷದ ಸುಮಿತ್, 2ನೇ ಸುತ್ತಿನಲ್ಲಿ ಹಾಕಾಂಗ್‌ನ ಕೊಲ್‌ಮನ್ ವಾಂಗ್ ವಿರುದ್ಧ ಸೆಣಸಲಿದ್ದಾರೆ. ವಾಂಗ್ ಮೊದಲ ಸುತ್ತಿನಲ್ಲಿ ಬೆಲ್ಜಿಯಂನ ರಾಫೆಲ್ ಕಾಲಿಗ್ನೊನ್ ವಿರುದ್ಧ 6-4, 7-6(4)ರಲ್ಲಿ ಜಯಿಸಿದರು.ಮಾಜಿ ವಿಶ್ವ ನಂ.25 ಕೆನಡಾದ ವಸೆಕ್ ಪಾಸ್ಪಿಸಿಲ್ ಮೊದಲ ಸುತ್ತಿನಲ್ಲಿ ಉಕ್ರೇನ್‌ನ ಎರಿಕ್ ವಾನ್ಶೆಲ್‌ಬೊಯ್ಮ್ ವಿರುದ್ಧ 7-6, 3-6, 6-4 ಸೆಟ್‌ಗಳ ಪ್ರಯಾಸದ ಜಯ ಸಾಧಿಸಿದರು.ಡಬಲ್ಸ್‌ನಲ್ಲಿ ಭಾರತದ ಸಾಯಿ ಕಾರ್ತಿಕ್ ರೆಡ್ಡಿ ಹಾಗೂ ಮನೀಶ್ ಸುರೇಶ್ ಕುಮಾರ್ ಮೊದಲ ಸುತ್ತಿನಲ್ಲಿ 2-6, 6-7ರಲ್ಲಿ ಫ್ರಾನ್ಸ್‌ನ ಕಾನ್ಸ್ಟೆಟಿನ್ ಹಾಗೂ ಮ್ಯಾಕ್ಸಿಮ್ ವಿರುದ್ಧ ಸೋಲುಂಡಿತು.