ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು ಕೆಎಸ್ಎಲ್‌ಟಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬೆಂಗಳೂರೂ ಐಟಿಎಫ್ ಮಹಿಳಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ಡಬಲ್ಸ್‌ನಲ್ಲಿ ಶ್ರೀವಲ್ಲಿ ರಶ್ಮಿಕಾ ಭಾಮಿಪತಿ ಹಾಗೂ ವೈದೇಹಿ ಚೌಧರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತೀಯ ಜೋಡಿಯು, ಭಾರತದ ರುತುಜಾ ಭೋಸಲೆ ಮತ್ತು ಚೈನೀಸ್ ತೈಪೆಯ ಎನ್ ಶುವೊ ಲಿಯಾಂಗ್ ಅವರನ್ನು 7-5, 6-0 ನೇರ ಸೆಟ್ ಗಳಿಂದ ಸೋಲಿಸಿತು.ಮಂಗಳವಾರ ಇಲ್ಲಿ ನಡೆದರಿತರ ಅಂತಿಮ 16ರ ಪಂದ್ಯಗಳಲ್ಲಿ ಶರ್ಮದಾ ಬಾಲು ಮತ್ತು ಶ್ರಾವ್ಯ ಶಿವಾನಿ ಚಿಲಕಲಪುಡಿ ಅವರು ಸಾಯಿ ಸಂಹಿತಾ ಚಮರ್ತಿ ಮತ್ತು ಸೋಹಾ ಸಾದಿಕ್ ಜೋಡಿಯನ್ನು 7-6 (4), 6-4 ಸೆಟ್ ಗಳಿಂದ ಸೋಲಿಸಿದರು.ಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶಿಸಿದ ಮತ್ತೊಬ್ಬ ಭಾರತೀಯ ಆಟಗಾರ್ತಿ ಪ್ರಾರ್ಥನಾ ಜಿ ಥೋಂಬರೆ ಅವರು ಅನಸ್ತಾಸಿಯಾ ಟಿಖೋನೊವಾ ಅವರೊಂದಿಗೆ ಸೇರಿಕೊಂಡು, ವೈಲ್ಡ್ ಕಾರ್ಡ್ ಮೂಲಕ ಪ್ರವೇಶಿಸಿದ್ದ ಹುಮೆರಾ ಬಹರ್ಮಸ್ ಮತ್ತು ಸೌಮ್ಯ ವಿಗ್ ಅವರನ್ನು 6-4, 6-3 ಸೆಟ್ ಗಳಿಂದ ಸೋಲಿಸಿದರು.ಸಹಜಾಗೆ ಸೋಲು: ದಿನದ ಎರಡು ಸಿಂಗಲ್ಸ್ ಪಂದ್ಯದಲ್ಲಿ ಜಪಾನಿನ ಸಕುರಾ ಹೊಸೊಗಿ ಅವರು ಇಟಲಿಯ ಕ್ಯಾಮಿಲ್ಲಾ ರೊಸಾಟೆಲ್ಲೊ ವಿರುದ್ಧ 6-3, 6-7 (5), 6-3 ಸೆಟ್‌ಗಳಿಂದ ಗೆದ್ದರೆ, ಸ್ಲೋವಾಕಿಯಾದ ದಲಿಲಾ ಜಕುಪೊವಿಕ್ 6-2 ಸೆಟ್ ಗಳಿಂದ ಸಹಜಾ ಯಮಲಪಲ್ಲಿ ವಿರುದ್ಧ ಗೆದ್ದರು.ಇದಕ್ಕೂ ಮುನ್ನ ಮಂಗಳವಾರ ನಡೆದ ಟೂರ್ನಿಯ ಅಧಿಕೃತ ಉದ್ಘಾಟನಾ ಸಮಾರಂಭದಲ್ಲಿ ಬೆಂಗಳೂರಿನಲ್ಲಿರುವ ಆಸ್ಟ್ರೇಲಿಯಾದ ಕಾನ್ಸುಲ್ ಜನರಲ್ ಹಿಲರಿ ಮೆಕ್‌ಗೀಚಿ, ರಾಜ್ಯ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ ಹೆಪ್ಸಿಬಾ ರಾಣಿ, ಕೆಪಿಬಿ ಫ್ಯಾಮಿಲಿ ಟ್ರಸ್ಟ್‌ನ ಕೆ.ಪಿ.ಬಾಲರಜ್ ಸೇರಿದಂತೆ ಪ್ರಮುಖರು ಪಾಲ್ಗೊಂಡರು.