ಸಾರಾಂಶ
ಬಹುನಿರೀಕ್ಷಿತ 17ನೇ ಆವೃತ್ತಿ ಐಪಿಎಲ್‌ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ಅಭ್ಯಾಸ ಆರಂಭಿಸಿದೆ.
ಬೆಂಗಳೂರು: ಬಹುನಿರೀಕ್ಷಿತ 17ನೇ ಆವೃತ್ತಿ ಐಪಿಎಲ್‌ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ಅಭ್ಯಾಸ ಆರಂಭಿಸಿದೆ.
ನಾಯಕ ಫಾಫ್ ಡು ಪ್ಲೆಸಿ ಸೇರಿದಂತೆ ಕೆಲ ಆಟಗಾರರು ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೆಟ್ ಅಭ್ಯಾಸದಲ್ಲಿ ತೊಡಗಿಸಿಕೊಂಡರು.
ಕನ್ನಡಿಗ ವೇಗಿ ವಿಜಯ್‌ಕುಮಾರ್ ವೈಶಾಖ್, ಸುಯಾಶ್ ಪ್ರಭುದೇಸಾಯಿ, ವೆಸ್ಟ್‌ಇಂಡೀಸ್‌ನ ಅಲ್ಜಾರಿ ಜೋಸೆಫ್ ಸೇರಿದಂತೆ ಇನ್ನೂ ಕೆಲ ಆಟಗಾರರು ಅಭ್ಯಾಸದ ವೇಳೆ ಕಾಣಿಸಿಕೊಂಡರು.
ಆದರೆ ತಂಡದ ಪ್ರಮುಖ ಆಟಗಾರ ವಿರಾಟ್ ಕೊಹ್ಲಿ ಇನ್ನಷ್ಟೇ ತಂಡ ಕೂಡಿಕೊಳ್ಳಬೇಕಿದೆ. ಇಂಗ್ಲೆಂಡ್ ವಿರುದ್ಧ ಸರಣಿಗೂ ಗೈರಾಗಿದ್ದ ಕೊಹ್ಲಿ ಇತ್ತೀಚೆಗಷ್ಟೇ 2ನೇ ಮಗುವಿಗೆ ತಂದೆಯಾಗಿದ್ದರು.
ಕೆಲ ತಿಂಗಳುಗಳಿಂದ ಕ್ರಿಕೆಟ್‌ನಿಂದ ದೂರ ಉಳಿದಿರುವ ಕೊಹ್ಲಿ ಈ ವಾರಾಂತ್ಯದ ವೇಳೆಗೆ ತಂಡ ಕೂಡಿ ಅಭ್ಯಾಸ ಆರಂಭಿಸುವ ನಿರೀಕ್ಷೆಯಿದೆ.
ಆರ್‌ಸಿಬಿ ಈ ಬಾರಿ ಐಪಿಎಲ್‌ನ ಉದ್ಘಟಾನಾ ಪಂದ್ಯದಲ್ಲೇ ಚೆನ್ನೈ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ. ಈ ಪಂದ್ಯಕ್ಕೆ ಚೆನ್ನೈ ಆತಿಥ್ಯ ವಹಿಸಲಿದೆ. ಬಳಿಕ ಮಾ.25ಕ್ಕೆ ಪಂಜಾಬ್ ವಿರುದ್ಧ ತವರಿನಲ್ಲಿ ತನ್ನ ಮೊದಲ ಪಂದ್ಯವಾಡಲಿದೆ.