ಸಾರಾಂಶ
ನವದೆಹಲಿ: ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವಿನ ಹೈವೋಲ್ಟೇಜ್ ಕದನದ ಮೂಲಕ ಮಾ.22ರಂದು ಬಹುನಿರೀಕ್ಷಿತ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ಗೆ ಚಾಲನೆ ಸಿಗಲಿದೆ.
ಗುರುವಾರ ಬಿಸಿಸಿಐ ಟೂರ್ನಿಯ ಮೊದಲ ಹಂತದ ವೇಳಾಪಟ್ಟಿ ಪ್ರಕಟಿಸಿತು. ಲೋಕಸಭೆ ಚುನಾವಣೆ ಕಾರಣಕ್ಕೆ ಈಗ 17 ದಿನಗಳ, ಒಟ್ಟು 21 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಅಂತಿಮಗೊಳಿಸಿದೆ.
ಚುನಾವಣೆ ದಿನಾಂಕ ಘೋಷಣೆ ಬಳಿಕ ಬಿಸಿಸಿಐ ಉಳಿದ ಪಂದ್ಯಗಳ ವೇಳಾಪಟ್ಟಿಯನ್ನು ಪ್ರಕಟಿಸಲಿದೆ. ಉದ್ಘಾಟನಾ ಪಂದ್ಯಕ್ಕೆ ಚೆನ್ನೈನ ಚೆಪಾಕ್ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾ.25ರಂದು ಈ ಬಾರಿಯ ಮೊದಲ ಪಂದ್ಯ ನಡೆಯಲಿದ್ದು, ಆರ್‌ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗಲಿವೆ.
ಟೂರ್ನಿಯ ಕೆಲ ದಿನ 2 ಪಂದ್ಯಗಳು ನಡೆಯಲಿದ್ದು, ಮೊದಲ ಪಂದ್ಯ ಸಂಜೆ 3.30ಕ್ಕೆ, 2ನೇ ಪಂದ್ಯ ರಾತ್ರಿ 7.30ಕ್ಕೆ ಆರಂಭಗೊಳ್ಳಲಿದೆ. ಆರ್‌ಸಿಬಿ ಹಾಗೂ ಚೆನ್ನೈ ನಡುವಿನ ಮೊದಲ ಪಂದ್ಯ ಉದ್ಘಾಟನಾ ಸಮಾರಂಭದ ಕಾರಣಕ್ಕೆ ರಾತ್ರಿ 8 ಗಂಟೆಗೆ ಶುರುವಾಗಲಿದೆ.
ಆರ್‌ಸಿಬಿ ಪಂದ್ಯಗಳ ವೇಳಾಪಟ್ಟಿ
ದಿನಾಂಕ: ಮಾ.22 ಎದುರಾಳಿ: ಚೆನ್ನೈ ಸ್ಥಳ: ಚೆನ್ನೈ ಸಮಯ: ರಾತ್ರಿ 8.00
ದಿನಾಂಕ: ಮಾ.25 ಎದುರಾಳಿ: ಪಂಜಾಬ್ ಸ್ಥಳ: ಬೆಂಗಳೂರು ಸಮಯ: ರಾತ್ರಿ 7.30
ದಿನಾಂಕ: ಮಾ.29 ಎದುರಾಳಿ: ಕೋಲ್ಕತಾ ಸ್ಥಳ: ಬೆಂಗಳೂರು ಸಮಯ: ರಾತ್ರಿ 7.30
ದಿನಾಂಕ: ಏ.2 ಎದುರಾಳಿ: ಲಖನೌ ಸ್ಥಳ: ಬೆಂಗಳೂರು ಸಮಯ: ರಾತ್ರಿ 7.30
ದಿನಾಂಕ: ಏ.6 ಎದುರಾಳಿ: ರಾಜಸ್ಥಾನ ಸ್ಥಳ: ಜೈಪುರ ಸಮಯ: ರಾತ್ರಿ 7.30
03 ಪಂದ್ಯ: ಮೊದಲ ಹಂತದಲ್ಲಿ ಬೆಂಗಳೂರಿನಲ್ಲಿ 3 ಪಂದ್ಯಗಳು ನಡೆಯಲಿವೆ.
ಡೆಲ್ಲಿ ಕ್ಯಾಪಿಟಲ್ಸ್ 2 ಪಂದ್ಯ ವಿಶಾಖಪಟ್ಟಣಂಗೆ ಶಿಫ್ಟ್
ನವದೆಹಲಿ: ಐಪಿಎಲ್‌ನ ಡೆಲ್ಲಿ ಕ್ಯಾಪಿಟಲ್ಸ್ ತಂಡದ ತವರಿನ 2 ಪಂದ್ಯಗಳು ಈ ಬಾರಿ ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಕ್ರೀಡಾಂಗಣದಲ್ಲಿ ನಡೆಯಲಿವೆ.
ಡೆಲ್ಲಿ ತನ್ನ ತವರು ಪಂದ್ಯಗಳನ್ನು ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಆಡುತ್ತದೆ. ಆದರೆ ಈ ಬಾರಿ ಮಹಿಳಾ ಐಪಿಎಲ್ ಫೈನಲ್ ಪಂದ್ಯ ಇದೇ ಈ ಕ್ರೀಡಾಂಗಣದಲ್ಲಿ ಮಾ.17ಕ್ಕೆ ನಡೆಯಲಿದೆ.
ಐಪಿಎಲ್ ಮಾ.22ಕ್ಕೆ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಪಿಚ್ ಸಿದ್ಧಪಡಿಸಲು ಕ್ಯುರೇಟರ್‌ಗಳಿಗೆ ಸಮಯ ಸಾಕಾಗದ ಕಾರಣ ಪಂದ್ಯಗಳನ್ನು ಸ್ಥಳಾಂತರಿಸಲಾಗಿದೆ.