16 ವರ್ಷದಲ್ಲಿ ಪುರುಷರಿಗೆ ಸಿಗದ ಟ್ರೋಫಿ ಎರಡೇ ವರ್ಷದಲ್ಲಿ ಗೆದ್ದ ಮಹಿಳೆಯರು

| Published : Mar 18 2024, 01:46 AM IST / Updated: Mar 18 2024, 07:53 AM IST

16 ವರ್ಷದಲ್ಲಿ ಪುರುಷರಿಗೆ ಸಿಗದ ಟ್ರೋಫಿ ಎರಡೇ ವರ್ಷದಲ್ಲಿ ಗೆದ್ದ ಮಹಿಳೆಯರು
Share this Article
  • FB
  • TW
  • Linkdin
  • Email

ಸಾರಾಂಶ

ಆರ್‌ಸಿಬಿ ಪುರುಷರ ತಂಡ 2009, 2011 ಹಾಗೂ 2016ರಲ್ಲಿ ಪ್ರಶಸ್ತಿ ಸುತ್ತಿಗೇರಿದ್ದರೂ ರನ್ನರ್‌-ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಮಹಿಳಾ ತಂಡ ಚೊಚ್ಚಲ ಬಾರಿ ಫೈನಲ್‌ಗೇರಿದರೂ ಯಾವುದೇ ತಪ್ಪೆಸಗದೆ ಟ್ರೋಫಿಗೆ ಮುತ್ತಿಟ್ಟಿತು.

ನವದೆಹಲಿ: ಈ ವರೆಗೆ ಐಪಿಎಲ್‌ನ 16 ಆವೃತ್ತಿಗಳಲ್ಲಿ ಒಮ್ಮೆಯೂ ಆರ್‌ಸಿಬಿ ಟ್ರೋಫಿ ಗೆದ್ದಿಲ್ಲ. ಆದರೆ ಮಹಿಳಾ ತಂಡ 2ನೇ ಆವೃತ್ತಿಯಲ್ಲೇ ಕಪ್ ತನ್ನದಾಗಿಸಿಕೊಂಡಿತು. 

ಆರ್‌ಸಿಬಿ ಪುರುಷರ ತಂಡ 2009, 2011 ಹಾಗೂ 2016ರಲ್ಲಿ ಪ್ರಶಸ್ತಿ ಸುತ್ತಿಗೇರಿದ್ದರೂ ರನ್ನರ್‌-ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಮಹಿಳಾ ತಂಡ ಚೊಚ್ಚಲ ಬಾರಿ ಫೈನಲ್‌ಗೇರಿದರೂ ಯಾವುದೇ ತಪ್ಪೆಸಗದೆ ಟ್ರೋಫಿಗೆ ಮುತ್ತಿಟ್ಟಿತು.

ಫೈನಲ್‌ನಲ್ಲಿ ಹ್ಯಾಟ್ರಿಕ್‌ ಸೋಲು: ಐಪಿಎಲ್‌ ಹಾಗೂ ಡಬ್ಲ್ಯುಪಿಎಲ್‌ನಲ್ಲಿ ಡೆಲ್ಲಿ ತಂಡಕ್ಕೆ ಫೈನಲ್‌ನಲ್ಲಿದು ಸತತ 3ನೇ ಸೋಲು. ಪುರುಷರ ತಂಡ ಐಪಿಎಲ್‌ನಲ್ಲಿ 2022ರಲ್ಲಿ ಫೈನಲ್‌ನಲ್ಲಿ ಸೋತಿತ್ತು. 

ಮಹಿಳಾ ತಂಡ ಕಳೆದ ವರ್ಷ ಡಬ್ಲ್ಯುಪಿಎಲ್‌ನಲ್ಲಿ ಪ್ರಶಸ್ತಿ ಸುತ್ತಿಗೇರಿದ್ದರೂ ಮುಂಬೈ ವಿರುದ್ಧ ಪರಾಭವಗೊಂಡಿತು. ಈ ಬಾರಿ ಆರ್‌ಸಿಬಿ ವಿರುದ್ಧ ಸೋತು ಪ್ರಶಸ್ತಿ ಗೆಲ್ಲುವ 3ನೇ ಅವಕಾಶವನ್ನೂ ಮಿಸ್‌ ಮಾಡಿಕೊಂಡಿತು.

ಫೈನಲ್‌ ಪಂದ್ಯದ ಟರ್ನಿಂಗ್‌ ಪಾಯಿಂಟ್‌: ಪವರ್‌-ಪ್ಲೇ ಮುಕ್ತಾಯಕ್ಕೆ ವಿಕೆಟ್‌ ನಷ್ಟವಿಲ್ಲದೆ 61 ರನ್‌ ಗಳಿಸಿದ್ದ ಡೆಲ್ಲಿ 180ರ ಗಡಿ ದಾಟುವುದರ ಎಲ್ಲಾ ಸಾಧ್ಯತೆಗಳಿತ್ತು. 

ಆದರೆ 8ನೇ ಓವರ್‌ನಲ್ಲಿ ಸೋಫಿ ಮೋಲಿನ್ಯುಕ್ಸ್‌ 4 ಎಸೆತಗಳ ಅಂತರದಲ್ಲಿ ಶಫಾಲಿ, ಜೆಮಿಮಾ, ಅಲೈಸ್‌ ಕ್ಯಾಪ್ಸಿ ವಿಕೆಟ್‌ ಕಿತ್ತು ಪಂದ್ಯದ ಗತಿಯನ್ನೇ ಬದಲಿಸಿದರು. ಆ ಬಳಿಕ ಯಾವ ಬ್ಯಾಟರ್‌ಗೂ ಕ್ರೀಸ್‌ನಲ್ಲಿ ನೆಲೆಯೂರಲು ಬಿಡದೆ ಆರ್‌ಸಿಬಿ ಪಂದ್ಯವನ್ನು ತನ್ನದಾಗಿಸಿಕೊಂಡಿತು.