ಸಿಡಿಲು ಬಡಿದು ಪಂದ್ಯದ ವೇಳೆಯೇ ಫುಟ್ಬಾಲಿಗ ಸಾವು

| Published : Feb 14 2024, 02:18 AM IST / Updated: Feb 14 2024, 02:57 PM IST

ಸಿಡಿಲು ಬಡಿದು ಪಂದ್ಯದ ವೇಳೆಯೇ ಫುಟ್ಬಾಲಿಗ ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ಪಂದ್ಯದ ವೇಳೆ ಸಿಡಿಲು ಬಡಿದು ಫುಟ್ಬಾಲ್‌ ಆಟಗಾರನೊಬ್ಬ ಸಾವನ್ನಪ್ಪಿದ ಘಟನೆ ಇಂಡೋನೇಷ್ಯಾದ ಬಂಡುಂಗ್‌ನಲ್ಲಿ ನಡೆದಿದೆ.

ಬಂಡುಂಗ್‌(ಪಶ್ಚಿಮ ಜಾವಾ): ಪಂದ್ಯದ ವೇಳೆ ಸಿಡಿಲು ಬಡಿದು ಫುಟ್ಬಾಲ್‌ ಆಟಗಾರನೊಬ್ಬ ಸಾವನ್ನಪ್ಪಿದ ಘಟನೆ ಇಂಡೋನೇಷ್ಯಾದ ಬಂಡುಂಗ್‌ನಲ್ಲಿ ನಡೆದಿದೆ. 

ಇಲ್ಲಿನ ಸ್ಥಳೀಯ ಕ್ಲಬ್‌ಗಳಾದ ಎಫ್‌ಸಿ ಬಂಡುಂಗ್‌ ಹಾಗೂ ಎಫ್‌ಬಿಐ ಸುಬಾಂಗ್‌ ನಡುವಿನ ಸ್ನೇಹಾರ್ಥ ಪಂದ್ಯದ ವೇಳೆ ಸಿಡಿಲು ಬಡಿದು 35 ವರ್ಷದ ಆಟಗಾರ ಕುಸಿದು ಬಿದ್ದಿದ್ದಾನೆ. 

ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಆತ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಘಟನೆಯ ವಿಡಿಯೋವನ್ನು ಸಾಮಾಜಿಕ ತಾಣಗಳಲ್ಲಿ ವೀಕ್ಷಿಸಿದವರು ಆಘಾತಕ್ಕೊಳಗಾಗಿದ್ದಾರೆ. 

ಈ ರೀತಿ ಸಿಡಿಲು ಬಡಿದು ಫುಟ್ಬಾಲ್‌ ಆಟಗಾರ ಸಾವನ್ನಪ್ಪಿದ ಘಟನೆ ಕಳೆದ ವರ್ಷ ಇಂಡೋನೇಷ್ಯಾದ ಅಂಡರ್‌-13 ಪಂದ್ಯಾವಳಿ ವೇಳೆ ನಡೆದಿತ್ತು. ಯುವ ಆಟಗಾರನೊಬ್ಬ ಮೈದಾನದಲ್ಲೇ ಸಾವನ್ನಪ್ಪಿದ್ದ. 

ಇನ್ನು ಕಳೆದ ವರ್ಷ ಬ್ರೆಜಿಲ್‌ನ 21 ವರ್ಷದ ಫುಟ್ಬಾಲಿಗ ಹೆನ್ರಿಕೆ ಡಿ ಲಿಮಾ ಇದೇ ರೀತಿ ಸಿಡಿಲು ಬಡಿದು ಪ್ರಾಣ ಕಳೆದುಕೊಂಡಿದ್ದರು. 

ಅವರು ತಮ್ಮ ತಂಡ ಉನಾಯೊ ಜೈರೆನ್ಸೆ ಪರ ಪರಾನಾದಲ್ಲಿ ಆಡುವಾಗ ಘಟನೆ ಸಂಭವಿಸಿತ್ತು.