ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಬೌಲ್‌ ಮಾಡಿದ ಸ್ಮೃತಿ ಮಂಧನಾ. ಮೊದಲ ಓವರ್‌ನಲ್ಲೇ ವಿಕೆಟ್‌. ಅರೇ ಇದು ಕೊಹ್ಲಿ ಬೌಲಿಂಗ್‌ ಮಾಡ್ಹಂಗೇ ಇದ್ಯಲ್ಲಾ ಎಂದು ಖುಷಿ ಪಟ್ಟ ಅಭಿಮಾನಿಗಳು.

ಬೆಂಗಳೂರು: ‘ವಿರಾಟ್‌ ಕೊಹ್ಲಿಗೆ ಬೌಲಿಂಗ್‌ ಕೊಡಿ’ ಎಂದು ಪಂದ್ಯಗಳ ವೇಳೆ ಕ್ರೀಡಾಂಗಣಗಳಲ್ಲಿ ನೆರೆದಿರುವ ಅಭಿಮಾನಿಗಳು ಆಗಾಗ ಕೇಳುವುದನ್ನು ನೋಡಿದ್ದೇವೆ. ಇದಕ್ಕೆ ಕಾರಣ, ಅವರ ಬೌಲಿಂಗ್‌ ಶೈಲಿ ವಿಭಿನ್ನವಾಗಿರುವುದು.

ಜೊತೆಗೆ ಕೋಚ್‌ ದ್ರಾವಿಡ್‌ 2023ರ ಏಕದಿನ ವಿಶ್ವಕಪ್‌ ವೇಳೆ ಕೊಹ್ಲಿಯ ಅರೆಕಾಲಿಕ ಬೌಲಿಂಗ್‌ ಬಗ್ಗೆ ಎದುರಾಳಿಗಳು ಎಚ್ಚರದಿಂದಿರಬೇಕು ಎಂದಿದ್ದನ್ನು ನೆನಪಿಸಿಕೊಳ್ಳಬಹುದು.

ಇದೀಗ ಭಾರತ ಮಹಿಳಾ ತಂಡದ ತಾರಾ ಆಟಗಾರ್ತಿ ಸ್ಮೃತಿ ಮಂಧನಾ, ಬುಧವಾರ ಅಂ.ರಾ. ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಬೌಲ್‌ ಮಾಡಿದರು. ಅವರ ಬೌಲಿಂಗ್‌ ಶೈಲಿಯೂ ಕೊಹ್ಲಿಯ ಬೌಲಿಂಗ್ ಶೈಲಿಯನ್ನೇ ಹೋಲುತ್ತಿದ್ದು ಸಾಮಾಜಿಕ ತಾಣಗಳಲ್ಲಿ ಇವರಿಬ್ಬರ ಬೌಲಿಂಗ್‌ನ ವಿಡಿಯೋ ಹಾಗೂ ಫೋಟೋಗಳು ವೈರಲ್‌ ಆಗಿವೆ. ಸ್ಮೃತಿ ತಾವೆಸೆದ ಮೊದಲ ಓವರ್‌ನ 2ನೇ ಎಸೆತದಲ್ಲೇ ವಿಕೆಟ್‌ ಕಿತ್ತರು ಎನ್ನುವುದು ವಿಶೇಷ.