ಭಾರತೀಯ ಕುಸ್ತಿ ಫೆಡರೇಶನ್‌ ಮೇಲಿನ ನಿಷೇಧ ತೆರವುಗೊಳಿಸಿದ ವಿಶ್ವ ಕುಸ್ತಿ ಸಂಸ್ಥೆ

| Published : Feb 14 2024, 02:15 AM IST

ಭಾರತೀಯ ಕುಸ್ತಿ ಫೆಡರೇಶನ್‌ ಮೇಲಿನ ನಿಷೇಧ ತೆರವುಗೊಳಿಸಿದ ವಿಶ್ವ ಕುಸ್ತಿ ಸಂಸ್ಥೆ
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವ ಕುಸ್ತಿ ಸಂಸ್ಥೆ (ಯುಡಬ್ಲ್ಯುಡಬ್ಲ್ಯು) ಭಾರತೀಯ ಕುಸ್ತಿ ಫೆಡರೇಶನ್‌(ಡಬ್ಲ್ಯುಎಫ್‌ಐ) ಮೇಲೆ ಹೇರಿದ್ದ ನಿಷೇಧವನ್ನು ತೆರವುಗೊಳಿಸಿದ್ದಲ್ಲದೇ, ಡಬ್ಲ್ಯುಎಫ್‌ಐನ ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್‌ ಸಿಂಗ್‌ ವಿರುದ್ಧ ತೀವ್ರ ಹೋರಾಟ ನಡೆಸಿದ್ದ ಕುಸ್ತಿಪಟುಗಳ ರಕ್ಷಣೆಗೂ ಮುಂದಾಗಿದೆ.

ನವದೆಹಲಿ: ವಿಶ್ವ ಕುಸ್ತಿ ಸಂಸ್ಥೆ (ಯುಡಬ್ಲ್ಯುಡಬ್ಲ್ಯು) ಭಾರತೀಯ ಕುಸ್ತಿ ಫೆಡರೇಶನ್‌(ಡಬ್ಲ್ಯುಎಫ್‌ಐ) ಮೇಲೆ ಹೇರಿದ್ದ ನಿಷೇಧವನ್ನು ತೆರವುಗೊಳಿಸಿದ್ದಲ್ಲದೇ, ಡಬ್ಲ್ಯುಎಫ್‌ಐನ ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್‌ ಸಿಂಗ್‌ ವಿರುದ್ಧ ತೀವ್ರ ಹೋರಾಟ ನಡೆಸಿದ್ದ ಕುಸ್ತಿಪಟುಗಳ ರಕ್ಷಣೆಗೂ ಮುಂದಾಗಿದೆ. ಬ್ರಿಜ್ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದ ವಿನೇಶ್‌ ಫೋಗಟ್‌, ಭಜರಂಗ್‌ ಪೂನಿಯಾ, ಸಾಕ್ಷಿ ಮಲಿಕ್‌ ಸೇರಿ ಇತರರ ವಿರುದ್ಧ ಯಾವುದೇ ತಾರತಮ್ಯ ತೋರುವಂತಿಲ್ಲ. ಒಲಿಂಪಿಕ್ಸ್‌ ಸೇರಿ ಜಾಗತಿಕ ಮಟ್ಟದ ಟೂರ್ನಿಗಳಿಗೆ ಆಯ್ಕೆ ಮಾಡುವಾಗ ಈ ಕುಸ್ತಿಪಟುಗಳನ್ನು ಕಡೆಗಣಿಸುವಂತಿಲ್ಲ ಎಂದು ವಿಶ್ವ ಕುಸ್ತಿ ಸಂಸ್ಥೆ, ಡಬ್ಲ್ಯುಎಫ್‌ಐಗೆ ಎಚ್ಚರಿಸಿದೆ. ಡಬ್ಲ್ಯುಎಫ್‌ಐ ಚುನಾವಣೆ ನಡೆಸದ ಕಾರಣ ಕಳೆದ ವರ್ಷ ಆ.23ರಂದು ನಿಷೇಧ ಹೇರಲಾಗಿತ್ತು. ಇದೀಗ ನಿಷೇಧ ತೆರವುಗೊಂಡಿರುವ ಕಾರಣ ಭಾರತೀಯ ಕುಸ್ತಿಪಟುಗಳು ಭಾರತದ ಧ್ವಜದಡಿ ಸ್ಪರ್ಧಿಸಬಹುದಾಗಿದೆ.